ದರ್ಶನ್ ಸಹಾಯ ನೆನೆದು ಕಣ್ಣೀರಿಟ್ಟ ಕಾಮಿಡಿ ಕಿಲಾಡಿ ಸಂಜು!

Published : Mar 09, 2019, 12:18 PM IST
ದರ್ಶನ್ ಸಹಾಯ ನೆನೆದು ಕಣ್ಣೀರಿಟ್ಟ ಕಾಮಿಡಿ ಕಿಲಾಡಿ ಸಂಜು!

ಸಾರಾಂಶ

ಎಡಗೈಯಲ್ಲಿ ಮಾಡಿದ ಸಹಾಯ ಬಲಗೈಗೆ ಗೊತ್ತಾಗಬಾರದಂತೆ! ಅದಕ್ಕೆ ಉದಾಹರಣೆ ದರ್ಶನ್ ಅಂದ್ರೆ ತಪ್ಪಾಗದು. ತನ್ನ ಸುತ್ತ ಇರುವ ಪ್ರತಿಯೊಂದು ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಮೂಲಕ ಸಹಾಯ ಮಾಡಿದ್ದಾರೆ.

ಯಜಮಾನ ಚಿತ್ರದಲ್ಲಿ ತಾರಾಂಗಣ ಬಹಳ ದೊಡ್ಡದು. ಬಿಗ್ ಸ್ಕ್ರೀನ್ ನಟರೂ ಹಾಗೂ ಕಿರುತೆರೆ ಕಲಾವಿದರೂ ಸೇರಿ ಮಾಡಿರುವ ಸಿನಿಮಾ ಇದಾಗಿದೆ.

ಕಾಮಿಡಿ ಕಿಲಾಡಿ ಖ್ಯಾತಿಯ ಸಂಜು ಬಸಯ್ಯಾ, ಶಿವರಾಜ್ ಕೆ. ಆರ್ ಪೇಟೆ ಹಾಗೂ ಹಿತೇಶ್ ಹಾಸ್ಯ ಕಲಾವಿದರಾಗಿ ಸಾಧು ಕೋಕಿಲ ಜೋಡಿ ಆಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅಭಿನಯಿಸಿರುವ ನಟರು ವೇದಿಕೆ ಮೇಲೆ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡುವಾಗ ‘ಏನೂ ಮಾತನಾಡೋಕೆ ನನಗೆ ಗೊತ್ತಿಲ್ಲ. ಸಿನಿಮಾದಲ್ಲಿ ನಮಗೆ ಅವಕಾಶ ಕೊಟ್ಟ ದರ್ಶನ್ ಸರ್ ಹಾಗೂ ಹರಿ ಕೖಷ್ಣ ಸರ್ ಗೆ ನಾವು ಕೃತಜ್ಞರಾಗಿರುತ್ತೇವೆ’ ಎಂದು ಭಾವುಕರಾಗಿ ಸಂಜು ಬಸಯ್ಯಾ ಕಣ್ಣೀರಿಟ್ಟರು.

ದರ್ಶನ್ ಹಾಗೂ ದೇವರಾಜ್ ಕಣ್ಣಲ್ಲೇ ಮಾತಾಡ್ತಾರಂತೆ; ಹೌದಾ?

‘ಮೀಡಿಯಾ ಹೌಸ್ ಗೆ ನನ್ನ ಥ್ಯಾಂಕ್ಸ್. ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಅಭಿನಯಿಸುವಾಗ ನಮ್ಮನ್ನು ನೋಡಿ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ. ನಾನು ಯಾವಾಗಲೂ ಹೇಳುತ್ತಿದ್ದೆ. ನಮ್ಮ ಖುಷಿ ಏನಂದ್ರೆ ದರ್ಶನ್ ಅಣ್ಣನ ಹಿಂದೆ ಕೈ ಕಟ್ಟಿ ನಿಲ್ಲುವುದು ಒಂದು ಭಾಗ್ಯ. ನಾನು ಈ ವೇದಿಕೆಯಲ್ಲಿ ನಿಲ್ಲುವುದಕ್ಕೆ ದರ್ಶನ್ ಸರ್, ಹರಿಕೃಷ್ಣ ಸರ್ ಕಾರಣ ’ ಎಂದು ಕಾಮಿಡಿ ಕಿಲಾಡಿ ಹಿತೇಶ್ ಮಾತನಾಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

The Devil Movie Review: ದರ್ಶನ್‌ ದಿ ಡೆವಿಲ್‌ ಸಿನಿಮಾದ ಹೈಲೈಟ್ಸ್‌ ಏನು? ಡೆವಿಲ್‌ Part 2 ಬರುತ್ತಾ!
The Devil Movie: ಏನ್ರೀ ಹವಾ ಇದು... ಗಿಲ್ಲಿ ನಟ ಎಣ್ಣೆಯಲ್ಲಿ ಮುಖ ತೊಳ್ಕೊಂಡಿದ್ದಾರೆ ಎಂದ ವೀಕ್ಷಕರು