
ಈ ಕುರಿತು ನಿರ್ಮಾಪಕ ಉಮಾಪತಿ, ‘ನಾವು ಈಗಾಗಲೇ ಅಂದುಕೊಂಡಿರುವ ಕತೆಗೆ ಚಿತ್ರಕಥೆ ಮಾಡುತ್ತಿದ್ದೇವೆ. ಸದ್ಯಕ್ಕೆ ಸ್ಕಿ್ರಪ್ಟ್ ಪೂಜೆ ಮಾಡಲಾಗಿದೆ. ರಾಬರ್ಟ್ ಸಿನಿಮಾ ಬಿಡುಗಡೆ ಆದ ಮೇಲೆ ಈ ಚಿತ್ರದ ಬಗ್ಗೆ ಹೆಚ್ಚು ಮಾತನಾಡುತ್ತೇನೆ. ಅಂದುಕೊಂಡಂತೆ ಆದರೆ ಸಿಂಧೂರ ಲಕ್ಷ್ಮಣ ಕತೆಯೇ ಈ ಚಿತ್ರ ಆಗಲಿದೆ’ ಎನ್ನುತ್ತಾರೆ.
ಈಗ ಚಿತ್ರಕಥೆ ನಡೆಯುತ್ತಿದೆ. ನಾವು ಮೊದಲು ಅಂದುಕೊಂಡಿದ್ದ ಕತೆಗೆ ಚಿತ್ರಕಥೆ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನ ಕತೆಯೇ ಈ ಚಿತ್ರದ್ದು. ಮುಂದೆ ಅದರ ಬಗ್ಗೆ ಹೆಚ್ಚಿನ ವಿವರಣೆ ಹೇಳುತ್ತೇನೆ. -ಉಮಾಪತಿ ಶ್ರೀನಿವಾಸ್ ಗೌಡ, ನಿರ್ಮಾಪಕ
ಉಮಾಪತಿ ಫಿಲಮ್ಸ್ ಬ್ಯಾನರ್‌ನಲ್ಲಿ ಈಗಾಗಲೇ ‘ಸಿಂಧೂರ ಲಕ್ಷ್ಮಣ’ ಹೆಸರಿನ ಟೈಟಲ್ ನೋಂದಣಿ ಆಗಿದೆ. ಹೀಗಾಗಿ ಸಿಂಧೂರ ಲಕ್ಷ್ಮಣ ಹೆಸರಿನ ಚಿತ್ರಕ್ಕೇ ರಾಬರ್ಟ್ ತಂಡ ಚಾಲನೆ ಕೊಟ್ಟಿದೆ ಎನ್ನುತ್ತವೆ ಮೂಲಗಳು.
ಮತ್ತೆ ಐತಿಹಾಸಿಕ ಚಿತ್ರದಲ್ಲಿ ಕಾಣಿಸಿಕೊಳ್ಳಲಿರೋ ಬಾಕ್ಸ್ ಆಫೀಸ್ ಸುಲ್ತಾನ್!
ಇನ್ನು ದರ್ಶನ್ ನಟನೆಯ ಸಾಲು ಸಾಲು ಚಿತ್ರಗಳು ಚಿತ್ರೀಕರಣಕ್ಕಾಗಿ ಕಾಯುತ್ತಿವೆ. ಈ ಪೈಕಿ ಸ್ವತಃ ದರ್ಶನ್ ಅವರೇ ಗ್ರೀನ್ ಸಿಗ್ನಲ್ ಕೊಟ್ಟಿರುವ ಚಿತ್ರಗಳೆಂದರೆ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರ, ಶೈಲಜಾ ನಾಗ್ ಹಾಗೂ ಎಂ ಜಿ ರಾಮಮೂರ್ತಿ ನಿರ್ಮಾಣದಲ್ಲಿ ತಲಾ ಒಂದೊಂದು ಚಿತ್ರ. ಇದರ ಜತೆಗೆ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ರಾಜಾವೀರ ಮದಕರಿ ನಾಯಕ ಚಿತ್ರಕ್ಕೆ ಶೂಟಿಂಗ್ ಆಗಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.