Prabhudeva ಜೊತೆ ಡ್ಯಾನ್ಸ್ ಮಾಡೋದು ನನ್ನ ಬಾಲ್ಯದ ಕನಸು: Samyuktha Hegde

By Suvarna NewsFirst Published Jan 17, 2022, 2:17 PM IST
Highlights

ಥೀಲ್ ಚಿತ್ರದ ಮೂಲಕ ಬಾಲ್ಯದ ಕನಸು ನನಸು ಮಾಡಿಕೊಂಡ ಕಿರಿಕ್ ಹುಡುಗಿ. ಇನ್‌ಸ್ಟಾಗ್ರಾಂನಲ್ಲಿ ಸಂತಸದ ಪೋಸ್ಟ್‌ ಹಂಚಿಕೊಂಡ ಸಂಯುಕ್ತಾ ಹೆಗ್ಡೆ.
 

ಕಿರಿಕ್ ಪಾರ್ಟಿ (Kirik Party) ಮತ್ತು ಕಾಲೇಜ್ ಕುಮಾರ್ (College Kumara) ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ (Sandalwood) ನಾಯಕಿಯಾಗಿ ಗುರುತಿಸಿಕೊಂಡಿರುವ ಸಂಯುಕ್ತಾ ಹೆಗ್ಡೆ (Samyuktha Hegde) ಇದೀಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಅದ್ಧೂರಿಯಾಗಿ ಥೀಲ್ (Theel) ಸಿನಿಮಾ ಬಿಡುಗಡೆ ಆಗಿದ್ದು, ಚಿತ್ರದ ವಿಡಿಯೋ ಸಾಂಗ್ ವೈರಲ್ ಆಗುತ್ತಿದೆ. 

ಹೌದು! ನಟ ಕಮ್ ಡ್ಯಾನ್ಸರ್ ಪ್ರಭುದೇವಗೆ (Prabhudeva) ಜೋಡಿಯಾಗಿ ಸಂಯುಕ್ತಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೆಸರು ಥೀಲ್ ಆಗಿದ್ದು, ಜನವರಿ 1ರಂದು ಬಿಡುಗಡೆ ಆಗಿತ್ತು. ಸಿನಿಮಾ ನಿರೀಕ್ಷೆ ಮಾಡಿದಷ್ಟು ಕ್ಲಿಕ್ ಆಗಿಲ್ಲವಾದರೂ, ಹಾಡುಗಳ ಮೂಲಕ ಸಿನಿ ರಸಿಕರ ಗಮನ ಸೆಳೆಯುತ್ತಿದೆ. ಸಂಯುಕ್ತಾ ಮತ್ತು ಪ್ರಭುದೇವ ನಿಜಕ್ಕೂ ಅದ್ಭುತ ಡ್ಯಾನ್ಸರ್ಸ್. ಇಬ್ಬರು ಸಿನಿಮಾ ಮಾಡುತ್ತಿದ್ದಾರೆ, ಅಂದ್ರೆ ಇದು ಪಕ್ಕಾ ಡ್ಯಾನ್ಸ್ ಸಿನಿಮಾ ಅಂದುಕೊಂಡವರಿಗೆ ಬಿಗ್ ಶಾಕ್ ತಂದಿತ್ತು. ಇಲ್ಲ ಇದು ಮಾಸ್ ಸಿನಿಮಾ, ಪ್ರಭುದೇವ ಆ್ಯಕ್ಷನ್‌ ಕೂಡ ನೀವು ಈ ಸಿನಿಮಾದಲ್ಲಿ ನೋಡಬಹುದು.

ಸಂಯುಕ್ತಾ ಪೋಸ್ಟ್:
'ಚಿಕ್ಕ ವಯಸ್ಸಿನಿಂದ (Childhood) ನಾನು ಈ ಲೆಜೆಂಡ್‌ ಜೊತೆ ಡ್ಯಾನ್ಸ್ ಮಾಡಬೇಕು ಎಂದು ಕಂಡಿದ್ದ ಕನಸು ನನಸಾಗಿದೆ. ಈ ಸಿನಿಮಾದಲ್ಲಿ ನನಗೆ ನಟಿಸುವ ಅವಕಾಶ ಮಾತ್ರವಲ್ಲ, ಡ್ಯಾನ್ಸ್ ಮಾಡುವ ಅವಕಾಶ ಕೂಡ ಇತ್ತು, ಅದು ಸೋಲೋ ಆಗಿ ಒಂದು ಹಾಡು ಪೂರ್ತಿ. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ಕಂಡ ಮೊದಲ ಕನಸಿದು. ಒಂದು ಸಿನಿಮಾದಲ್ಲಿ ಪ್ರಭುದೇವ ಸರ್ ಜೊತೆ ಡ್ಯಾನ್ಸ್ ಮಾಡಬೇಕು ಎಂದು. ನನ್ನ ಬಾಲ್ಯದಿಂದಲೂ ಅವರು ನನಗೆ ಪ್ರೇರಣೆ. ಏಕೆಂದರೆ ಅವರು ತುಂಬಾನೇ ಓರಿಜಿನಲ್ ವ್ಯಕ್ತಿ. ಇವರೊಂದಿಗೆ ಅವರ ಹಾಡಿಗೆ ಡ್ಯಾನ್ಸ್ ಮಾಡುವುದು ಎಂದರೆ ಎಷ್ಟು ಹೆಮ್ಮೆ. ಈ ನನ್ನ ಅನುಭವ ನನ್ನ ಬಾಲ್ಯದ ಕನಸು ನನಸು ಮಾಡಿತ್ತು. ಹಾಡು ಬಿಡುಗಡೆ ಆಗಿದೆ. ದಯವಿಟ್ಟು ವೀಕ್ಷಿಸಿ, ನಿಮ್ಮ ಅನಿಸಿಕೆ ಹಂಚಿಕೊಳ್ಳಿ,' ಎಂದು ಸಂಯುಕ್ತಾ ಬರೆದು ಕೊಂಡಿದ್ದಾರೆ. 

 

'ವಾಟುರ ಥೀಟುರ' ಹಾಡಿನಲ್ಲಿ ಸಂಯುಕ್ತಾ ತುಂಬಾನೇ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡಿಗರಿಗೆ ಹಾಡು ಅರ್ಥವಾಗಿಲ್ಲವಾದರೂ, ಹಾಡನ್ನು ವೀಕ್ಷಿಸಿದ್ದಾರೆ, ಹಾಡು ಹೆಚ್ಚಿನ ವೀಕ್ಷಣೆ ಪಡೆದುಕೊಂಡಿರುವುದಕ್ಕೆ ಧನ್ಯವಾದಗಳನ್ನು ತಂಡ ತಿಳಿಸಿದೆ. ಹಾಡಿನಲ್ಲಿ ಪ್ರಭುದೇವ ಕೆಲವೊಂದು ಮಾಸ್ ದೃಶ್ಯಗಳನ್ನು ಕೂಡ ತೋರಿಸಿದ್ದಾರೆ. ಆದರೆ ನೆಟ್ಟಿಗರ ಪ್ರಕಾರ ಈ ಹಾಡು ಕೂಡ ದೊಡ್ಡ ಫ್ಲಾಪ್ ಎಂದು ಕಾಲೆಳೆದಿದ್ದಾರೆ. 

ಕಿರಿಕ್ ಮೂಲಕವೇ ಹೆಸರು ಮಾಡಿರುವ ಸಂಯುಕ್ತಾ ಕನ್ನಡ ಸಿನಿಮಾಗಳನ್ನು ಹೆಚ್ಚಾಗಿ ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎಂದು ಈ ಹಿಂದೆ ಪ್ರಶ್ನೆ ಮಾಡಲಾಗಿತ್ತು. 'ನೀವು ಈ ಪ್ರಶ್ನೆಯನ್ನು ನನಗೆ ಕೇಳುವ ಬದಲು ಕನ್ನಡದ ನಿರ್ದೆಶಕರು ಮತ್ತು ನಿರ್ಮಾಪಕರನ್ನು ಕೇಳಿ. ಕನ್ನಡದ ನಟಿಯರಿಗೆ ಏಕೆ ಅವಕಾಶ ನೀಡುತ್ತಿಲ್ಲವೆಂದು. ಕನ್ನಡದಲ್ಲಿ ನನಗೆ ಅವಕಾಶ ಸಿಗುತ್ತಿಲ್ಲ. ಸಿಕ್ಕರೆ ಖಂಡಿತಾ ನಟಿಸುತ್ತೇನೆ,' ಎಂದು ಸಂಯುಕ್ತಾ ಉತ್ತರ ಕೊಟ್ಟಿದ್ದರು.

ಮಹಿಳಾ ಪ್ರಧಾನ ಪಾತ್ರದಲ್ಲಿ Samyuktha Hegde , ಕ್ರೀಮ್ ಟೈಟಲ್ ಯಾಕೆಂದು ರಿವೀಲ್ ಮಾಡಲ್ಲ: Agni Shridhar

ಸೋಷಿಯಲ್ ಮೀಡಿಯಾದಲ್ಲಿ (Social Media) ತುಂಬಾನೇ ಬೋಲ್ಡ್‌ ಆಗಿರುವ ಫೋಟೋಗಳನ್ನು ಹಂಚಿಕೊಳ್ಳುವ ಸಂಯುಕ್ತಾ ಕೆಲವು ದಿನಗಳ ಹಿಂದೆ ಎರಡು ಪೀಸ್ ಬಟ್ಟೆ ಧರಿಸಿ ಬಾಡಿ ಶೇಮಿಂಗ್ ಬಗ್ಗೆ ಧ್ವನಿ ಎತ್ತಿದ್ದರು. 'ವಿಭಿನ್ನ ದೇಹ ಆಕಾರ ಹೊಂದಿರುವ ಸ್ನೇಹಿತರೇ ಹಾಯ್...ನಾನು ತೆಳ್ಳಗಾಗಲು ಎಷ್ಟು ಅದೃಷ್ಟಶಾಲಿ ಎಂದು ನಿರಂತರವಾಗಿ ಒಪ್ಪಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನನ್ನ ದೇಹದ ಕಾಳಜಿಯನ್ನು ಪರಿಗಣಿಸದ್ದಕ್ಕಾಗಿ ಧನ್ಯವಾದಗಳು. ನಾನು ಫಿಟ್ ಆಗಿರುವುದಕ್ಕೆ ಹಾಕಿರುವ ಪರಿಶ್ರಮವನ್ನು ನಿರ್ಲಕ್ಷಿಸಿ, ದೇಹ ಹೀಗಿರುವುದಕ್ಕೆ ನೀನು Blessed ಎಂದವರಿಗೆ ಧನ್ಯವಾದಗಳು. ನನ್ನ ದೇಹ 45 ಕೆಜಿಯಿಂದ 50 ಕೆಜಿ ಹೆಚ್ಚಾಗಿದೆ. ಈ ನನ್ನ ಟ್ರಾನ್ಸ್‌ಫಾರ್ಮೇಷನ್‌ನ ಪ್ರಶಂಸಿಸಿದ್ದಕ್ಕಾಗಿ ಧನ್ಯವಾದಗಳು. ನೀನು ಏನು ಬೇಕಿದ್ದರೂ ತಿನ್ನಬಹುದು, ದಪ್ಪ ಆಗುವುದಿಲ್ಲ ಎಂದು ಕೊಂಕು ಹೇಳಿಕೆ ನೀಡುವವರಿಗೆ ಧನ್ಯವಾದಗಳು. ಸಣ್ಣಗಿರುವವರು ಫಿಟ್ ಆಗಿರಬೇಕು, ಎನ್ನುವ ನನ್ನ ನಂಬಿಕೆಗೆ, ಇಲ್ಲ ದಪ್ಪಗಾಗಿ ಫಿಟ್ ಆಗಬೇಕು, ಎಂದು ಬದಲಾಯಿಸಿದವರಿಗೆ ಧನ್ಯವಾದಗಳು. ಇಂತಿ ನಿಮ್ಮ Skinny ಸ್ನೇಹಿತೆ,' ಎಂದು ಬರೆದುಕೊಂಡಿದ್ದರು.

'ಪ್ರತಿಯೊಬ್ಬರೂ ತಮ್ಮ ತಮ್ಮಲ್ಲಿಯೇ ಮೌನವಾಗಿ ಯುದ್ಧಗಳನ್ನು ನಡೆಸುತ್ತಿರುತ್ತಾರೆ. ನೀವು ನೋಡಿದ ಹಂಗೇ ಎಲ್ಲವೂ ಇಲ್ಲ ಎನ್ನುವ ರೀತಿಯಲ್ಲಿ ಕಾಮೆಂಟ್ (Comment) ಮಾಡಬೇಡಿ. ಕೆಲವರು ದೇಹದ ತೂಕ ಇಳಿಸಿ ಕೊಳ್ಳುವುದಕ್ಕೆ ಶ್ರಮಿಸುತ್ತಿರುತ್ತಾರೆ. ಕೆಲವರು ದಪ್ಪಗಾಗಲು, ಇನ್ನೂ ಕೆಲವರು ಇದೇ ದೇಹವನ್ನು ಕಾಪಾಡಿಕೊಂಡು ಹೋಗಲು ಹೆಚ್ಚಿನ ಶ್ರಮ ವಹಿಸುತ್ತಾರೆ. ಇಲ್ಲಿ ಯಾರೂ ಅದೃಷ್ಟವಂತರಲ್ಲ. ಯಾರೂ ಪರ್ಫೆಕ್ಟ್ ಆಗಿ ಹುಟ್ಟಿಲ್ಲ ಮತ್ತು ಪರ್ಫೆಕ್ಷನ್‌ನ ಪಡೆಯಲು ಯಾವುದೇ ದಾರಿ ಇಲ್ಲ. ಏಕೆಂದರೆ ಪರ್ಫೆಕ್ಟ್‌ ಅನ್ನೋದು ಈ ಭೂಮಿ ಮೇಲೆ ಅಸ್ತಿತ್ವದಲ್ಲಿ ಇಲ್ಲ. ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುವುದು ಮುಖ್ಯ. ನಿಮ್ಮ ದೇಹಕ್ಕೆ ಟ್ರೈನಿಂಗ್ ಮತ್ತು ಪೋಷಣೆ ನೀಡುವುದು ಮುಖ್ಯ, ನೀವು ಹುಟ್ಟಿದ ಒಂದು ವಿಷಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಮುಖ್ಯ!' ಎಂದಿದ್ದರು.

 

click me!