ಧನಂಜಯ್ 'ಹೆಡ್‌ಬುಷ್' ಚಿತ್ರಕ್ಕೆ ಲೂಸ್‌ಮಾದ ಯೋಗೀಶ್ ಎಂಟ್ರಿ!

By Suvarna News  |  First Published Aug 24, 2021, 12:23 PM IST

'ಲಂಕೆ' ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದ್ದಂತೆ, ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ ಲೂಸ್‌ಮಾದ. 


ಡಾಲಿ ಧನಂಜಯ್ ನಟನೆಯ 'ಹೆಡ್‌ಬುಷ್' ಚಿತ್ರದಲ್ಲಿ ಲೂಸ್‌ ಮಾದ ಯೋಗೀಶ್ ನಟಿಸುತ್ತಿದ್ದಾರೆ. ಇನ್ನೂ ಇವರ ಪಾತ್ರದ ಚಿತ್ರೀಕರಣ ಆರಂಭವಾಗಿಲ್ಲ. ಆದರೆ, ತುಂಬಾ ಪ್ರಮುಖವಾದ ಪಾತ್ರ ಮಾಡಲಿದ್ದಾರೆ ಎಂಬುವುದು ಸ್ವತಃ ಧನಂಜಯ್ ಅವರೇ ಹೇಳಿದ್ದಾರೆ. 

‘ನಾನು ಯೋಗಿ ಜತೆಯಾಗಿ ಸಿನಿಮಾ ಮಾಡುತ್ತಿದ್ದೇವೆ. ಹೆಡ್ ಬುಷ್‌ಗೆ ಅವರು ಬರುತ್ತಿದ್ದಾರೆ. ತುಂಬಾ ದೊಡ್ಡ ಮಟ್ಟದಲ್ಲಿ ಅವರನ್ನ ನಮ್ಮ ಚಿತ್ರಕ್ಕೆ ಸ್ವಾಗತಿಸುವ ತಯಾರಿ ಮಾಡಿಕೊಂಡಿದ್ದೇವೆ. ವಿಶೇಷವಾದ ರೀತಿಯಲ್ಲಿ ಅವರ ಪಾತ್ರವನ್ನು ರಿವೀಲ್ ಮಾಡಲಿದ್ದೇವೆ,’ ಎಂಬುವುದು ಧನಂಜಯ್ ಅವರ ಮಾತು.  ಶೂನ್ಯ ಅವರು ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

ಲೂಸ್‌ ಮಾದ ಯೋಗಿ ಪುತ್ರಿ ವಿಡಿಯೋ ವೈರಲ್; ಟ್ವಿಂಕಲ್ ಹಾಡು ಕೇಳಿದ್ದೀರಾ?

Tap to resize

Latest Videos

ಆಗಸ್ಟ್ 23ರಂದು ಡಾಲಿ ಧನಂಜಯ್ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಯೋಗಿ ಅವರೊಂದಿಗೆ ಸೆಲ್ಫೀ ಹಂಚಿ ಕೊಂಡಿದ್ದಾರೆ. 'ಹ್ಯಾಪಿ ಬರ್ತಡೇ ಬಡ್ಡಿ' ಎಂದು ಯೋಗೀಶ್ ಬರೆದು ಕೊಂಡಿದ್ದಾರೆ. 'ಥ್ಯಾಂಕ್ಸ್‌ ಡಿಯರೆಸ್ಟ್‌ ಬ್ರದರ್ ಯೋಗಿ' ಎಂದು ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ಲಂಕೆ ಚಿತ್ರದ ಟೀಸರ್ ಹಾಗೂ ಟ್ರೈಲರ್ ಯೋಗಿ ಪರ್ಫಾರ್ಮೆನ್ಸ್‌ ನೋಡಿ ಸಿನಿ ರಸಿಕರು ಚಿತ್ರದ ಬಗ್ಗೆ ಇರುವ ನಿರೀಕ್ಷೆ ಹೆಚ್ಚಾಗಿದೆ ಎಂದಿದ್ದಾರೆ.

 

click me!