
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಲೆಟೇಸ್ಟ್ ಆಗಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಫೋಟೋ ನೆಟ್ಟಿಗರ ಗಮನ ಸೆಳೆದಿದೆ. ಅದರಲ್ಲೂ ಕುರಿ ಮರಿಯನ್ನು ಹೊತ್ತುಕೊಂಡು ಬರೆದ ಸಾಲು ಯಾರಿಗಿರಬಹುದು ಎಂಬ ಕುತೂಹಲವೂ ಹೆಚ್ಚಾಗಿದೆ.
'ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಚಿಂತೆ ಇಲ್ಲದಿರೋ ವ್ಯಕ್ತಿನೇ ಇಲ್ಲ. ಜೀವನದಲ್ಲಿ ಸವಾಲುಗಳು ಏನೇ ಇರಲಿ ನಾವು ಎದೆಗುಂದದೇ ಎದುರಿಸಬೇಕು' ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳು 'ಅಣ್ಣ ಈ ಸಾಲುಗಳು ಯಾರಿಗೆ, ಏನಾದರೋ ಸಮಸ್ಯೆ ಎದುರಾಯ್ತಾ?' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ವಿಶೇಷ ಏನೆಂದರೆ ನಿಖಿಲ್ ಕುಮಾರಸ್ವಾಮಿ ಬೆಸ್ಟ್ ಫ್ರೆಂಡ್ ಅಭಿಷೇಕ್ ಅಂಬರೀಶ್ ಈ ಫೋಟೋವನ್ನು ಲೈಕ್ ಮಾಡಿದ್ದಾರೆ.
ನಿಖಿಲ್ ಲೇಟೆಸ್ಟ್ ನ್ಯೂಸ್:
ಇತ್ತೀಚಿಗೆ ನಿಖಿಲ್ ತಮ್ಮ ಸಹೋದರಿಯರ ಜೊತೆ ಸರಳವಾಗಿ ರಕ್ಷಾ ಬಂಧನ ಆಚರಿಸಿ ಫೋಟೋ ಶೇರ್ ಮಾಡಿಕೊಂಡಿದ್ದು ಅಣ್ಣ-ತಂಗಿ, ಅಕ್ಕ-ತಮ್ಮ ಭಾಂದವ್ಯದ ಬಗ್ಗೆ ತಮ್ಮದೇ ವಿಭಿನ್ನ ಶೈಲಿಯಲ್ಲಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ ಹಾಗೂ ವರಮಹಾಲಕ್ಷ್ಮಿ ಹಬ್ಬದ ದಿನದಂದು ತಾಯಿ ಅನಿತಾ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಜೊತೆ ಟ್ರೆಡಿಷನಲ್ ಲುಕ್‌ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.