
ಒಳ್ಳೆ ಹುಡುಗ ಪ್ರಥಮ್ ಅಭಿನಯಿಸಿ, ನಿರ್ದೇಶಿಸುತ್ತಿರುವ ಸಿನಿಮಾ ನಟಭಯಂಕರ. ಕನ್ನಡ ಸಿನಿ ಪ್ರೇಮಿಗಳ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು ಪ್ರಥಮ್ ಪ್ರತಿ ಅಪ್‌ಡೇಟ್‌ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಆದರೆ ಈ ಬಾರಿ ಬೇಸರದ ಸಂಗತಿಯೊಂದನ್ನು ಹೇಳಿಕೊಂಡಿದ್ದಾರೆ. ಅದುವೇ ಚಿತ್ರದ ನಾಯಕಿಗೆ ಕೊರೋನಾ ಸೋಂಕು ದೃಢಪಟ್ಟಿರುವುದು.
ಎಂದೂ ಹುಟ್ಟುಹಬ್ಬ ಆಚರಿಸದ ಹಿರಿಯ ನಟನಿಂದ ಕೇಕ್ ಕಟ್ ಮಾಡಿಸಿದ ಪ್ರಥಮ್!
ಹೌದು! ಪ್ರಥಮ್ ಚಿತ್ರದಲ್ಲಿ ಅಭಿನಯಿಸುತ್ತಿರುವ ನಿಹಾರಿಕಾ ಅವರಿಗೆ ಕೋವಿಡ್19 ಪಾಸಿಟಿವ್ ಎಂದು ತಿಳಿದು ಬಂದಿದೆ. 'ನಟಭಯಂಕರ ಸಿನಿಮಾದ ನಾಯಕಿಯಾದ ನಿಹಾರಿಕಾಗೆ ಕರೋನಾ positive ಎಂಬ ವಿಚಾರ ನಿಜಕ್ಕೂ ತುಂಬಾ ಬೇಸರವಾಯ್ತು. ಬಹಳ ಪ್ರತಿಭಾವಂತೆಯಾದ ನಿಹಾರಿಕಾ ರವರು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅಂದಹಾಗೆ ಇದು ಅವ್ರಿಗೆ ಕೊರೋನಾ ಬರೋಕೂ ಸ್ವಲ್ಪ ಹಿಂದಿನ ಫೋಟೋ! ನನಗೆ ಯಾವ ಕರೋನಾನೂ ಇಲ್ಲ! ನನಗೇನಾದ್ರೂ ಕೊರೋನಾ ಬಂದ್ರೆ ಇಡೀ ಕರ್ನಾಟಕವನ್ನೇ quarantineನಲ್ಲಿ ಇಡಬೇಕಾಗುತ್ತೆ! ಅಷ್ಟೋಂದು ಓಡಾಡಿ ಬಿಟ್ಟಿದೀನಿ ನಾನು! ನನಗೆ ಕರೋನಾ ಬರೋಕೆ ಛಾನ್ಸೇ ಇಲ್ಲ ಬಿಡಿ!
ಸರಿ.ನಿಹಾರಿಕಾ ರವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ!' ಎಂದು ಪ್ರಥಮ್ ಬರೆದುಕೊಂಡಿದ್ದಾರೆ.
ಪ್ರಥಮ್ ವಿಚಾರ ತಿಳಿಸುತ್ತಿದ್ದಂತೆ ಅಭಿಮಾನಿಗಳು ಇಬ್ಬರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. 'ಕೊರೋನಾಗೆ ಕೊರೋನಾ ಬರುವುದಿಲ್ಲ ಬಿಡಿ ಸರ್...' ಎಂದು ಪ್ರಥಮ್ ಕಾಲೆಳೆದಿದ್ದಾರೆ ನೆಟ್ಟಿಗರು. ಇನ್ನೂ ಕೆಲವರು 'ಸರ್ ನಿಮ್ಮ ಮೆಸೇಜ್ ಓದುವುದಕ್ಕೆ ಒಳ್ಳೆ ಮಜಾ ಬರುತ್ತೆ,' ಎಂದೂ ಹೇಳಿದ್ದಾರೆ.
ಬಿಗ್‌ಬಾಸ್ ಪ್ರಥಮ್ 99 ಲಕ್ಷಕ್ಕೊಬ್ಬ, 'ನಟ ಭಯಂಕರ'ನ ಮತ್ತೊಂದು ಸಾಹಸ!
ಕೆಲವು ದಿನಗಳ ಹಿಂದೆ ತಮ್ಮ ಊರಿನಲ್ಲಿ ಪ್ರಥಮ್ ಪ್ರತಿದಿನ ಕುರಿ ಮೇಯಿಸೋದು, ಹಾಲು ಕರೆಯೋದು ಕಲಿತಿದ್ದಾರೆ. ಅಲ್ಲದೇ ಸುಮಾರು 35-40 ಮೇಕೆ ಮರಿಗಳನ್ನು ಖರೀಸಿದ್ದಾರೆ. ಒಟ್ಟಿನಲ್ಲಿ ಒಳ್ಳೆ ಹುಡುಗ ಏನಾದರೂ ಕೆಲಸ ಮಾಡುತ್ತಾ, ಬ್ಯುಸಿಯಾಗಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.