
ಈ ಚಿತ್ರಕ್ಕೂ ಮೊದಲೇ ಮತ್ತೊಂದು ಸಿನಿಮಾ ಮೂಡಿ ಬರುತ್ತಿದೆ. ಆ ಚಿತ್ರಕ್ಕೆ ಹೊಸ ನಿರ್ದೇಶಕರು ಆಗಮಿಸಲಿದ್ದು, ಕತೆ ಆಯ್ಕೆ ಮುಕ್ತಾಯಗೊಂಡು ಚಿತ್ರಕಥೆ ನಡೆಯುತ್ತಿದೆ ಎಂಬುದು ಹೊಸ ಸುದ್ದಿ. ಇದನ್ನ ನಿರ್ಮಾಪಕ ಉದಯ್ ಮೆಹ್ತಾ ಅವರೇ ಹೇಳುತ್ತಾರೆ.
ದುಬಾರಿ ಸಿನಿಮಾ ಬಹುತೇಕ ಚಿತ್ರೀಕರಣ ವಿದೇಶಗಳಲ್ಲೇ ನಡೆಯಬೇಕಿದೆ. ಹೀಗಾಗಿ ಅದರ ಚಿತ್ರೀಕರಣಕ್ಕೆ ಈಗ ಸೂಕ್ತ ಸಮಯ ಅಲ್ಲ. ತಡವಾಗಿ ಈ ಸಿನಿಮಾ ಸೆಟ್ಟೇರುತ್ತದೆ. ಇದಕ್ಕೂ ಮೊದಲೇ ಒಂದು ಸಿನಿಮಾ ಶುರು ಮಾಡುತ್ತಿದ್ದು, ಇದರ ಚಿತ್ರಕತೆ ನಡೆಯುತ್ತಿದೆ. ದುಬಾರಿ ಸೆಟ್ಟೇರಿದ ಮೇಲೆ ನಂದ ಕಿಶೋರ್ ಅವರು ಜತೆಯಾಗಲಿದ್ದಾರೆ. - ಉದಯ್ ಕೆ ಮಹ್ತಾ, ನಿರ್ಮಾಪಕ
ಧ್ರುವ ಸರ್ಜಾ 'ದುಬಾರಿ' ಸಿನಿಮಾ ತಂಡದಿಂದ ಹೊರ ಬಂದ ನಂದಕಿಶೋರ್!
ಅಲ್ಲದೆ ‘ದುಬಾರಿ’ ಸಿನಿಮಾ ನಿಂತಿದೆ. ನಂದ ಕಿಶೋರ್, ಧ್ರುವ ಸರ್ಜಾ ಅವರ ಚಿತ್ರದಿಂದ ಹೊರಗೆ ಬಂದಿದ್ದಾರೆ. ಹೀಗಾಗಿ ಆ ಸಿನಿಮಾ ಸೆಟ್ಟೇರಲ್ಲ ಎನ್ನುವ ಮಾತುಗಳೂ ಇವೆ. ಆದರೆ, ಇದಕ್ಕೆ ನಿರ್ಮಾಪಕರು ಹೇಳುವುದೇ ಬೇರೆ. ‘ನಮ್ಮ ದುಬಾರಿ ಸಿನಿಮಾ ನಿಂತಿಲ್ಲ. ನಂದ ಕಿಶೋರ್ ಅವರನ್ನು ನಾನು ಹೊರಗಿಟ್ಟಿಲ್ಲ. ಈಗಾಗಲೇ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ಮಾಡಿದ್ದೇವೆ. ಹೀಗಾಗಿ ಚಿತ್ರವನ್ನು ನಿಲ್ಲಿಸುವ ಪ್ರಶ್ನೆ ಇಲ್ಲ. ಆದರೆ, ಅದು ಅದ್ದೂರಿ ಮೇಕಿಂಗ್ ಸಿನಿಮಾ. ವಿದೇಶಗಳಲ್ಲೇ ಹೆಚ್ಚಿನ ಪ್ರಮಾಣದ ಚಿತ್ರೀಕರಣ ನಡೆಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯ. ಈ ಕಾರಣಕ್ಕೆ ದುಬಾರಿ ಬದಲು ಬೇರೊಂದು ಕತೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅದರ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಇದನ್ನು ಹೊಸ ನಿರ್ದೇಶಕನಿಂದ ಮಾಡಿಸುತ್ತೇವೆ. ಆ ಬಗ್ಗೆ ಸದ್ಯದಲ್ಲೇ ಹೇಳುತ್ತೇನೆ’ ಎನ್ನುತ್ತಾರೆ ಉದಯ್ ಮೆಹ್ತಾ ಅವರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.