ಮಹಿಳಾ ದಿನಾಚರಣೆಯಂದು 2ನೇ ಜನ್ಮ ಪಡೆದ ನಿರ್ದೇಶಕ ಸಿಂಪಲ್ ಸುನಿ!

Published : Mar 09, 2019, 01:33 PM IST
ಮಹಿಳಾ ದಿನಾಚರಣೆಯಂದು 2ನೇ ಜನ್ಮ ಪಡೆದ ನಿರ್ದೇಶಕ ಸಿಂಪಲ್ ಸುನಿ!

ಸಾರಾಂಶ

  ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಮಾರ್ಚ್ 8 ರಂದು 2ನೇ ಜನುಮ ಪಡೆದಿರುವುದಾಗಿ ಪೋಸ್ಟ್ ಮಾಡಿದ್ದಾರೆ. ಅದುವೇ ಸಿಂಪಲ್ಲಾಗ್ ಒಂದ್ love story ಚಿತ್ರದ ಮೂಲಕ.

ಸಿಂಪಲ್ ಸುನಿ ಎಂದು ಖ್ಯಾತರಾಗಲು ಈ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರವೇ ಕಾರಣ. ಮಾರ್ಚ್ 8, 2013 ರಂದು ಈ ಚಿತ್ರ ರಿಲೀಸಾಗಿತ್ತು.

ರಕ್ಷಿತ್ ಶೆಟ್ಟಿ ಹಾಗೂ ಶ್ವೇತಾ ಅಭಿನಯದ ಸೂಪರ್ ಹಿಟ್ ಚಿತ್ರ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ. ಈ ಸಿನಿಮಾ 2013 ರಲ್ಲಿ ಹೊಸದೊಂದು ಸಂಚಲನ ಮೂಡಿಸಿತ್ತು. ಡಬಲ್ ಮೀನಿಂಗ್ ಡೈಲಾಗ್ ಮೂಲಕ ಕ್ರಿಯೇಟಿವ್ ಟ್ರೆಂಡ್ ಹುಟ್ಟು ಹಾಕಿತ್ತು. 30 ರಿಂದ 40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ ಇದಾಗಿದ್ದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು.

'ಯಜಮಾನ'ನಿಗೆ ಸಿಂಪಲ್ ಸುನಿ ನೀಡಿದ ಸಂದೇಶವಿದು!

ಇದರ ಬಗ್ಗೆ ಸ್ವತಃ ಸಿಂಪಲ್ ಸುನಿ ಟ್ಟೀಟ್ ಮಾಡಿದ್ದಾರೆ. ‘ಮಾರ್ಚ್ 8, 2013 ರಂದು ನನ್ನ ಜನ್ಮವಾಗಿತ್ತು. ಇಡೀ ಕರುನಾಡು ಬಿಗಿದಪ್ಪಿಕೊಂಡಿತ್ತು. ಇಂದಿಗೆ 6ನೇ ವರ್ಷದ ನೆನಪಿನ ರೂವಾರಿ ಈ ಸಿಂಪಲ್ಲಾಗ್ ಒಂದ್ Love story ’ ಎಂದು ಬರೆದುಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್