
'ಕಿರಿಕ್ ಪಾರ್ಟಿ' (Kirik Party) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಜರ್ನಿ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಪುಷ್ಪ (Pushpa) ಸಿನಿಮಾ ರಿಲೀಸ್ ಆದ ನಂತರ ರಶ್ಮಿಕಾ ಹವಾ ಬೇರೇ ನೇ! ಡಿ-ಗ್ಲಾಮ್ (D-Glam) ಪಾತ್ರ ಮಾಡಿದ್ದರೂ, ಪ್ರೆಸ್‌ಮಿಟ್‌ನಲ್ಲಿ ಕೊಡಗಿನ ಕುವರಿ ಕಾಣಿಸಿಕೊಂಡ ರೀತಿಗೆ ಮಾಲಿವುಡ್ (Mollywood) ಮಂದಿ ಫ್ಯಾನ್ ಪೇಜ್ ಕಟ್ಟಿಕೊಂಡಿದ್ದಾರೆ. ಹೀಗಾಗಿ ರಶ್ಮಿಕಾ ಯಾವ ಕಾರ್ಯಕ್ರಮದಲ್ಲಿ ಭಾಗಿಯಾದರೂ ಸುದ್ದಿ ಆಗುವುದರಲ್ಲಿ ಅನುಮಾನವೇ ಇಲ್ಲ.
ಸೋಷಿಯಲ್ ಮೀಡಿಯಾದಲ್ಲಿ ನಟ ರವಿಚಂದ್ರನ್ (Ravichandran) ಮತ್ತು ರಶ್ಮಿಕಾ ಮಂದಣ್ಣ ವಿಡಿಯೋ ಒಂದು ವೈರಲ್ ಆಗುತ್ತಿದೆ. ಕನ್ನಡ ಖಾಸಗಿ ಟಿವಿ (TV) ನಡೆಸಿದ ಕಾರ್ಯಕ್ರಮವಿದು ಎನ್ನಲಾಗಿದೆ. ಸಾಮಾನ್ಯವಾಗಿ ರಶ್ಮಿಕಾ ಸಿನಿಮಾ ಪ್ರಚಾರ ಮತ್ತು ಅವಾರ್ಡ್ ಕಾರ್ಯಕ್ರಮ (Award show) ಬಿಟ್ಟರೆ ಕನ್ನಡದ ಯಾವ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುವುದಿಲ್ಲ, ಆದರೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ (Basavaraj Bommai) ಮತ್ತು ರವಿಚಂದ್ರನ್ ಜೊತೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ವೇದಿಕೆ ಮೇಲೆ ರವಿ ಮಾಮ ಹೀಗೆ ಒಂದು ಹಾಸ್ಯ ಮಾಡಿದ್ದಾರೆ.
ಕಾರ್ಯಕ್ರಮಕ್ಕೆ ರಶ್ಮಿಕಾ ಆಗಮಿಸುತ್ತಿದ್ದಂತೆ, ಎದುರಿಗೆ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಓಡೋಡಿ ಬಂದ ರಶ್ಮಿಕಾ ತಬ್ಬಿಕೊಂಡು ಮಾತನಾಡಿಸಿದ್ದಾರೆ. ವೇದಿಕೆ ಮೇಲೆ ರವಿಚಂದ್ರನ್ ಜೊತೆ ಮಾತನಾಡಿದ ಕುವರಿ ಕನ್ನಡದಲ್ಲಿ 'ತುಂಬಾ ತುಂಬಾ ತುಂಬಾನೇ ಖುಷಿ ಆಗುತ್ತಿದೆ,' ಎಂದು ಹೇಳಿದ್ದಾರೆ. ತಕ್ಷಣವೇ ಪಕ್ಕದಲ್ಲಿದ್ದ ರವಿಚಂದ್ರ ಒಂದು ಪಂಚ್ ಲೈನ್ ಕೊಟ್ಟಿದ್ದಾರೆ, ವೇದಿಕೆ ಮೇಲಿದ್ದವರು ಮಾತ್ರವಲ್ಲದೇ ಕಾರ್ಯಕ್ರಮದಲ್ಲಿದ್ದವರೂ ನಾನ್ ಸ್ಟಾಪ್ ನಕ್ಕಿದ್ದಾರೆ.
ರವಿ ಮಾತು:
'ನನ್ನ ಮಗ (Son) ಮತ್ತು ರಶ್ಮಿಕಾ ಮಂದಣ್ಣ ಒಂದೇ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಅವರಿಬ್ಬರು ಒಳ್ಳೆಯ ಕಂಪ್ಯಾನಿಯನ್ಸ್. ಮನೆ ಬಂದು ಹೇಳಿದ ಇವ್ರು ನನ್ನ ಜೊತೆಗೆ ಜಿಮ್ ಮಾಡುವುದು ಅಂತ. ಅದಕ್ಕೆ ಅಯ್ಯೋ ಬಿಟ್ಬಿಟಿಯಲ್ಲೋ ಅಂದೆ ನಾನು,' ಎಂದು ಹೇಳಿದ್ದಾರೆ. ತಕ್ಷಣವೇ ರಶ್ಮಿಕಾ ರವಿಚಂದ್ರನ್ ಕೈ ಹಿಡಿದುಕೊಂಡು ಜೋರಾಗಿ ನಕ್ಕಿದ್ದಾರೆ.
ಕೆಲವು ದಿನಗಳ ಹಿಂದೆ ರಶ್ಮಿಕಾ ಬೆಂಗಳೂರಿನಲ್ಲಿ (Bengaluru) ಪುಷ್ಪ ಸಿನಿಮಾ ಪ್ರಚಾರ ಮಾಡಿದ್ದರು. ಆ ವೇಳೆ ಅಲ್ಲು ಅರ್ಜುನ್ (Allu Arjun) ಜೊತೆ ಕಾಣಿಸಿಕೊಂಡಿದ್ದರು, ಆದರೆ ಇಷ್ಟು ಚೆನ್ನಾಗಿ ಮಾತನಾಡಿರಲಿಲ್ಲ ಎಂದು ನೆಟ್ಟಿಗರು ಕಾಲೆಳೆದಿದ್ದರು. ಅಲ್ಲದೆ 11 ಗಂಟೆಗೆ ಇದ್ದ ಕಾರ್ಯಕ್ರಮಕ್ಕೆ 1 ಗಂಟೆಗೆ ಬಂದರು ಎಂಬ ಕಾರಣ ಪತ್ರಕರ್ತರೊಬ್ಬರು ಕ್ಲಾಸ್ ತೆಗೆದುಕೊಂಡಿದ್ದರು. ಹೀಗಾಗಿ ಈ ಸಲ ರಶ್ಮಿಕಾ ತುಂಬಾನೇ ಜೋಪಾನವಾಗಿ ಮಾತನಾಡಿದ್ದಾರಂತೆ.
ಯಜಮಾನ (Yajamana) ಚಿತ್ರದ ನಂತರ ರಶ್ಮಿಕಾ ಯಾವ ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿಲ್ಲ, ಬದಲಿಗೆ ಪರಭಾಷೆ ಸಿನಿಮಾಗಳು ಕನ್ನಡದಲ್ಲಿ ಡಬ್ (Dubbing Films) ಆಗುತ್ತಿವೆ. ಅದರ ಪ್ರಚಾರಕ್ಕೆ ಮಾತ್ರ ತಮ್ಮ ತವರೂರಿಗೆ ಬರುತ್ತಿದ್ದಾರೆ. ಕೈ ತುಂಬಾ ಸಿನಿಮಾ ಹಿಡಿದುಕೊಂಡಿರುವ ಕೊಡಗಿನ ಕುವರಿ, ವರ್ಷದಲ್ಲಿ 365 ದಿನಗಳು ಸಾಲುವುದಿಲ್ಲ. ನನಗೆ ಇನ್ನೂ ಮೂರು ತಿಂಗಳ ಹೆಚ್ಚಿಗೆ ಬೇಕು ಎಂದು ಈ ಹಿಂದೆ ಹೇಳಿದ್ದರು. ರಶ್ಮಿಕಾ ಈಗಲೂ ಕನ್ನಡ ಸಿನಿಮಾಗಳಲ್ಲಿ ನಟಿಸಲಿ ಎಂಬುವುದು ಅಭಿಮಾನಿಗಳ (Fans) ಆಸೆ.
ಇನ್ನೂ ಪ್ರೇಮ ಲೋಕ (Prema Loka) ಕ್ರಿಯೇಟರ್ ರವಿಚಂದ್ರನ್ ಅವರನ್ನು ಮಾತನಾಡಿಸದ ನಟಿಯರೇ ಇಲ್ಲ. ಟಾಪ್ ನಟಿಯರಿಂದ ಈಗ ಚಿತ್ರರಂಗಕ್ಕೆ ಈಗಷ್ಟೇ ಕಾಲಿಡುವವರೂ ರವಿ ಮಾಮನ ಫ್ಯಾನ್‌ಗಳಾಗಿರುತ್ತಾರೆ. ಒಮ್ಮೆಯಾದರೂ ಜೀವನದಲ್ಲಿ ಅವರ ಜೊತೆ ನಟಿಸಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ರವಿಚಂದ್ರನ್ ರಶ್ಮಿಕಾ ವಿಡಿಯೋ ನೋಡಿ ನೀವಿಬ್ಬರು ಸಿನಿಮಾ ಮಾಡಿ ಎಂದು ನೆಟ್ಟಿಗರು ಹೊಸ ಡಿಮ್ಯಾಂಡ್ ಮುಂದಿಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.