ಮಧ್ಯರಾತ್ರಿ ಬಂಡೀಪುರ ಸಫಾರಿ ಮಾಡಿದ ನಟ ಧನ್ವೀರ್ ವಿರುದ್ಧ ಆಕ್ರೋಶ

By Suvarna News  |  First Published Oct 23, 2020, 4:12 PM IST

ಶೋಕ್ದಾರ್ ಧನ್ವೀರ್‌ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
 


'ಬಜಾರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶೋಕ್ದಾರ್‌ ಧನ್ವೀರ್‌ ಮೊದಲ ಬಾರಿ ವಿವಾದಲ್ಲಿ ಸಿಲುಕಿಕೊಂಡಿದ್ದಾರೆ. ಬಂಡೀಪುರದಲ್ಲಿ ತಡ ರಾತ್ರಿ ಸಫಾರಿ ಮಾಡಿರುವುದಲ್ಲದೇ, ಆನೆ ಶಿಬಿರಕ್ಕೆ ಭೇಟಿ ನೀಡಿ ಆನೆ ಸವಾರಿಯನ್ನೂ ಮಾಡಿದ್ದಾರೆ. 

ಮೈಸೂರು ಮೃಗಾಲಯದಲ್ಲಿ ಕರಿ ಚಿರತೆ ದತ್ತು ಪಡೆದ ನಟ ಧನ್ವೀರ್ ಗೌಡ! 

Tap to resize

Latest Videos

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಇರುವ ನಟ ಧನ್ವೀರ್ ಬಂಡೀಪುರಕ್ಕೆ ರಾತ್ರಿ ಭೇಟಿ ನೀಡಿ ಸಫಾರಿ ಮಾಡಿ, ಹುಲಿ ನೋಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಆನೆ ಮೇಲೆ ಸವಾರಿ ಮಾಡಿರುವ ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದರು. ವಿವಾದ ಸೃಷ್ಟಿಯಾಗುತ್ತಿದ್ದಂತೆ ಧನ್ವೀರ್ ವಿಡಿಯೋ ಡಿಲೀಟ್‌ ಮಾಡಿದ್ದಾರೆ. ಮತ್ತೆ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ತಾವಿದ್ದ ಭಾಗವನ್ನು ಎಡಿಟ್ ಮಾಡಿದ್ದಾರೆನ್ನಲಾಗಿದೆ.

ಬಂಡೀಪುರದಲ್ಲಿ ಸಫಾರಿಗೆ ಬೆಳಗ್ಗೆ 9 ರಿಂದ 11ವರೆಗೆ ಹಾಗೂ ಸಂಜೆ 4 ರಿಂದ 6 ಗಂಟೆವರೆಗೂ ಸಮಯ ಮೀಸಲಿಡಲಾಗಿದೆ. ಈ ಸಮಯ ಹೊರತು ಪಡಿಸಿ ಯಾರೂ ಅರಣ್ಯ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲ. ಆದರೆ ಧನ್ವೀರ್ ನೀಡಿರುವ ಹೇಳಿಕೆ ಪ್ರಕಾರ ಈ ವಿಡಿಯೋವನ್ನು ಬೆಳಗ್ಗೆ 6 ಗಂಟೆಗೆ ಸೆರೆ ಹಿಡಿಯಲಾಗಿದೆ. ಬೆಳಗ್ಗೆ 6 ಗಂಟೆ ವಿಡಿಯೋ ಆದರೆ ಅದು ಪ್ರವೇಶಿಸುವ ಸಮಯವಲ್ಲ ಎಂದು ವನ್ಯಜೀವಿ ಪ್ರೇಮಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಪೌರ ಕಾರ್ಮಿಕರ ಕಾಲು ತೊಳೆದು ಪೂಜೆ ಮಾಡಿ ಕೃತಜ್ಞತೆ ಸಲ್ಲಿಸಿದ ಬಜಾರ್ ನಟ ಧನ್ವೀರ್!

ಅಲ್ಲದೇ ಆನೆ ಶಿಬಿರದಲ್ಲಿರುವ ಆನೆಗಳನ್ನು ಮಾವುತರು ಹೊರತು ಪಡಿಸಿ, ಮತ್ಯಾರೂ ಸವಾರಿ ಮಾಡುವಂತಿತಿಲ್ಲ. ಒಂದು ವೇಳೆ ಆನೆ ಸವಾರಿ ಮಾಡಬೇಕೆಂದರೆ ವಿಶೇಷ ಅನುಮತಿ ಪಡೆಯಬೇಕು. ಆದರೆ ಧನ್ವೀರ್ ಸ್ಟಾರ್ ಎಂಬ ಕಾರಣಕ್ಕೆ ಹೀಗೆಲ್ಲಾ ಮಾಡಿದ್ದಾರಾ? ಅವರಿಗೆ ಅನುಮತಿ ನೀಡಿದ್ದು ಯಾರು? ಎಂದು ಪ್ರಶ್ನೆಗಳನ್ನು ಕೇಳುವ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!