Sudeep: ಇಮೇಜ್ ಧಿಕ್ಕರಿಸಿ ಪರಭಾಷೆಯ ಆ ಚಿತ್ರದಲ್ಲಿ ನಟಿಸಿ ಪ್ರಶಸ್ತಿ ಪಡೆದು ಇತಿಹಾಸ ಸೃಷ್ಟಿಸಿದ ಕನ್ನಡದ ಸ್ಟಾರ್ ನಟ!

Published : Jan 26, 2026, 03:47 PM IST
Sudeep

ಸಾರಾಂಶ

ಆ ಪಾತ್ರದಲ್ಲಿ ನಟಿಸಿರುವ ನಟ ಅಪ್ಪಟ ಕನ್ನಡದ ಪ್ರತಿಭೆ. ಅದು 2012ರಲ್ಲಿ ಬಿಡುಗಡೆಯಾದ ಒಂದು ಫ್ಯಾಂಟಸಿ ಆಕ್ಷನ್ ಚಿತ್ರ. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಚಿತ್ರ ಅಂದು ಸೂಪರ್ ಹಿಟ್ ದಾಖಲಿದ್ದಷ್ಟೇ ಅಲ್ಲ, ಹೊಸ ಇತಿಹಾಸವನ್ನೇ ಬರೆಯಿತು.

ಕನ್ನಡ ನಟನ ಸೂಪರ್ ಹಿಟ್ ತೆಲುಗು ಸಿನಿಮಾ

ಸಿನಿಮಾ ಮಧ್ಯಮ ಜಗತ್ತಿನಾದ್ಯಂತ ತುಂಬಾ ಪ್ರಬಲವಾದ ಮಾಧ್ಯಮ. ಅದರಲ್ಲೂ ಕೆಲವು ಪಾತ್ರಗಳು ಪ್ರೇಕ್ಷಕರನ್ನು ಅದೆಷ್ಟು ಮಂತ್ರಮುಗ್ಧಗೊಳಿಸುತ್ತವೆ ಎಂದರೆ ಅದನ್ನು ಜಗತ್ತು ಯಾವತ್ತೂ ಮರೆಯುವುದಿಲ್ಲ. ಕೆಲವು ಸಿನಿಮಾಗಳಲ್ಲಿ ನಿರ್ದೇಶಕರು ಕೆಲವು ಪಾತ್ರಗಳನ್ನು ತುಂಬಾ ಚೆನ್ನಾಗಿ ಬರೆದಿರುತ್ತಾರೆ. ಆ ಪಾತ್ರಗಳಿಂದಾಗಿ ಆ ಸಿನಿಮಾ ಸೂಪರ್ ಹಿಟ್ ಆಗುತ್ತದೆ. ಅದರಿಂದ ಇಡೀ ಚಿತ್ರಕ್ಕೆ ಒಳ್ಳೆಯ ಹೆಸರು ಬರುತ್ತದೆ.

ಅವರಿಗಾಗಿಯೇ ಮಾಡಿದ ಪಾತ್ರ

ಅಂತಹ ಪಾತ್ರಗಳಲ್ಲಿ ನಟಿಸಿರುವ ನಟರ ಅಭಿನಯ ಹೇಗಿರುತ್ತದೆ ಎಂದರೆ ಬೇರೆ ಯಾರೂ ಆ ಪಾತ್ರ ಮಾಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಪರಿಣಾಮಕಾರಿ ಆಗಿರುತ್ತದೆ. ಪ್ರೇಕ್ಷಕರ ಮೇಲೆ ಆ ರೋಲ್ ಶಾಶ್ವತವಾದ ಪ್ರಭಾವವನ್ನು ಬೀರುತ್ತದೆ. ಅವರನ್ನು ಬಿಟ್ಟರೆ ಬೇರೆ ಯಾರೂ ಆ ಪಾತ್ರಗಳನ್ನು ಅಷ್ಟು ಚೆನ್ನಾಗಿ ಮಾಡಲು ಸಾಧ್ಯವಿಲ್ಲ, ಅವರಿಗಾಗಿಯೇ ಮಾಡಿದ ಪಾತ್ರ ಅದು ಎಂದೇ ಜನಜನಿತವಾಗುತ್ತದೆ. ಅಂತಹ ಒಂದು ಚಿತ್ರ ಹಾಗೂ ಪಾತ್ರದ ಬಗ್ಗೆ ಈ ಸ್ಟೋರಿಯಲ್ಲಿದೆ ನೋಡಿ...

ಹೌದು, ಆ ಪಾತ್ರದಲ್ಲಿ ನಟಿಸಿರುವ ನಟ ಅಪ್ಪಟ ಕನ್ನಡದ ಪ್ರತಿಭೆ. ಅದು 2012ರಲ್ಲಿ ಬಿಡುಗಡೆಯಾದ ಒಂದು ಫ್ಯಾಂಟಸಿ ಆಕ್ಷನ್ ಚಿತ್ರ. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಚಿತ್ರ ಅಂದು ಸೂಪರ್ ಹಿಟ್ ದಾಖಲಿದ್ದಷ್ಟೇ ಅಲ್ಲ, ಹೊಸ ಇತಿಹಾಸವನ್ನೇ ಬರೆಯಿತು. ಕಾರಣ, ಅಲ್ಲಿಯವರೆಗೆ ಅಂತಹ ಚಿತ್ರ ಜಗತ್ತಿನ ಯಾವುದೇ ಭಾಷೆಯಲ್ಲಿ ಬಂದಿರಲಿಲ್ಲ. ಆ ಚಿತ್ರದ ನಾಯಕರಾಗಿ ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಾಯಕಿಯಾಗಿ ಸಮಂತಾ ನಟಿಸಿದರು. ಚಿತ್ರದ ಹೆಸರು 'ಈಗ'.

ಈಗ ಚಿತ್ರದಲ್ಲಿ ಹಾಗಾಗಲಿಲ್ಲ

ತೆಲುಗು ಚಿತ್ರರಂಗದಲ್ಲಿ ಅಂದು ನಾನಿ-ಸಮಂತಾ ಟಾಪ್ ನಟರು. ಅವರು ನಟಿಸುವ ಯಾವುದೇ ಸಿನಿಮಾದಲ್ಲಿ ಅವರದ್ದೇ ಮೇಲುಗೈ ಎನ್ನುವಷ್ಟರ ಮಟ್ಟಿಗೆ ಖ್ಯಾತಿ ಪಡೆದವರು. ಆದರೆ, ಈಗ ಚಿತ್ರದಲ್ಲಿ ಹಾಗಾಗಲಿಲ್ಲ. ಈಗ (Eega) ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದ ಕಿಚ್ಚ ಸುದೀಪ್ (Kichcha Sudeep) ಅದ್ಭುತವಾಗಿ ನಟಿಸಿದರು. ಅದೆಷ್ಟು ತನ್ಮಯರಾಗಿ, ಅದ್ಭುತವಾಗಿ ನಟಿಸಿದ್ದರು ಎಂದರೆ, ಈಗ ಚಿತ್ರದಲ್ಲಿ ಸುದೀಪ್ ಬಿಟ್ಟರೆ ಬೇರೆ ಯಾರೂ ಹೈಲೈಟ್ ಆಗೋದಕ್ಕೆ ಸಾಧ್ಯವೇ ಆಗಲಿಲ್ಲ.

ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅದೆಷ್ಟು ಪರ್ಫೆಕ್ಟ್ ಆಗಿ ನಟಿಸಿದ್ದರು ಎಂದರೆ, ನೋಡಿದವರೆಲ್ಲರೂ ನಾಯಕ ನಾನಿಯನ್ನು ಹೊಗಳುವ ಬದಲು ಸುದೀಪ್ ನಟನೆ ನೋಡಿ 'ವಾವ್, ಫೆಂಟಾಸ್ಟಿಕ್' ಎಂದರು. ಸುದೀಪ್ ಕಾಣಿಸಿಕೊಂಡ ಪ್ರತಿಯೊಂದು ದೃಶ್ಯವೂ ಅದ್ಭುತವಾಗಿತ್ತು. ಸುದೀಪ್ ಅವರ ಪಾತ್ರದ ಲೆವೆಲ್‌ ಬೇರೆಯದೇ ಅಗಿತ್ತು. ಆ ಚಿತ್ರದಲ್ಲಿ ನಿರ್ದೇಶಕ ರಾಜಮೌಳಿ ಅವರು ಸುದೀಪ್ ಅವರ ಎಲ್ಲ ನಟನಾ ಕೌಶಲ್ಯವನ್ನು ತುಬಾ ಚೆನ್ನಾಗಿ ಬಳಸಿಕೊಂಡರು.

ಈಗ ಎಂದರೆ ತೆಲುಗಿನಲ್ಲಿ ನೊಣ. ಈ ಚಿತ್ರದಲ್ಲಿ ನಟ ಸುದೀಪ್ ಅವರು ತನ್ನ ಮುಂದೆ ಒಂದು ನೋಣ ಇದೆ ಎಂದು ಕಲ್ಪನೆ ಮಾಡಿಕೊಂಡು ನಟನೆ ಮಾಡಿದ್ದಾರೆ. ಅದು ತುಂಬಾ ಕಷ್ಟ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಸುದೀಪ್ ಆ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದರು. ಆ ಸಿನಿಮಾದ ನಟನೆಗಾಗಿ ಸುದೀಪ್ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಸಿಕ್ಕವು. ತೆಲಂಗಾಣ ಸರ್ಕಾರ 'ನಂದಿ' ಪ್ರಶಸ್ತಿ ನೀಡಿ ಕಿಚ್ಚ ಸುದೀಪ್ ಅವರನ್ನು ಅಭಿನಂದಿಸಿತು. ರಾಷ್ಟ್ರಮಟ್ಟದಲ್ಲಿ ಸುದೀಪ್ ಅವರ ಖ್ಯಾತಿ ಹೆಚ್ಚಾಯಿತು. ತನ್ನ ಪ್ರತಿಭೆಯಿಂದಲೇ ಕಿಚ್ಚ ಎಲ್ಲರ ಗಮನ ಸೆಳೆದು 'ಅಭಿನಯ ಚಕ್ರವರ್ತಿ' ಎನ್ನಿಸಿಕೊಂಡರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Shivarajkumar: ಶಿವರಾಜ್‌ಕುಮಾರ್ 'ಸರ್ವೈವರ್' ಟೀಸರ್ ರಿಲೀಸ್, ಸಾಕ್ಷ್ಯಚಿತ್ರ ಬಿಡುಗಡೆಗೆ ಸಿದ್ಧತೆ
ಹೇಳ್ಬೇಕು ಅನ್ನಿಸ್ತು ಹೇಳ್ದೆ ಎನ್ನುತ್ತ ಬಿಗ್ ಬಾಸ್ ರಘು ಫ್ಯಾನ್ಸ್ ಗೆ ಹೇಳಿದ್ದೇನು?