ದರ್ಶನ್‌ ಆರೋಗ್ಯ 'ಫಸ್ಟ್ ಕ್ಲಾಸ್'; ಡಿಸ್ಚಾರ್ಜ್‌ ಆದ್ಮೇಲೆ ದಾಸ ಹೇಳಿದ್ದಿಷ್ಟು..

By Suvarna NewsFirst Published Mar 5, 2020, 10:24 AM IST
Highlights

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಡಿಸ್ಚಾರ್ಜ್‌ ಆದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಅಷ್ಟಕ್ಕೂ ಕರುನಾಡ ದಾಸ ಅಭಿಮಾನಿಗಳಿಗೆ ಹೇಳಿದ್ದೇನು?

ಕನ್ನಡ ಚಿತ್ರರಂಗದ ಬಾಕ್ಸ್‌ ಆಫೀಸ್‌ ಸುಲ್ತಾನ್‌ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ನಿನ್ನೆ (ಮಾ.4ರಂದು) ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ತಕ್ಷಣವೇ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಸಕಲ ಚಿಕಿತ್ಸೆ ಹಾಗೂ ಪರೀಕ್ಷೆ ಬಳಿಕ ಅವರಿಗೆ ಗ್ಯಾಸ್ಟ್ರಿಕ್‌ ಸಮಸ್ಯೆ ಇತ್ತೆಂದು ಹೇಳಲಾಗಿದೆ. 

'ಒಂದು ಮುಂಜಾನೆ.... ಎಂದು ಹಾಡುತ್ತಾ ಪತ್ನಿ ಜೊತೆ ಪಾರ್ಕ್‌ನಲ್ಲಿ ಸುತ್ತಾಡಿದ ದರ್ಶನ್

ಇತ್ತೀಚಿಗೆ ಹಲವು ಕುದುರೆಗಳನ್ನು ಖರೀದಿಸಿರುವ ದರ್ಶನ್‌ ಸಿನಿಮಾ ಶೂಟಿಂಗ್‌ನಿಂದ ಬ್ರೇಕ್‌ ತೆಗೆದುಕೊಂಡು, ತಮ್ಮ ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿ ಸಮಯ ಕಳೆಯುತ್ತಿದ್ದರು. ಈ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಅಗತ್ಯ ಚಿಕಿತ್ಸೆ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಈ ಹಿಂದೆ ಮೈಸೂರಿನಲ್ಲಿ ಅಪಘಾತಗೊಂಡಿದ್ದ ದರ್ಶನ್‌ಗೆ ಕೈ ಸರ್ಜರಿ ಮಾಡಿದ್ದರು. ಅಲ್ಲದೇ ಇದೀಗ ಅಗತ್ಯವಿರುವ ಮೂತ್ರಪಿಂಡ ಹಾಗೂ ಹೃದಯ ಪರೀಕ್ಷೆಗಳನ್ನೂ ಮಾಡಿಸಲಾಗಿದ್ದು, ಎಲ್ಲವೂ ನಾರ್ಮಲ್ ಆಗಿದೆ ಎಂದು ಹೇಳಲಾಗಿದೆ. ಡಾ.ಅನುಪ್‌ ಆಳ್ವಾ ದರ್ಶನ್‌ಗೆ ಚಿಕಿತ್ಸೆ ನೀಡಿದ್ದು, ಆರೋಗ್ಯವಾಗಿದ್ದಾರೆಂದು ವರದಿ ನೀಡಿದ್ದಾರೆ.

ಡಿಸ್ಚಾರ್ಜ್‌ ಆದ ಬಳಿಕ ಹೊರ ಬಂದ 43 ವರ್ಷಗಳ ದರ್ಶನ್‌ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 'ನಾನು ಫರ್ಸ್ಟ್‌ ಕ್ಲಾಸ್‌ ಆಗಿದ್ದೀನಿ, ಏನೂ ಆಗಿಲ್ಲ. ಟೈಂ ಇಲ್ಲ, ಇನ್ಮೇಲೆ ಆರೋಗ್ಯದೆಡೆ ಗಮನ ಹರಿಸುವುವೆ,' ಎಂದು ಹೇಳಿದ್ದಾರೆ.

"

click me!