
ಲವರ್ ಬಾಯ್ ಧ್ವನಿ, ನೋಡೋಕೆ ಮಾಸ್ ಲುಕ್, ಆದರೆ ಕಾಲಚಕ್ರದಲ್ಲಿ ಮಾತ್ರ ವೃದ್ಧ, ಸಂಸಾರಿ, ಪತ್ತೆದಾರಿ, ತಂದೆ... ಹೀಗೆ ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ವಸಿಷ್ಠ ಸಿಂಹ. ಟೀಸರ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ, ಸಸ್ಪೆನ್ಸ್, ಥ್ರಿಲ್ಲರ್, ಫ್ಯಾಮಿಲಿ ಸೆಂಟಿಮೆಂಟ್ ಸೈಕಾಲಜಿಕಲ್ ಎಲಿಮೆಂಟ್ಸ್ ಜೊತೆ ಪ್ರೀತಿ ಸೆಲೆಯನ್ನೂ ಒಡಲಲ್ಲಿ ಇರಿಸಿಕೊಂಡಿರುವ ಚಿತ್ರ ಇದಾಗಲಿದೆ.
'ಒಡೆಲಾ ರೈಲ್ವೇ ಸ್ಟೇಷನ್'; ತೆಲುಗು ಚಿತ್ರರಂಗಕ್ಕೆ ಹಾರಿದ ವಸಿಷ್ಠ ಸಿಂಹ
ಸುಮಂತ್ ಆ್ಯಕ್ಷನ್ ಕಟ್ ಹೇಳುವುದರೊಂದಿಗೆ ಈ ಚಿತ್ರದಲ್ಲಿ ಹಣ ಹೂಡಿದ್ದಾರೆ. ಕೆಲವು ದಿನಗಳ ಹಿಂದೆ ರಿಲೀಸ್ ಆದ ಹಾಡುಗಳಿಗೂ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಲಾಕ್‌ಡೌನ್‌ಗೂ ಮೊದಲೇ ಕಿಚ್ಚ ಸುದೀಪ್ ರಿಲೀಸ್ ಮಾಡಲಾಗಿದ್ದ ಮೊದಲ ಟೀಸರ್‌ಗಿಂತ ಎರಡನೇ ಬಾರಿ ರಿಲೀಸ್ ಆಗಿರುವ ಟೀಸರ್ ವಿಭಿನ್ನವಾಗಿದೆ.
ಮೊಬೈಲ್ ಬಳಸದ ನಟನಿಗೆ ಹುಡುಗಿಯರು ಪ್ರಪೋಸ್ ಮಾಡೋದ್ಹೇಗೆ? ಈ ವಿಡಿಯೋ ನೋಡಿ!
ರಶ್ಮಿ ಕೆ ಅವರು ನಿರ್ಮಿಸಿರುವ ‘ಕಾಲಚಕ್ರ’ ಚಿತ್ರದ ‘ತರಗೆಲೆ’ ಹಾಡಿಗೆ ಕೇಳುಗರು ಫಿದಾ ಆಗಿದ್ದಾರೆ. ಸಂತೋಷ್ ನಾಯಕ್ ಈ ಹಾಡನ್ನು ರಚಿಸಿದ್ದು, ಗಾಯಕ ಕೈಲಾಶ್ ಕೇರ್ ಅವರ ಕಂಠದಲ್ಲಿ ಹಾಡಿನ ಸಾಲುಗಳು ಮೂಡಿ ಬಂದಿವೆ. ಗುರುಕಿರಣ್ ಅವರು ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರವನ್ನು ಬೆಂಗಳೂರು ಮತ್ತು ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಸೂರಿ ಛಾಯಾಗ್ರಹಣ, ಬಿ ಎ ಮಧು ಸಂಭಾಷಣೆ ಈ ಚಿತ್ರಕ್ಕಿದೆ. ರಕ್ಷಾ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.