ರಿಲೀಸ್‌ ಮೊದಲು ಭಯ ಇತ್ತು, ರಿಲೀಸಾದ ಮೇಲೆ ಕಣ್ಣೀರು ಬಂತು: ಭೂಮಿ ಶೆಟ್ಟಿ ಸಂದರ್ಶನ

By Kannadaprabha NewsFirst Published Jul 23, 2021, 9:27 AM IST
Highlights

ಈಶಮ್‌ ಖಾನ್‌, ಹಸೀನ್‌ ಖಾನ್‌ ನಿರ್ದೇಶನದ ‘ಇಕ್ಕಟ್‌’ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ‘ಇಕ್ಕಟ್‌’ ಸಿನಿಮಾ ಮೇಲೆ ಜನ ತುಂಬಾ ಪ್ರೀತಿ ತೋರಿಸುತ್ತಿದ್ದಾರೆ. ನೋಡಿದವರೆಲ್ಲಾ ಚೆನ್ನಾಗಿದೆ ಅನ್ನುತ್ತಿದ್ದಾರೆ. ನಾಯಕ ನಾಗಭೂಷಣ್‌, ನಾಯಕಿ ಭೂಮಿ ಶೆಟ್ಟಿಯವರನ್ನು ಮೆಚ್ಚುತ್ತಿದ್ದಾರೆ. ‘ಇಕ್ಕಟ್‌’ ಮೂಲಕ ಚಿತ್ರರಂಗಕ್ಕೆ ಬಲಗಾಲಿಟ್ಟು ಒಳಗೆ ಬಂದಿರುವ ಭೂಮಿ ಶೆಟ್ಟಿಸಂದರ್ಶನ ಇಲ್ಲಿದೆ.

ರಾಜೇಶ್‌ ಶೆಟ್ಟಿ

ಮೊದಲ ಸಿನಿಮಾ ರಿಲೀಸಾಗಿದೆ, ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಏನನ್ನಿಸಿತು?

ನಾನು ಪೂರ್ತಿ ಸಿನಿಮಾ ನೋಡಿರಲಿಲ್ಲ. ನಿನ್ನೆ ನೋಡಿದೆ. ರಿಲೀಸ್‌ ಆಗುವ ಮೊದಲು ಭಯ ಆಗುತ್ತಿತ್ತು. ನನ್ನ ಮೊದಲ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿ ರಿಲೀಸ್‌ ಆಗುತ್ತದೆ ಎನ್ನುವ ನಿರೀಕ್ಷೆಯೇ ನನಗೆ ಇರಲಿಲ್ಲ. ರಿಲೀಸಾದ ಮೇಲೆ ಕಣ್ಣೀರು ಬಂತು. ಜನ ನನ್ನನ್ನು ಮೆಚ್ಚಿ ಸೋಷಿಯಲ್‌ ಮೀಡಿಯಾದಲ್ಲಿ ಟ್ಯಾಗ್‌ ಮಾಡಿದ್ದನ್ನು ನೋಡಿ ಖುಷಿಯಾಯಿತು. ಹೊಸ ಹುಮ್ಮಸ್ಸು, ಹೊಸ ಹುರುಪು ಬಂದಿದೆ. ಹೊಸತೊಂದು ದಾರಿ ಕೈ ಹಿಡಿದು ಎಳೆದುಕೊಂಡಿದೆ.

ವೃತ್ತಿ ಪಯಣಕ್ಕೆ ತಿರುವು ಕೊಡುವ ಸಿನಿಮಾ ಇಕ್ಕಟ್: ನಾಗಭೂಷಣ್

ಇಕ್ಕಟ್‌ ನಿಮ್ಮ ಲೈಫಿಗೆ ಯಾಕೆ ಮುಖ್ಯ?

ಬಿಗ್‌ ಬಾಸ್‌ ಮುಗಿದ ಮೇಲೆ ಇನ್ನು ತುಂಬಾ ಅವಕಾಶ ಸಿಗುತ್ತದೆ ಎಂದು ಖುಷಿಯಿಂದ ಬಂದರೆ ಲಾಕ್‌ಡೌನ್‌ ಆಯಿತು. ಮನೆಯಲ್ಲೇ ಟಾಸ್ಕ್‌ ಇಲ್ಲದ ಬಿಗ್‌ ಬಾಸ್‌ ಕಾರ್ಯಕ್ರಮ. ಅಜ್ಜ, ಅಜ್ಜಿ, ಅಪ್ಪ, ಅಮ್ಮನ ಜೊತೆ ಸಮಯ ಕಳೆದೆ. ಗದ್ದೆಯಲ್ಲಿ ಕೆಲಸ ಮಾಡಿದೆ. ಏನೋ ಒಂಚೂರು ಹೊಸತು ಕಲಿತೆ. ಆ ಸಮಯದಲ್ಲೇ ನಂಗೆ ಇಕ್ಕಟ್‌ ಸಿನಿಮಾ ಸಿಕ್ಕಿತು. ಅದರ ಶೂಟಿಂಗ್‌ ಇತ್ಯಾದಿ ಮುಗಿಸುವಷ್ಟರಲ್ಲಿ ಮತ್ತೆ ಲಾಕ್‌ಡೌನ್‌. ಊರಿಗೆ ಬೈಕಲ್ಲಿ ರೈಡ್‌ ಹೋದೆ. ಇಡೀ ಜಗತ್ತಿಗೆ ಆದ ಶೂನ್ಯ ಭಾವ ನನ್ನನ್ನೂ ಆವರಿಸಿತ್ತು. ವಾಪಸ್‌ ಮತ್ತೆ ಹಳಿಗೆ ಮರಳುವುದಕ್ಕೊಂದು ಅವಕಾಶ ಬೇಕಿತ್ತು. ದಾರಿ ಬೇಕಿತ್ತು. ಇಕ್ಕಟ್‌ ಸಿನಿಮಾ ನಂಗೆ ವಿಶ್ವಾಸವನ್ನು ಹೆಚ್ಚು ಮಾಡಿದೆ. ಹೊಸ ದಿಗಂತ ಎದುರು ನೋಡುತ್ತಿದ್ದೇನೆ.

ಮೊದಲ ಸಿನಿಮಾದ ಶೂಟಿಂಗ್‌ ಅನುಭವ ಹೇಗಿತ್ತು?

ಎಲ್ಲರೂ ಗೊತ್ತಿರುವವರೇ ಹತ್ತಿರದಲ್ಲಿದ್ದಾಗ ಯಾವುದೂ ಕಷ್ಟಅನ್ನಿಸಲ್ಲ. ಆರಂಭದಲ್ಲಿ ಆತಂಕ ಇದ್ದರೂ ನಂತರ ಎಲ್ಲವೂ ಸುಲಭವಾಯಿತು. ಎಲ್ಲರೂ ನನ್ನನ್ನು ಕೈ ಹಿಡಿದು ಕರೆದೊಯ್ದರು ಅನ್ನುವುದೇ ಸರಿ. ಎಲ್ಲರಿಗೂ ಋುಣಿ.

ಮುಂದ?

ಇಕ್ಕಟ್‌ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಇಷ್ಟೊಂದು ಪ್ರೀತಿ ಸಿಗುವ ನಿರೀಕ್ಷೆ ಇರಲಿಲ್ಲ. ಈಗ ಸಂತೋಷವಿದೆ. ಹೊಸ ಸಿನಿಮಾಗಳ ನಿರೀಕ್ಷೆಯಲ್ಲಿದ್ದೇನೆ. ಪ್ರೇಕ್ಷಕರ ಮನಸ್ಸಲ್ಲಿ ಪರಿಣಾಮ ಬೀರುವ ಪಾತ್ರವಾಗಲು ಹಂಬಲಿಸುತ್ತಿದ್ದೇನೆ.

ಇಕ್ಕಟ್‌ ನಕ್ಕು ಹಗುರಾಗುವ ಸಿನಿಮಾ. ಗಂಭೀರ ಸಿನಿಮಾ ಅಲ್ಲ. ಮನೆ ಮಂದಿ ಒಟ್ಟಿಗೆ ಕೂತು ನಕ್ಕು ಹಗುರಾದರೆ ಅದೇ ಸಾರ್ಥಕತೆ. ಅಮೆಜಾನ್‌ ಪ್ರೈಮ್‌ನವರು ಈ ಸಿನಿಮಾ ಖರೀದಿ ಮಾಡಿದ್ದಾರೆ. ಇಕ್ಕಟ್‌ ತಂಡಕ್ಕೆ ಸಿಗಬೇಕಾದ ಹಣ ಬಂದಿದೆ. ಜಾಸ್ತಿ ಮಂದಿ ಈ ಸಿನಿಮಾ ನೋಡಿದರೆ ಮುಂದೆ ಬರುವ ಕನ್ನಡ ಸಿನಿಮಾಗಳು ಓಟಿಟಿಯಲ್ಲಿ ಪ್ರಸಾರವಾಗುವುದು ಸುಲಭವಾಗುತ್ತದೆ.- ಪವನ್‌ಕುಮಾರ್‌

ಲೈಫು ಹೇಗಿದೆ?

ಹೊಸತು ಕಲಿಯುವ ಆಸೆ ನನಗೆ. ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಹತ್ತಿಕೊಂಡು ರೈಡ್‌ ಹೋಗುವುದು ಅಂದ್ರೆ ಸಕತ್‌ ಇಷ್ಟ. ನನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳುವುದು ಅಗತ್ಯ. ಅದಕ್ಕಾಗಿ ಹೊಸತೇನಾದರೂ ಮಾಡುತ್ತಿರುತ್ತೇನೆ. ಮಾನಸಿಕವಾಗಿ, ದೈಹಿಕವಾಗಿ ಫಿಟ್‌ನೆಸ್‌ ನೋಡಿಕೊಳ್ಳಬೇಕು. ಒಂಥರಾ ಗೋ ವಿತ್‌ ದ ಫೆä್ಲೕ ಎಂಬ ಆ್ಯಟಿಟ್ಯೂಡು ನನ್ನದು. ಆಗೋದೆಲ್ಲಾ ಒಳ್ಳೆಯದಕ್ಕೆ ಅಂತ ಮುಂದೆ ಹೋಗ್ತಾ ಇರೋದು. ಹ್ಯಾಪ್ಪಿಯಾಗಿರೋದು.

click me!