
ವಾಸ್ತು ಪ್ರಕಾರ ,ರಾಕೆಟ್ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಮಿಗಳ ಮನಸ್ಸಿಗೆ ಹತ್ತಿರವಾಗಿದ್ದ ರಂಗಭೂಮಿ ಕಲಾವಿದೆ ಐಶಾನಿ ಶೆಟ್ಟಿ ಮನೆಯಲ್ಲಿಯೇ ಮಾಡಿಕೊಂಡ ಹೇರ್‌ಕಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಹೊಂದಿಸಿ ಬರೆಯಿರಿ ಎಂದ ರಾಕೆಟ್ ಹುಡುಗಿ!
ನನ್ನ ಕೂದಲನ್ನು ನಾನೇ ಕಟ್ ಮಾಡಿಕೊಳ್ಳುವುದಕ್ಕೆ ತುಂಬಾ ಧೈರ್ಯ ಬೇಕಾಗಿತ್ತು .ಈ ನ್ಯೂಲುಕ್ ನನಗೆ ತುಂಬಾ ಇಷ್ಟವಾಯ್ತು' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ಅಭಿಮಾನಿಗಳಲ್ಲಿ ಕೆಲವರು ಐಶಾನಿ ಟ್ರೆಂಡಿ ಹೇರ್ ಕಟ್ ಬಗ್ಗೆ ಹೊಗಳಿದರೆ ಇನ್ನು ಕೆಲವರು ಯಾಕೆ ಸಣ್ಣಗಾಗಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
' ಸೂರ್ಯ-ಚಂದ್ರರು ಕಾತರಿಸಿವೇ,ತಮ್ಮ ಸೌಂದರ್ಯ ನೋಡಲು, ಕೋಗಿಲೆ ನಾಚುತ್ತಿದೆ ತಮ್ಮ ಮಧುರ ಧ್ವನಿ ಕೇಳಿ, ಹುಡುಕಿ ಸಾಕಾಗಿದೆ ಸಂಗೀತ ತಮ್ಮ ಧ್ವನಿಯಲ್ಲಿ ಇರುವ ನಾದ ಯಾವ ವಾದ್ಯದ್ದು? ಸಾವು ಗೆಲ್ಲಲು ಕರೋನಾ ರೋಗಿಗಳಿಗೆ ತಮ್ಮ ಧ್ವನಿ ಒಂದಿದ್ದರೇ ಸಾಕು. # My 1st crush' .ಹೀಗೆ ಐಶಾನಿ ಶೆಟ್ಟಿ ಅಪ್ಪಟ್ಟ ಅಭಿಮಾನಿ ಪ್ರವೀಣ್ ಮನಸಕಟ್ಟಿ ಕಾಮೆಂಟ್ ಬಾಕ್ಸ್‌ನಲ್ಲಿ ಕವಿತೆಯನ್ನು ಬರೆದಿದ್ದಾರೆ. ಇದಕ್ಕೆ ಐಶಾನಿ 'ಥ್ಯಾಂಕ್ಸ್' ಎಂದು ಮರು ಕಾಮೆಂಟ್ ಮಾಡಿದ್ದಾರೆ.
ನಾನು ಮತ್ತು ವರಮಹಾಲಕ್ಷ್ಮಿ; ಐವರು ತಾರೆಯರ ಹಬ್ಬದ ಸಂಭ್ರಮ!
ಕನ್ನಡ ಚಿತ್ರರಂಗದ ಬೇಡಿಕೆಯ ನಟಿ ಐಶಾನಿ ಶೆಟ್ಟಿ ಸದ್ಯಕ್ಕೆ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಹಾಗೂ 'ಹೊಂದಿಸಿ ಬರೆಯಿರಿ' ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.