ಫ್ಲಾಪ್ ಸ್ಟಾರ್ ಪಟ್ಟ ಇದ್ರೂ ಕನ್ನಡತಿಗೆ ಒಲಿದ ಅದೃಷ್ಟ, ಬಿಗ್‌ಸ್ಟಾರ್‌ಗಳ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ!

Published : Feb 27, 2025, 03:24 PM ISTUpdated : Feb 27, 2025, 03:26 PM IST
ಫ್ಲಾಪ್ ಸ್ಟಾರ್ ಪಟ್ಟ ಇದ್ರೂ ಕನ್ನಡತಿಗೆ ಒಲಿದ ಅದೃಷ್ಟ, ಬಿಗ್‌ಸ್ಟಾರ್‌ಗಳ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ!

ಸಾರಾಂಶ

ಬಹುಭಾಷಾ ನಟಿ ಪೂಜಾ ಹೆಗ್ಡೆ ರಜನಿಕಾಂತ್ ಅಭಿನಯದ 'ಕೂಲಿ' ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ, ನಾಗಾರ್ಜುನ ಸೇರಿದಂತೆ ಹಲವು ತಾರೆಯರಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಚಿನ್ನದ ಕಳ್ಳಸಾಗಣೆ ಮಾಫಿಯಾದ ಕಥಾಹಂದರ ಹೊಂದಿರುವ ಈ ಚಿತ್ರವು ಆಕ್ಷನ್ ಮತ್ತು ಮನರಂಜನೆಯಿಂದ ಕೂಡಿರಲಿದೆ.

ವರದಿ: ಅಮಿತ್‌ ದೇಸಾಯಿ, ಏಷ್ಯಾನೆಟ್ ಸುವರ್ಣ ನ್ಯೂಸ್

ನಮ್ಮ ಕರಾವಳಿ ಬೆಡಗಿ, ಬಹುಭಾಷಾ ನಟಿ ಪೂಜಾ ಹೆಗ್ಡೆ ಮತ್ತೊಂದು ಬಿಗ್ ಸಿನಿಮಾದ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾ ಅಖಾಡಕ್ಕೆ ಪೂಜಾ ಅಫೀಷಿಯಲ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅದೆಷ್ಟೇ ಸಾಲು ಸಾಲು ಪ್ಲಾಫ್ ಕೊಟ್ರೂ ಕರಾವಳಿಯ ಬ್ಯೂಟಿಯ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ.

75ರ ನಟನ ಜೊತೆ ಪೂಜಾ ಹೆಗ್ಡೆ ಐಟಂ ಡ್ಯಾನ್ಸ್, ಸಾಂಗ್‌ ಹಿಟ್‌ ಆದ್ರೂ ಮತ್ತೆ ಫೇಮಸ್‌!

ತಲೈವಾ ಕೂಲಿ ಅಡ್ಡಾಕ್ಕೆ ಕರಾವಳಿ ಬ್ಯೂಟಿ ಎಂಟ್ರಿ!
ಹೌದು, ಪೂಜಾ ಹೆಗ್ಡೆ ಕೂಲಿ ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಈ ಸಿನಿಮಾದಲ್ಲಿ ಇಡೀ ಇಂಡಿಯನ್ ಸಿನಿಲೋಕದ ದಿಗ್ಗಜ ಕಲಾವಿದರೆಲ್ಲಾ ನಟಿಸುತ್ತಿದ್ದಾರೆ. ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್, ನಮ್ಮ ರಿಯಲ್ ಸ್ಟಾರ್ ಉಪೇಂದ್ರ, ಕಿಂಗ್ ನಾಗಾರ್ಜುನ ಅಕ್ಕಿನೇನಿ ಸೇರಿದಂತೆ ಕೂಲಿ ಅಡ್ಡಾದಲ್ಲಿ ಬಿಗ್ ಸ್ಟಾರ್‌ಗಳ ದಂಡೇ ಇದೆ. ಇಂತಹಃ ಮಲ್ಟಿಸ್ಟಾರರ್ ಮೂವಿಗೆ ಈಗ ಪೂಜಾ ಎಂಟ್ರಿ ಕೊಟ್ಟಿದ್ದಾರೆ.

ಲೋಕೇಶ್ ಕನಗರಾಜ್ ಡೈರೆಕ್ಟ್ ಮಾಡ್ತಾ ಇರೋ ರಜನಿಕಾಂತ್ ನಟನೆಯ 171ನೇ ಚಿತ್ರವಾಗಿರೋ ಈ ಮೆಗಾಪ್ರಾಜೆಕ್ಟ್‌ಗೆ ನಾಯಕಿ ಯಾರಾಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಅದಕ್ಕೆ ಉತ್ತರ ಕೊಟ್ಟಿರೋ ಸನ್ ಪಿಕ್ಚರ್ಸ್  ಪೂಜಾ ಹೆಡ್ಗೆ ಚಿತ್ರದ ನಾಯಕಿ ಅನ್ನೋದನ್ನ ಅನೌನ್ಸ್ ಮಾಡಿದೆ.

ಸ್ಲಿಮ್ ಹುಡುಗಿಯರು ಪೂಜಾ ಹೆಗ್ಡೆ ರೀತಿ ಕಾಣಲು ಈ 7 ಡಿಸೈನ್ ಸೀರೆ ಧರಿಸಿ

ಫ್ಲಾಪ್ ಸ್ಟಾರ್ ಪಟ್ಟ, ಆದ್ರೂ ಕೈ ಬಿಡದ ಅದೃಷ್ಟ!
ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಬೇರ್ಯಾವ ನಟಿಯರಿಗೂ ಇರದಷ್ಟು ಅದೃಷ್ಟದ ಬಲ ಪೂಜಾಗಿದೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಪೂಜಾ ನಟಿಸಿದ ಅದೆಷ್ಟೇ ಸಿನಿಮಾಗಳು ಪ್ಲಾಫ್ ಆಗಿ, ಪ್ಲಾಫ್ ಸ್ಟಾರ್ ಪಟ್ಟ ಅಂಟಿಕೊಂಡಿದ್ರೂ ಈಕೆಗೆ ಸಿಗೋ ಪ್ರಾಜೆಕ್ಟ್​​ಗಳೇನೂ ಕಮ್ಮಿ ಆಗಿಲ್ಲ. ಅದ್ರಲ್ಲೂ ಎಲ್ಲಾ ಭಾಷೆಯಲ್ಲೂ ಬಿಗ್ ಸ್ಟಾರ್​​ಗಳ ಸಿನಿಮಾಗಳೇ ಈ ಬ್ಯೂಟಿಗೆ ಸಿಕ್ತಾ ಬಂದಿವೆ.
 
ಸದ್ಯ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರದ ಜನನಾಯಗನ್​​ ಗ ಪೂಜಾನೇ ನಾಯಕಿಯಾಗಿದ್ದಾರೆ. ಸೂರ್ಯ ನಟನೆಯ ರೆಟ್ರೋ ಮೂವಿಗೂ ಪೂಜಾನೇ ಹೀರೋಯಿನ್. ಜೊತೆಗೆ ಕಾಂಚನಾ-4, ಮತ್ತೊಂದು ಬಾಲಿವುಡ್ ಪ್ರಾಜೆಕ್ಟ್ ಕೂಡ ಪೂಜಾ ಕೈಲಿದೆ.

ಇಷ್ಟೆಲ್ಲಾ ಚಿತ್ರಗಳ ಜೊತೆಗೆ ಈಗ ಕೂಲಿಯ ಬಿಗ್ ಆಫರ್ ಕೂಡ ಪೂಜಾ ಪಾಲಿಗೆ ಒಲಿದು ಬಂದಿದೆ. ಪೂಜಾ  ಅದೃಷ್ಟ ನೋಡಿದ ಇತರ ನಟಿಮಣಿಯರು ಈಕೆ ಅದ್ಯಾವ ಪೂಜೆ ಮಾಡ್ತಾಳೋ ಗೊತ್ತಿಲ್ಲ. ಈಕೆಗಿರೋ ಲಕ್ ನಮಗಿಲ್ಲವಲ್ಲ ಅಂತ ಹೊಟ್ಟೆ ಉರಿದುಕೊಳ್ತಾ ಇದ್ದಾರೆ. 

ಕೂಲಿ ಚಿತ್ರವು ಚಿನ್ನದ ಕಳ್ಳಸಾಗಣೆ ಮಾಫಿಯಾವನ್ನು ಕೇಂದ್ರೀಕರಿಸಿದ ಆಕ್ಷನ್-ಪ್ಯಾಕ್ಡ್ ಎಂಟರ್ಟೈನರ್ ಆಗಿದೆ . ಈ ಚಿತ್ರದಲ್ಲಿ ನಾಗಾರ್ಜುನ, ಉಪೇಂದ್ರ, ಶ್ರುತಿ ಹಾಸನ್, ಸತ್ಯರಾಜ್, ಸೌಬಿನ್ ಶಾಹಿರ್, ಸಂದೀಪ್ ಕಿಶನ್ ಮತ್ತು ರೇಬಾ ಮೋನಿಕಾ ಜಾನ್ ಸೇರಿದಂತೆ ಹಲವಾರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ ಅಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸನ್ ಪಿಕ್ಚರ್ಸ್ ನಿರ್ಮಿಸಿದ ಕೂಲಿ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಸಂಗೀತವನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್