
ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಈ ಬಾರಿ ಘಟಾನುಘಟಿ ನಾಯಕರು ಮಕಾಡೆ ಮಲಗಿದ್ದಾರೆ. ಕರ್ನಾಟಕದ ಫಲಿತಾಂಶ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಸಾಕಷ್ಟು ಮೀಮ್ಸ್ ಮತ್ತು ಟ್ರೋಲ್‌ಗಳು ಹರಿದಾಡುತ್ತಿವೆ. ಎಲ್ಲಾ ಕಡೆ ಕರ್ನಾಟಕ ಚುನಾವಣಾ ಫಲಿತಾಂಶದ್ದೇ ಚರ್ಚೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಸಂತಸ ಹೊರಹಾಕುತ್ತಿದ್ದಾರೆ. ಚಿತ್ರಸಾಹಿತಿ ಕವಿರಾಜ್ ಕೂಡ ಪ್ರತಿಕ್ರಿಯೆ ನೀಡಿ ಸಮಾಧಾನದ ಫಲಿತಾಂಶ ಎಂದು ಹೇಳಿದ್ದಾರೆ.
ಯಾವುದೇ ವಿಚಾರಗಳ ಬಗ್ಗೆಯಾದರೂ ಕವಿರಾಜ್ ತಕ್ಷಣ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕರ್ನಾಟಕ ಫಲಿತಾಂಶದ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ. 'ಕರ್ನಾಟಕ ರಾಜಕೀಯವನ್ನು ಹೊಲಸಾಗಿಸಿದ್ದ ಹಲವರು ಸೋಲುತ್ತಿದ್ದಾರೆ. ಅದೊಂದು ದೊಡ್ಡ ಸಮಾಧಾನ' ಎಂದು ಹೇಳಿದ್ದಾರೆ.
Karnataka Election Result 2023: ದೇವೇಗೌಡರ ಕುಟುಂಬದ ಆಶೀರ್ವಾದ ನನ್ನ ಮೇಲೆ ಇದೆ: ಸ್ವರೂಪ್
ಕವಿರಾಜ್ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಪರ ವಿರೋಧ ಚರ್ಚೆ ಮಾಡುತ್ತಿದ್ದಾರೆ. ಅನೇಕರು ಪ್ರತಿಕ್ರಿಯೆ ನೀಡಿ ಇದು ಕನ್ನಡಿಗರ ಗೆಲುವು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ನೀವು ಹೇಳಿದ ಮಾತು ನಿಜ ಎಂದು ಹೇಳುತ್ತಿದ್ದಾರೆ. 'ರಾಜಕಾರಣ ವ್ಯಾಪಾರಿಕರಣ ಮಾಡಲು ಹೊರಟರೆ. ಹೀಗೆ ಆಗೋದು' ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಕರ್ನಾಟಕ ರಾಜಕಾರಣ ಸ್ವಚ್ಛವಾಯಿತು ಎಂದು ಹೇಳಿದ್ದಾರೆ.
Karnataka Election 2023 Live: 130 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಭಾರಿ ಮುನ್ನಡೆ, ಸಂಭ್ರಮ ಎಲ್ಲೆಡೆ ...
ಮಾಧ್ಯಮ ಸಮೀಕ್ಷೆಗಳ ಬಗ್ಗೆಯೂ ಕವಿರಾಜ್ ಪ್ರತಿಕ್ರಿಯೆ ನೀಡಿದ್ದರು. 'ಇವೆಲ್ಲಾ predictions, ಮತದಾರ ಕೊಟ್ಟ ನಿಜವಾದ ತೀರ್ಪು ಮೇ 13ರಂದು ಗೊತ್ತಾಗುತ್ತೆ. ಅಲ್ಲೀವರೆಗೆ ಸುಮ್ನೇ ಹೀಗೆ ತೌಡು ಕುಟ್ಟೋದಷ್ಟೇ' ಎಂದು ಹೇಳಿದ್ದರು. ಕವಿರಾಜ್ ಮಾತಿಗೆ ಅನೇಕರು ಕಾಮೆಂಟ್ ಮಾಡಿ ಪರ ವಿರೋಧ ಚರ್ಚೆ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.