ತಮ್ಮ ಚಿತ್ರಕ್ಕೇ ಟಿಕೆಟ್‌ ಸಿಗದೇ ಬ್ಲಾಕ್‌ನಲ್ಲಿ ಖರೀದಿಸೋ ಸ್ಥಿತಿ ಬಂತು ಈ ನಿರ್ದೇಶಕರಿಗೆ!

By Suvarna NewsFirst Published May 11, 2020, 3:30 PM IST
Highlights

ಇದೇನಪ್ಪಾ ಬ್ಲಾಕ್‌ ಟಿಕೆಟ್‌ ಮಾರೋದು ತಪ್ಪು ಅನ್ನೋ ನಿರ್ದೇಶಕರೇ ಫ್ಯಾಮಿಲಿ ಜೊತೆ ಬ್ಲಾಕ್‌ ಟಿಕೆಟ್‌ ಖರೀದಿಸಿ ಅವರ ಸಿನಿಮಾ ನೋಡಿದ್ರಾ?  ಇದರ ಹಿಂದಿನ ಕಥೆನೇ ಬೇರೆ ಇದೆ.....  

ದಿನೇ ದಿನೇ  ಕನ್ನಡ ಚಿತ್ರರಂಗದ ಸಿನಿಮಾಗಳಿಗೆ ಚಿತ್ರಮಂದಿರದಲ್ಲಿ ಹಾಗೂ ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ವೀಕೆಂಡ್‌ ಅಂತು ಕೇಳೋದೆ ಬೇಡ ಹೌಸ್‌ಫುಲ್‌ ಅಗಿ ನೆಕ್ಸ್ಟ್ ಶೋಗೆ ಕಾಯಬೇಕು. ಬಹುತೇಕರ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿಕೊಳ್ಳುತ್ತಾರೆ ಆದರೆ ಕೆಲವರು ಅಲ್ಲೇ ಹೋಗಿ ಖರೀದಿಸಿ ಸಿನಿಮಾ ನೋಡ್ತಾರೆ.

ಇಲ್ಲೊಬ್ಬ  ನಿರ್ದೇಶಕ ಸಿನಿಮಾ ಟಿಕೆಟ್‌ನ ಬ್ಲಾಕ್‌ನಲ್ಲಿ ಖರೀದಿಸಿದ್ದಾರಂತೆ...

2019ರಲ್ಲಿ ಹರಿಪ್ರಿಯಾ ಹಾಗೂ ರಿಷಬ್‌ ಶೆಟ್ಟಿ ಕಾಂಬಿನೇಷನಲ್‌ ಸೂಪರ್‌ ಹಿಟ್‌ ಸಿನಿಮಾ 'ಬೆಲ್‌ ಬಾಟಮ್' ಚಿತ್ರದ  ನಿರ್ದೇಶಕ ಜಯತೀರ್ಥ ತನ್ನ ಸಿನಿಮಾ ನೋಡುವುದಕ್ಕೆ ತನಗೇ ಟಿಕೆಟ್‌ ಸಿಗದಂಥ  ಪರಿಸ್ಥಿತಿ ಎದರಾಗಿತ್ತಂತೆ . 

'Bell Bottom' ನಟನ ಹೃದಯದ ಬೆಲ್‌ ಹೊಡೆದ ರಿಯಲ್ ಹೀರೋಯಿನ್!

ಚಿತ್ರ ತೆರೆ ಕಾಣುತ್ತಿದ್ದಂತೆ ಪ್ರಚಾರ ಮಾಡುವುದಕ್ಕೆ ರಿಲೀಸ್‌ ದಿನ ಚಿತ್ರತಂಡ ಭಾಗಿಯಾಗುವುದು ಕಾಮನ್‌ ಆದರೆ ಫ್ಯಾಮಿಲಿ ಜತೆ ಸಿನಿಮಾ ನೋಡೋಣ ಅಂತ ಥಿಯೇಟರ್ ಗೆ ಹೋದ್ರೆ ಅವರಿಗೇ ಟಿಕೆಟ್ ಸಿಗದೇ ನಿರ್ದೇಶಕ  ಜಯತೀರ್ಥ ಬ್ಲಾಕ್‌ನಲ್ಲಿ ಟಿಕೆಟ್‌ ಖರೀದಿಸಿದ್ದಾರೆ. ಆದರೆ ಇಲ್ಲೊಂದು ಮೆಸೇಜ್‌ ತಿಳಿದುಕೊಂಡಿದ್ದಾರೆ.

ಟಿಕೆಟ್‌ ಮಾರುವವನ ಫಿಲಾಸಫಿ: 

ಬ್ಲಾಕ್‌ ಟಿಕೆಟ್‌ ಮಾರುವವನ ಬಳಿ ಸಿನಿಮಾ ಹೇಗಿದೆ ಎಂದು ಕೇಳಬೇಕು ಅಂತ ಜಯತೀರ್ಥ ವಿಡಿಯೋ ಮಾಡಿದ್ದಾರೆ. ಇದನ್ನು  ಫೇಸ್‌ಬುಕ್‌ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ಬೆಂಗಳೂರಿನ ವೀರೇಶ್  ಚಿತ್ರಮಂದಿರದಲ್ಲಿ ನಡೆದ ಘಟನೆ.

ಮಾರ್ಚ್‌ 10 ಭಾನುವಾರ ರಾತ್ರಿ 9 ಗಂಟೆ ಶೋ ನೋಡಲು ಜಯತೀರ್ಥ ಫ್ಯಾಮಿಲಿಯನ್ನು ವಿರೇಶ್‌ ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿದ್ದಾರೆ.ಥಿಯೇಟರ್‌ ಹೌಸ್‌ ಫುಲ್‌ ಆದ ಕಾರಣ ಬ್ಲಾಕ್‌ನಲ್ಲಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ. 'ಇನ್ನೂರು ರೂಪಾಯಿ  ಬಾಲ್ಕಾನಿ ಇರೋದು ಸರ್. ಬರಿ ಆರು ಟಿಕೆಟ್‌ ಇದೆ. ಫಿಲ್ಮ್‌ ಹೆಂಗೆ ಕಿತ್ಕೊಂಡು ಹೋಗ್ತಿದೆ ಗೊತ್ತಾ ಈ ವಾರ. ನನಗೆ ಆಶ್ಚರ್ಯ ಆಗುತ್ತೆ.  ಹೋದ್ ವಾರ ಈ ರೀತಿ ಕಲೆಕ್ಷನ್‌ ಇರ್ಲಿಲ್ಲ. ಇದೆಲ್ಲಾ ಫ್ಯಾಮಿಲಿ ಫಿಲ್ಮಂ ಆಗಿರೋದಿಕ್ಕೆ ಎರಡನೇ ವಾರದ ಮೇಲೆ ರೈಸ್‌ ಆಗೋದು. ಸುಮ್ನೆ ಅದೆಲ್ಲಾ ಕೊಚ್ಚು ಕೊಚ್ಚು ಕೊಚ್ಚು ಅನ್ನೋ ಪಿಕ್ಚರಲ್ಲ  ಒಂದು ವಾರ ಅಷ್ಟೆ ಅದನ್ನೇ ನಂಬಿದರೇ  ನಾನು ಕೊಚ್ಚು  ಕೊಚ್ಚು  ಅಂದರೆ ಕೊಚ್ಚಿಕೊಂಡು ಹೋಗಬೇಕಾಗುತ್ತದೆ' ಎಂದು ಹೇಳುತ್ತಾ ಫ್ಯಾಮಿಲಿ ಫಿಲ್ಮಂಗಳ ಮಹತ್ವ ಹೇಳಿದ್ದಾನೆ ಟಿಕೆಟ್ ಮಾರುವವನು.

ಚಿತ್ರ ವಿಮರ್ಶೆ: ರೆಟ್ರೋ ಫೀಲಿಂಗು ಮೆಟ್ರೋ ಪಂಚಿಂಗು ‘ಬೆಲ್ ಬಾಟಮ್’!

ಬ್ಲಾಕ್‌ ಟಿಕೆಟ್‌ ಮಾಡುವವನು ಅಲ್ಲಿಗೆ ಮಾತು ನಿಲ್ಲಿಸದೇ  ಮುಂದುವರಿಸುತ್ತಾ 'ಬೆಲ್ ಬಾಟಂ ಬಾಲ್ಕಾನಿಗೆ ಇನ್ನೂರು. ಇಡೀ ಇಂಡಿಯಾ ಹುಡುಕಿದರೂ ಬಾಲ್ಕಾನಿ ಟಿಕೆಟ್‌ ಸಿಗೋದು ಕಷ್ಟ.  ನಾನು ಧೈರ್ಯ ಮಾಡಿ ನೂರೈವತ್ತಕ್ಕೆ ಇಸ್ಕೋಂಡಿದ್ದೇನೆ. ಸುಮ್ಮನೆ ಅಲ್ಲ ಬೇಕಾದರೆ ತಗೊಳ್ಳಿ. ಇನ್ನು 10 ನಿಮಿಷ ಅಷ್ಟೆ ಎಲ್ಲಾ ಟಿಕೆಟ್‌ ಮಾರ್ತಿನಿ ನೋಡಿ. ಬ್ಲಾಕ್‌ನಲ್ಲಿ ಮಾರುವುದು ನನಗೆ  20 ವರ್ಷ ಸರ್ವೀಸ್‌.ಮೆಜೆಸ್ಟಿಕ್‌ನಲ್ಲಿ ಯಾವ ಸಿನಿಮಾ ಬಗ್ಗೆ ಬೇಕು ಹೇಳಿ ಹೇಳ್ತೀನಿ.  ಬಾಲ್ಕಾನಿ ಅಂದ್ರೆ ನನಗೆ ಹುಡುಕಿಕೊಂಡು ಬರೋದು' ಎಂದು ನಾನ್‌ ಸ್ಟಾಪ್‌ ಮಾತನಾಡಿದ್ದಾನೆ.

 

ಆ ದಿನಗಳಗೆ ಕಾಯುತ್ತಿರುವೆ:

ಈ ವಿಡಿಯೋವನ್ನು ಶೇರ್ ಮಾಡಿಕೊಂಡ ಜಯತೀರ್ಥ ಮಹಾಮಾರಿ ಕೊರೋನಾ ವೈರಸ್‌ ಬೇಗ ನಮ್ಮ ದೇಶ ಬಿಟ್ಟು ತೊಲಗಲಿ. ಚಿತ್ರರಂಗದ ಸಂಭ್ರಮದ ದಿನಗಳು ವಾಪಸ್‌ ಬರಲಿ ಎಂದು ಆಶಿಸುತ್ತಿದ್ದಾರೆ.

click me!