Baang Teaser: ಗ್ಯಾಂಗ್‌ಸ್ಟರ್‌ ಲುಕ್‌ನಲ್ಲಿ ಶಾನ್ವಿ ಶ್ರೀವಾಸ್ತವ್‌-ರಘು ದೀಕ್ಷಿತ್‌

Suvarna News   | Asianet News
Published : Dec 01, 2021, 07:40 PM IST
Baang Teaser: ಗ್ಯಾಂಗ್‌ಸ್ಟರ್‌ ಲುಕ್‌ನಲ್ಲಿ ಶಾನ್ವಿ ಶ್ರೀವಾಸ್ತವ್‌-ರಘು ದೀಕ್ಷಿತ್‌

ಸಾರಾಂಶ

ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವಾಸ್ತವ್‌ ಅವರು ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ನಟಿಸುತ್ತಿರುವ 'ಬ್ಯಾಂಗ್‌' ಸಿನಿಮಾದ ಟೀಸರ್‌ ಆನಂದ್‌ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಯಾಗಿದ್ದು, ಡ್ಯಾಡಿ ಪಾತ್ರದಲ್ಲಿ ಗಾಯಕ ರಘು ದೀಕ್ಷಿತ್‌ ಕಾಣಿಸಿಕೊಂಡಿದ್ದಾರೆ.

'ಗ್ಯಾಂಗ್‌ಸ್ಟರ್‌ (Gangster) ಪಾತ್ರಕ್ಕೆ ಆಫರ್‌ ಬಂದಾಗ ಒಬ್ಬ ಹೀರೋಯಿನ್‌ ಆಗಿ ಒಪ್ಪಿಕೊಳ್ಳೋಕೆ ಹಿಂಜರಿಕೆ ಆಗಿತ್ತು. ಆದರೆ ನಟಿಯಾಗಿ ಈ ಥರ ಪಾತ್ರ ಮತ್ತೆ ಸಿಗೋದು ಕಷ್ಟಅಂತ ಅನಿಸ್ತಿತ್ತು. ಕೊನೆಗೂ ನೆಗೆಟಿವ್‌ ಶೇಡ್‌ನ ಗ್ಯಾಂಗ್‌ಸ್ಟರ್‌ ಲಿಯೋನಾ ಪಾತ್ರದಲ್ಲಿ ನಟಿಸಿದಾಗ ನನ್ನೊಳಗಿನ ಕಲಾವಿದೆಗೆ ತೃಪ್ತಿ ಆಯ್ತು' ಅಂದರು ನಟಿ ಶಾನ್ವಿ ಶ್ರೀವಾಸ್ತವ್‌ (Shanvi Srivastava). ಅವರು ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ನಟಿಸುತ್ತಿರುವ 'ಬ್ಯಾಂಗ್‌' (Baang) ಸಿನಿಮಾದ ಟೀಸರ್‌ (Teaser) ಆನಂದ್‌ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ಟೀಸರ್‌ ಬಿಡುಗಡೆ ವೇಳೆ ನಡೆದ ಸುದ್ದಿಗೋಷ್ಠಿಯಲ್ಲಿ ಶಾನ್ವಿ ಮಾತನಾಡಿದರು. 'ಗ್ಯಾಂಗ್‌ಸ್ಟರ್‌ ಕಾಸ್ಟ್ಯೂಮ್‌ ಹಾಕ್ಕೊಂಡ ಮೇಲೆ ಫುಲ್‌ ಕಾನ್ಫಿಡೆನ್ಸ್‌ ಬಂತು. ಈ ಪ್ರಯೋಗ ನನಗೆ ಖುಷಿ ಕೊಟ್ಟಿದೆ' ಎಂದರು.

ನಿರ್ದೇಶಕ ಶ್ರೀಗಣೇಶ್‌ ಪರಶುರಾಮ್‌ (Ganesh Parashuram), 'ಇದೊಂದು ಬ್ಲ್ಯಾಕ್‌ ಕಾಮಿಡಿ ಆ್ಯಕ್ಷನ್‌ ಚಿತ್ರ'. 48 ಗಂಟೆಗಳಲ್ಲಿ ನಡೆಯುವ ಘಟನೆಯೊಂದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ನಾಲ್ವರು ಇಂಜಿನಿಯರಿಂಗ್‌ ಹುಡುಗರು ನೈಟ್‌ಔಟ್‌ಗೆ ಹೋದಾಗ ಆಗುವ ಭಯಾನಕ ಅನುಭವವೇ ಈ ಸಿನಿಮಾದ ಒನ್‌ಲೈನ್‌. ಸಾನ್ವಿ ಜೊತೆಗೆ ಗಾಯಕ ರಘು ದೀಕ್ಷಿತ್‌ (Raghu Dixit) ಮೊದಲ ಬಾರಿ ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಟ್ಯ ರಂಗ, ಸಾತ್ವಿಕಾ, ರಿತ್ವಿಕ್‌ ಮುರಳೀಧರ, ಸುನೀಲ್‌ ಗುಜ್ಜಾರ್‌ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ಮಾಪಕಿ ಪೂಜಾ ವಸಂತ್‌, ಗಾಯಕ ರಘು ದೀಕ್ಷಿತ್‌, ಎಕ್ಸಿಕ್ಯುಟಿವ್‌ ಪ್ರೊಡ್ಯೂಸರ್‌ ಹಾಗೂ ಸಂಕಲನಕಾರ ವಿಜಯಚಂದ್ರ, ಛಾಯಾಗ್ರಾಹಕ ಉದಯಚಂದ್ರ, ಆನಂದ್‌ ಆಡಿಯೋದ ಮಣಿ ಸೇರಿದಂತೆ ಚಿತ್ರತಂಡದವರು ಹಾಜರಿದ್ದರು.

ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಶಾನ್ವಿ ಶ್ರೀವಾಸ್ತವ್..! ರಗಡ್ ಲುಕ್ ಹೇಗಿರ್ಬೋದು..?

'ಬ್ಯಾಂಗ್' ಸಂಗೀತ ನಿರ್ದೇಶಕ ರಿತ್ವಿಕ್ ಹಾಗೂ ನಿರ್ದೇಶಕ ಶ್ರೀ ಗಣೇಶ್ ಮಾತನಾಡಲು ಮನೆಗೆ ಬಂದರು. ನಾನು ಸಂಗೀತ ನಿರ್ದೇಶನ ಅಥವಾ ಹಾಡು ಹಾಡಿಸುವುದಕ್ಕಾಗಿ ಕೇಳಲು ಮನೆಗೆ ಬಂದಿದ್ದಾರೆ ಅಂದು ಕೊಂಡೆ. ನಂತರ ಅವರು ನೀವು ಈ ಚಿತ್ರದಲ್ಲಿ ನಟಿಸಬೇಕೆಂದರು.‌ 'ಸುಮ್ಮನೆ ತಲೆ ತಿನ್ನಬೇಡಿ ಎದ್ದು ಹೋಗಿ,' ಎಂದಿದ್ದೆ. ಒಳ್ಳೆಯ ಮನಸ್ಸಿರುವ ಸ್ಟೈಲಿಶ್ ಡಾನ್ ಪಾತ್ರ ಇದಾಗಿದ್ದು, ನಾನೇ ಮಾಡಬೇಕೆಂದು ಒಪ್ಪಿಸಿದರು. ನಂತರ ಅವರ ಒತ್ತಡಕ್ಕೆ ಮಣಿದು ಒಪ್ಪಿಕೊಂಡೆ. ಡ್ಯಾಡಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಳ್ಳೆಯ ನಿರ್ಮಾಪಕರೊಂದಿಗೆ ಹಾಗೂ ಚಿತ್ರತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ' ಎಂದು ರಘು ದೀಕ್ಷಿತ್ ಹೇಳಿದರು. ವಿಶೇಷವಾಗಿ ಟೀಸರ್‌ನಲ್ಲಿ ಪಂಚಿಂಗ್ ಡೈಲಾಗ್ ಹೇಳಿ, ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ನಟಿ ಶಾನ್ವಿ ಶ್ರೀವಾಸ್ತವಗೆ ಗಾಯ!

ಇನ್ನು ಈ ಚಿತ್ರದಲ್ಲಿ ಸಂಗೀತ ನಿರ್ದೇಶಕ ರಿತ್ವಿಕ್‌ ಮುರಳೀಧರ್ ಪ್ರಮುಖ ಪಾತ್ರದಲಲ್ಲಿ ಕಾಣಿಸಿಕೊಂಡಿದ್ದಾರೆ. ಉದಯ್ ಲೀಲಾ ಕ್ಯಾಮರಾ ಕೈಚಳಕವಿರುವ 'ಬ್ಯಾಂಗ್' ಚಿತ್ರದಲ್ಲಿ ಸಾತ್ವಿಕ, ರಿತ್ವಿಕ್ ಮುರಳೀಧರ್, ನಾಟ್ಯ ರಂಗ, ಸುನಿಲ್ ಗುಜ್ಜರ್, ಜಹಾಂಗೀರ್, ನಾಗೇಂದ್ರ ಶಾ ಸೇರಿದಂತೆ ಮುಂತಾದವರು ಅಭಿನಯಿಸಿದ್ದಾರೆ. ವಿಜೇತ್ ಚಂದ್ರ ಸಂಕಲನದ ಜೊತೆಗೆ ಕಾರ್ಯಕಾರಿ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದು, ಯುಕೆ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರವು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಫೆಬ್ರವರಿಯಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದ್ದು, ‌ಜನವರಿಯಲ್ಲಿ ಚಿತ್ರದ ಟ್ರೇಲರ್ (Trialer) ಬಿಡುಗಡೆಯಾಗಲಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?