ಕನ್ನಡ ಚಿತ್ರರಂದ ಖ್ಯಾತ ನಿರ್ಮಾಪಕ ಎಂ.ಚಂದ್ರಶೇಖರ್‌ ಕೊರೋನಾಗೆ ಬಲಿ

By Suvarna NewsFirst Published Apr 29, 2021, 9:24 AM IST
Highlights

ನಿಮಿಶಾಂಬಾ ಪ್ರೊಡಕ್ಷನ್‌ನ ಮೂಲಕ ಕನ್ನಡ ಚಿತ್ರರಂಗದ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ ಎಂ.ಚಂದ್ರಶೇಖರ್ ಅವರಿಗೆ ಕೊರೋನಾ ಸೋಂಕು ತಗುಲಿ ನಿಧನರಾಗಿದ್ದಾರೆ.

ಕೊರೋನಾ ಸೋಂಕಿನ ಎರಡನೇ ಅಲೆ ಕನ್ನಡ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಸಿನಿಮಾ ಹಾಗೂ ಕಿರುತೆರೆ ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದಿರುವುದಲ್ಲದೆ ಸೋಂಕು ತಗುಲಿ ಖ್ಯಾತ ನಿರ್ಮಾಪಕರನ್ನು ಕಳೆದುಕೊಂಡಿದ್ದೇವೆ.

ನಿಮಿಶಾಂಬ ಪ್ರೊಡಕ್ಷನ್‌ನ ಮೂಲಕ  'ಅಣ್ಣಯ್ಯ','ಬಿಂದಾಸ್','ಏನೋ ಒಂಥರಾ','ರನ್ನ' ಸೇರಿ ಅನೇಕ ಸ್ಟಾರ್ ಸಿನಿಮಾಗಳನ್ನು ನಿರ್ಮಾಣ ಮಾಡಿದ ಎಂ.ಚಂದ್ರಶೇಖರ್ ಕೊರೋನಾ ಸೋಂಕು ತಲುಗು ಇಂದು ಬೆಳಗಿನಜಾವ ಸುಮಾರು 3-4ಗಂಟೆ ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆ. 

ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕೊರೋನಾದಿಂದ ನಿಧನ 

ಕಳೆದ 23 ದಿನಗಳ ಹಿಂದೆ ಚಂದ್ರಶೇಖರ್‌ ಅರವರಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿತ್ತು. ತಕ್ಷಣವೇ ಮಣಿಪಾಲ್ ಸೆಂಟರ್‌ಗೆ ದಾಖಲಾಗಿದ್ದರು. ಕೊರೋನಾ ಸೋಂಕಿನಿಂದ ಗುಣಮುಖರಾದರೂ, ಶ್ವಾಸಕೋಶ ಸಮಸ್ಯೆ ಉಲ್ಬಣಗೊಂಡು ಕೊನೆಯುಸಿರೆಳೆದಿದ್ದಾರೆ. 

ಇತ್ತೀಚಿಗೆ ನಿರ್ದೇಶಕ ಮಂಜು ಮಾಂಡವ್ಯ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಚಂದ್ರಶೇಖರ್ ಬಂಡವಾಳ ಹಾಕುವುದಾಗಿ ಮಾತುಕತೆ ನಡೆದಿತ್ತು. ಚಿತ್ರಕ್ಕೆ ನಾಯಕನಾಗಿ ಉಪೇಂದ್ರ ಅಯ್ಕೆ ಆಗಿದ್ದರು. ಆದರೆ ವಿಧಿ ಆಟವೇ ಬೇರೆ ಆಗಿತ್ತು. ಕೆಲ ದಿನಗಳ ಹಿಂದೆ ಖ್ಯಾತ ನಿರ್ಮಾಪಕ ಕೋಟಿ ರಾಮು ಅವರನ್ನು ಚಿತ್ರರಂಗ ಕಳೆದುಕೊಂಡಿತ್ತು ಇದೀಗ ಚಂದ್ರಶೇಖರ್ ಅವರನ್ನ. ಎಂ.ಚಂದ್ರಶೇಖರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

ಕೊರೋನಾಕ್ಕೆ ಕೋಟಿ ನಿರ್ಮಾಪಕ ರಾಮು ಬಲಿ, ಮಾಲಾಶ್ರೀ ಪತಿ ಇನ್ನಿಲ್ಲ 

click me!