ಹಳ್ಳಿ ಹುಡುಗನಾಗಿ ಬೇರೆ ಭಾಷೆಯಲ್ಲಿ ಸಿನಿಮಾ ಸಿಗುತ್ತಿರುವುದೇ ಖುಷಿ: ಪೃಥ್ವಿ ಅಂಬರ

By Vaishnavi ChandrashekarFirst Published Jun 21, 2022, 3:33 PM IST
Highlights

ಎರಡನೇ ಚಿತ್ರಕ್ಕೆ ಶಿವಣ್ಣನ ಜೊತೆ ಅಭಿನಯಿಸುವುದಕ್ಕೆ ಅವಕಾಶ ಪಡೆದುಕೊಂಡ ನಟ ಪೃಥ್ವಿ. ಜರ್ನಿ ಬಗ್ಗೆ ಸಂತೋಷ ವ್ಯಕ್ತ ಪಡಿಸಿದ ನಟ...

ದಿಯಾ ಚಿತ್ರದ ಮೂಲಕ ಲವ್ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟ ಪೃಥ್ವಿ ಅಂಬರ್ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ಜೊತೆ ಭೈರಾಗಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಎರಡನೇ ಚಿತ್ರಕ್ಕೆ ಸೂಪರ್ ಹಿಟ್ ಆಫರ್ ಕೈ ಸೇರಿರುವುದಕ್ಕೆ ಪೃಥ್ವಿ ಸಂತಸ ವ್ಯಕ್ತ ಪಡಿಸಿದ್ದಾರೆ.

'ಭೈರಾಗಿ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿದಕ್ಕೆ ಎರಡು ಸಲ ನಿರ್ದೇಶಕರನ್ನು ಪ್ರಶ್ನೆ ಮಾಡಿರುವೆ. ಒಂದೇ ಸಿನಿಮಾ ಮಾಡಿರುವುದು ಆದರೂ ಶಿವಣ್ಣ ಮತ್ತು ಡಾಲಿ ಸರ್ ಜೊತೆ ಆಫರ್ ಕೊಟ್ಟಿದ್ದಾರೆ. ನಿರ್ಮಾಪಕರಾದ ಕಾರ್ತಿಕ್ ಕೂಡ ನಾನು ಸಿನಿಮಾದಲ್ಲಿ ಇರಬೇಕು ಎಂದು ಹೇಳಿದ್ದರು. ಆರಂಭದಲ್ಲಿ ಆತಂಕವಿತ್ತು ಆದರೆ ದಿನ ಕಳೆಯುತ್ತಿದ್ದಂತೆ ಹೆಚ್ಚಿನ ಅನುಭವ ಆಯ್ತು. ನಿರ್ದೇಶಕ ವಿಜಯ್ ಮಿಲ್ಟನ್ ಸರ್ ಅವರ ಅಭಿಮಾನಿ ನಾನು ಅವರ ಗೂಳಿ ಸಿನಿಮಾ ನನಗೆ ತುಂಬಾನೇ ಇಷ್ಟ' ಎಂದು ಪೃಥ್ವಿ ಸಿನಿಮಾ ಬಗ್ಗೆ ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಶಿವಣ್ಣ ಜೊತೆ:

'ಸಿನಿಮಾ ಮೊದಲ ದಿನವೇ ಶಿವರಾಜ್‌ಕುಮಾರ್ ಸರ್ ಜೊತೆ ಚಿತ್ರೀಕರಣ ಮಾಡಿದೆ. ಒಂದು ವಿಚಾರ ಗಮನಿಸಿರುವೆ, ನನಗೆ 33 ವರ್ಷ ಅವರು ನಮ್ಮ ಸೀನಿಯರ್‌ ಆದರೆ ಅವರ ಎನರ್ಜಿ ನಮಗಿಂತ ಡಬಲ್. ಅವರಂತೆ ಎನರ್ಜಿ ನನಗೆ ಬೇಕು. ಪ್ರತಿಯೊಬ್ಬ ಕಲಾವಿದನಿಗೂ ಸಪೂರ್ಟ್ ಮಾಡುತ್ತಾರೆ. ಚಿತ್ರೀಕರಣ ಮಾಡುವಾಗ ಸಣ್ಣ ಪುಟ್ಟ ಸೀನ್‌ಗಳಲ್ಲಿ ನಾನು ಸಮಯ ತೆಗೆದುಕೊಂಡು ಬದಲಾವಣೆ ಮಾಡಿಕೊಳ್ಳಲು ಸಹಾಯ ಮಾಡಿದ್ದರು' ಎಂದು ಹೇಳಿದ್ದಾರೆ.

ಸ್ನೇಹಿತನ ಪಾತ್ರ:

'ಸಿನಿಮಾದಲ್ಲಿ ನಾನು ಶಿವಣ್ಣ ಸ್ನೇಹಿತರು. ಪಾತ್ರ ಕ್ರಿಯೇಟ್ ಮಾಡುವಾಗ ನಾನು ಮಂಗಳೂರು ಭಾಷೆ ಪ್ರಯೋಗ ಮಾಡಲು ಮನವಿ ಮಾಡಿಕೊಂಡೆ. ಇದುವರೆಗೂ ನಾನು ಸಿನಿಮಾದಲ್ಲಿ ಮಂಗಳೂರು ಭಾಷೆ ಮಾತನಾಡಿಲ್ಲ ಹೀಗಾಗಿ ಇದು ಹಿಟ್ ಆಯ್ತು. ನಮ್ಮ ಕೆಮಿಸ್ಟ್ರಿ ಸೂಪರ್ ಆಗಿದೆ ಎಂದು ಶಿವಣ್ಣ ಹೇಳಿದ್ದಾರೆ. ನಮ್ಮಿಬ್ಬರ ನಡುವೆ ಸ್ಪೆಷನಲ್ ಎಮೋಷನಲ್ ಸೀನ್‌ಗಳಿದೆ'

Pruthvi Ambaar: ಶಿವಣ್ಣ ಎದುರು ನಟಿಸಬೇಕು ಅಂದಾಗ ತುಂಬಾ ನರ್ವಸ್ ಆಗಿದ್ದೆ

ಮುಂದಿನ ಪ್ರಾಜೆಕ್ಟ್‌:

'ನನ್ನ ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಯೋಚನೆ ಇದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸ್ವಾಗತ ನಿರೀಕ್ಷೆ ಮಾಡಿರಲಿಲ್ಲ. ನನಗೆಂದು ಅನೇಕರು ಕಥೆ ಬರೆದಿದ್ದಾರೆ. ನನ್ನ 12-13 ವರ್ಷಗಳ ಜರ್ನಿ ಇದು, ಮೊದಲು ಆರ್‌ಜೆ ಆನಂತರ ಧಾರಾವಾಹಿಗಳು ಆನಂತರ ತುಳು ಸಿನಿಮಾ ಆಮೇಲೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು. ಸರಿಯಾದ ವೃತ್ತಿ ಜೀವನ ಆಯ್ಕೆ ಮಾಡಿಕೊಂಡಿದ್ದೀನಾ ಇಲ್ಲ ಎಂಬ ಯೋಚನೆ ಬಂತು ಆದರೆ ಈಗ ನೆಮ್ಮದಿಯಾಗಿರುವೆ. ದಿಯಾ ಸಿನಿಮಾ 6 ವರ್ಷ ತೆಗೆದುಕೊಂಡಿತ್ತು ಅದರ ಸಕ್ಸಸ್‌ ಜೀವನ ಬದಲಾಯಿಸಿತ್ತು. ಎರಡನೇ ಸಿನಿಮಾ ಭೈರಾಗಿಯಲ್ಲಿ ಬ್ಯುಸಿಯಾಗಿರುವೆ.  ಇನ್ನು 5-6 ವರ್ಷಗಳಲ್ಲಿ ನನ್ನ ಜರ್ನಿ ನೆನಪಿಸಿಕೊಂಡೆ ದೊಡ್ಡ ವ್ಯಕ್ತಿಗಳ ಜೊತೆ ಕೆಲಸ ಮಾಡಿರುವ ನೆಮ್ಮದಿ ಇದೆ' 

ತಮಿಳು ಚಿತ್ರರಂಗಕ್ಕೆ ಮತ್ತೊಬ್ಬ ಕನ್ನಡಿಗ ಎಂಟ್ರಿ!

ಫಾದರ್‌ವುಡ್‌:

'ನನ್ನ ಪುತ್ರಿ ಚಾರ್ವಿ ನಮಗೆ ಸಂತೋಷ ತಂದುಕೊಟ್ಟಿದ್ದಾಳೆ. ಆಕೆ ಹುಟ್ಟಿದ ಸಮಯದಿಂದಲ್ಲೂ ನಾನು ಬ್ಯುಸಿಯಾಗಿರುವೆ, ಮರಾಠಿ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದೆ ಈಗ ಕನ್ನಡ ಸಿನಿಮಾ. ಕಷ್ಟವಾಗುತ್ತದೆ ಆದರೆ ಎಂಜಾಯ್ ಮಾಡುತ್ತಿರುವೆ. I am going with the flow. ಹಿಂದಿ ಮತ್ತು ಮರಾಠಿ ದಿಯಾ ರಿಮೇಕ್ ಸಿನಿಮಾದಲ್ಲಿ ಅಭಿನಯಿಸಿರುವೆ. ಕನ್ನಡ ಭಾಷೆ ಒಂದೇ ನನಗೆ ಸುಲಭವಾಗಿ ಬರುತ್ತದೆ ಆದರೆ ಬೇರೆ ಭಾಷೆ ಸಿನಿಮಾಗಳಿಗೆ ಹೆಚ್ಚಿಗೆ ತಯಾರಿ ಮಾಡಿಕೊಳ್ಳಬೇಕು. ನಟರಿಗೆ ಭಾಷೆ ಬ್ಯಾರಿಯರ್ ಇರುವುದಿಲ್ಲ ಆದರೆ ಇದೊಂದು ಸವಾಲ್ ಆಗಿರುತ್ತದೆ. ಹಳ್ಳಿ ಹುಡುಗನಾಗಿ ನನಗೆ ಇದೆಲ್ಲಾ ದೊಡ್ಡ ಕನಸು ನನಸಾಗುತ್ತಿರುವ ಸಂತೋಷ' ಎಂದು ಮಾತನಾಡಿದ್ದಾರೆ. 

click me!