'ಯೆಲ್ಲೋ ಗ್ಯಾಂಗ್‌' ಟೀಸರ್‌ ನೋಡಿ ಮರುಳಾಗಿ; ಭಟ್ಟರ ಹುಡುಗರ ಸಿನಿಮಾ!

Kannadaprabha News   | Asianet News
Published : Dec 14, 2020, 09:21 AM ISTUpdated : Dec 14, 2020, 02:12 PM IST
'ಯೆಲ್ಲೋ ಗ್ಯಾಂಗ್‌' ಟೀಸರ್‌ ನೋಡಿ ಮರುಳಾಗಿ; ಭಟ್ಟರ ಹುಡುಗರ ಸಿನಿಮಾ!

ಸಾರಾಂಶ

‘ಯೆಲ್ಲೋ ಗ್ಯಾಂಗ್ಸ್‌’ ಚಿತ್ರದ ಟೀಸರ್‌ ಅನ್ನು ನಿರ್ದೇಶಕ ಯೋಗರಾಜ್‌ ಭಟ್‌ ಬಿಡುಗಡೆ ಮಾಡಿದ್ದಾರೆ. ರವೀಂದ್ರ ಪರಮೇಶ್ವರಪ್ಪ ನಿರ್ದೇಶನದ ಈ ಚಿತ್ರವನ್ನು ವಿಭಿನ್ನ ಸ್ಟುಡಿಯೋಸ್‌, ಕೀ ಲೈಟ್ಸ್‌ ಹಾಗೂ ವಾಟ್‌ ನೆಕ್ಟ್$್ಸ ಮೂವೀಸ್‌ ಸಂಸ್ಥೆಗಳ ಅಡಿ ನಿರ್ಮಾಣ ಮಾಡಲಾಗುತ್ತಿದೆ. 

ನಾಯಕ, ನಾಯಕಿ ಹಾಗೂ ವಿಲನ್‌ ಎಂಬ ರೆಗ್ಯುಲರ್‌ ಸಿನಿಮಾ ಆಚೆಗೆ ನಿಲ್ಲುವ ಕತೆಯನ್ನು ಆಯ್ಕೆ ಮಾಡಿಕೊಂಡು ಈ ಗ್ಯಾಂಗ್‌ ಮೂಲಕ ಪ್ರಯೋಗಾತ್ಮಕ ಸಿನಿಮಾ ರೂಪಿಸಿದ್ದಾರಂತೆ ನಿರ್ದೇಶಕರು.

"

ಇದೊಂದು ಕ್ರೈಮ್‌ ಥ್ರಿಲ್ಲರ್‌. ಕನ್ನಡದ ಮಟ್ಟಿಗೆ ಇದೊಂದು ಹೊಸ ಬಗೆಯ ಸಿನಿಮಾ. ಇಂಥ ಪ್ರಯೋಗಗಳು ತೀರಾ ಕಡಿಮೆ. ಅದು ‘ಯೆಲ್ಲೋ ಗ್ಯಾಂಗ್ಸ್‌’ ಚಿತ್ರದ ಮೂಲಕ ಆಗಿದೆ ಎಂಬುದು ನಿರ್ದೇಶಕರ ಮಾತು. ಬಲರಾಜ್ವಾಡಿ, ನಾಟ್ಯ ರಂಗ, ದೇವ್‌ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ಇಮ್ಮತ್ತಾಲ್‌, ಪ್ರದೀಪ್‌ ಪೂಜಾರಿ, ವಿನೀತ್‌ ಕಟ್ಟಿ, ಮಲ್ಲಿಕಾರ್ಜುನ ದೇವರಮನೆ, ನಂದಗೋಪಾಲ್‌, ರವಿ ಗಜ ಜಿಗಣಿ, ನೀನಾಸಂ ದಯಾನಂದ್‌, ಸತ್ಯ ಬಿ ಜಿ, ವಿಠ್ಠಲ್‌ ಪರೀಟ, ಅರುಣ್‌ ಕುಮಾರ್‌, ಶ್ರೀಹರ್ಷ, ಸಂಚಾರಿ ಮಧು, ಪ್ರವೀಣ್‌ ಕೆ ಬಿ, ಪವನ್‌ಕುಮಾರ್‌ ಕೆ ಚಿತ್ರದಲ್ಲಿ ನಟಿಸುತ್ತಿದ್ದಾರೆ.

'Yellow ಗ್ಯಾಂಗ್ಸ್' ಟೀಸರ್ ರಿಲೀಸ್! 

‘ಈ ಚಿತ್ರದ ಟೀಸರ್‌ ನೋಡಿದರೆ ಹೊಸ ಕ್ರೈಮ್‌ ಕತೆಯನ್ನು ಪ್ರೇಕ್ಷಕರ ಮುಂದೆ ಇಡುತ್ತಿದ್ದಾರೆ ಅನಿಸುತ್ತದೆ. ಇಂಥ ಹೊಸ ಬಗೆಯ ಸಿನಿಮಾಗಳು ಹೆಚ್ಚಾಗಲಿ. ಯೆಲ್ಲೋ ಗ್ಯಾಂಗ್ಸ್‌ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ’ ಎಂದು ನಿರ್ದೇಶಕ ಯೋಗರಾಜ್‌ ಭಟ್‌ ಹಾರೈಸಿದರು. ರೋಹಿತ್‌ ಸೋವರ್‌ ಸಂಗೀತ, ಸುಜ್ಞಾನ್‌ ಕ್ಯಾಮೆರಾ ಚಿತ್ರಕ್ಕಿದೆ. ನಿರ್ದೇಶಕರ ಜತೆ ಸೇರಿ ಪ್ರವೀಣ್‌ ಕುಮಾರ್‌ ಜಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಜೈಲಿನಲ್ಲಿಯೂ 'ಡಿ ಬಾಸ್' ದರ್ಬಾರ್: ಮಲಗಿದ್ದ ಸಹ ಕೈದಿಗಳನ್ನು ಕಾಲಿನಿಂದ ಒದ್ದು ನಟ ದರ್ಶನ್ ದರ್ಪ