
ಸ್ಯಾಂಡಲ್‌ವುಡ್ ಯುವ ನಟ ಚಿರಂಜೀವಿ ಸರ್ಜಾ ನಮ್ಮನ್ನಗಲಿ ತಿಂಗಳುಗಳೇ ಕಳೆದರು ಅವರ ಅಭಿಮಾನಿಗಳು ಹೃದಯದಲ್ಲಿಟ್ಟು ಕೊಂಡು ಪೂಜಿಸುತ್ತಾ, ಆರಾಧಿಸುತ್ತಿದ್ದಾರೆ. ಚಿರಂಜೀವಿ ವಿಚಾರವನ್ನು ಹೊರತು ಪಡಿಸಿ ಏನನ್ನೂ ಶೇರ್ ಮಾಡದ ಮೇಘನಾ ರಾಜ್ ಇಂದು ವಿಶೇಷ ಫೋಟೋವನ್ನು ಶೇರ್ ಮಾಡಿದ್ದಾರೆ.
ಅಗಲಿದ ನಟನಿಗೆ ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಗೌರವ; ಅಜರಾಮರವಾಯ್ತು ಚಿರು ಅಕೌಂಟ್!
ಪೆನ್ಸಿಲ್ ಸ್ಕೆಚ್:
ಆರ್ಟಿಸ್ಟ್ ಸಾಲಿಯಾನ್ ಪೆನ್ಸಿಲ್ ಸ್ಕೆಚ್‌ನಲ್ಲಿ ಮೂಡಿಸಿರುವ ಚಿರಂಜೀವಿ ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಪೋರಿಯಲ್ಲಿ ಶೇರ್ ಮಾಡಿದ್ದಾರೆ. ಇದರ ಬಗ್ಗೆ ಏನೂ ಬರೆದಿಲ್ಲವಾದರೂ ಚಿರು ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.
ಚಿರಂಜೀವಿ ಸರ್ಜಾ ಒಂದು ತಿಂಗಳ ಪುಣ್ಯಸ್ಮರಣೆ ದಿನ ಮೇಘನಾ ತಮ್ಮ ಸ್ನೇಹಿತ ಜೊತೆಗಿರುವ ಫೋಟೋ ಹಂಚಿಕೊಂಡು ಪತಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದರು.
ಧ್ರುವ ಆರೋಗ್ಯ:
ಲೋ ಬಿಪಿಯಿಂದ ಚೇತರಿಸಿಕೊಳ್ಳುತ್ತಿರುವ ಧ್ರುವ ಸರ್ಜಾ ದಂಪತಿಗೆ ಕೋವಿಡ್19 ಪಾಸಿಟಿವ್ ಇರುವುದನ್ನು ಅವರೇ ಖಚಿತ ಪಡಿಸಿದ್ದರು. ಇಬ್ಬರೂ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಈಗ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಈ ಮಧ್ಯೆ ಧ್ರುವ ಚೇತರಿಸಿಕೊಳ್ಳುತ್ತಿರುವ ವಿಡಿಯೋ ಶೇರ್ ಮಾಡಿದ್ದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.