5 ವರ್ಷದ ಬಳಿಕವೂ ನಿಂತಿಲ್ಲ 'ಕುರುಕ್ಷೇತ್ರ'ದ ಶಾಪ; ಅಂಬಿ, ದರ್ಶನ್, ನಿಖಿಲ್, ಮೇಘನಾ....ಇನ್ನು ಯಾರಿದ್ದಾರೆ?

By Vaishnavi ChandrashekarFirst Published Sep 18, 2024, 5:19 PM IST
Highlights

ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿರುವ ಪ್ರತಿಯೊಬ್ಬರಿಗೂ ಸಂಕಷ್ಟ. ಸಿನಿಮಾ ಮುಗಿಸಿದ ಮೇಲೆ ಏನಾದರೂ ಮಾಡಬೇಕಿತ್ತು ಅನ್ನೋ ಜನರಿಗೆ ಉತ್ತರ.....

ನಿರ್ಮಾಪಕ ಮುನಿರತ್ನ ಜೈಲು ಸೇರಿದ ಬೆನ್ನಲ್ಲೇ ಕನ್ನಡ ಸಿನಿರಂಗದಲ್ಲಿ ಒಂದು ಚರ್ಚೆ ಶುರುವಾಗಿದೆ. ಕುರುಕ್ಷೇತ್ರ ಸಿನಿಮಾದಲ್ಲಿ ದುರ್ಯೋಧನನಾಗಿ ನಟಿಸಿದ ದರ್ಶನ್ ಜೈಲು ಸೇರಿದ್ದರು ಅದಾದ ಮೇಲೆ ನಿರ್ಮಾಪಕ ಮುನಿರತ್ನ ಕೂಡ ಜೈಲು ಪಾಲಾಗಿದ್ದಾರೆ. ಇವರಷ್ಟೇ ಅಲ್ಲ ಕುರುಕ್ಷೇತ್ರ ಚಿತ್ರಕ್ಕೆ ಕೆಲಸ ಮಾಡಿದ ಅನೇಕ ಕಲಾವಿದರು, ತಂತ್ರಜ್ಞರಿಗೆ ನಾನಾ ತೊಂದರೆ ಆಗಿದೆ. ಇದಕ್ಕೆಲ್ಲಾ ಕುರುಕ್ಷೇತ್ರದ ಶಾಪ ಅಂತ ಸ್ಯಾಂಡಲ್​ವುಡ್​​ನಲ್ಲಿ ಹೊಸ ಟಾಕ್ ಎದ್ದಿದೆ. ಹಾಗಾದ್ರೆ ದರ್ಶನ್​​ ಕುರುಕ್ಷೇತ್ರ ಸಿನಿಮಾದಲ್ಲಿದ್ದವರ ಕಥೆ ಏನೇನಾಗಿದೆ.

ಮುನಿರತ್ನ ಕುರುಕ್ಷೇತ್ರ.. ಕನ್ನಡದ ಪೌರಾಣಿಕ ಸಿನಿಮಾ. ನಟ ದರ್ಶನ್​ ಸಿನಿ ಕರಿಯರ್‌ನ ವಿಶೇಷ ಸಿನಿಮಾ. ಆಂಧ್ರದಲ್ಲಿ ಬಾಹುಬಲಿ ಸಿನಿಮಾ ನಿರ್ಮಾಣ ಆಗಿದ್ದೇ ತಡ. ನಾವು ಕೂಡ ಅಂತಹ ಸಿನಿಮಾ ಮಾಡಿ ತೋರಿಸುತ್ತೇನೆ ಅಂತ ನಿರ್ಮಾಪಕ ಮನಿರತ್ನ, ನಟ ದರ್ಶನ್​ ಹೆಜ್ಜೆ ಇಟ್ಟೇ ಬಿಟ್ಟಿರು. ನಾನಾ ಅಡ ತಡೆಗಳು ಬಂದರೂ ಕುರುಕ್ಷೇತ್ರವನ್ನು ಈ ಜೋಡಿ ತೆರೆ ಮೇಲೆ ತಂದುವಿಟ್ಟರು. ಇದೀಗ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ್ದ ದರ್ಶನ್​ ಜೈಲುವಾಸ ಅನುಭವಿಸುತ್ತಿದ್ದಾರೆ. ಅತ್ತ ನಿರ್ಮಾಪಕ ಕಂ ಶಾಸಕ ಮುನಿರತ್ನ ಅರೆಸ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಗಾಂಧಿನಗರದಲ್ಲಿ ಒಂದು ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಮುನಿರತ್ನ ಅರೆಸ್ಟ್ ಆಗೋಕೆ 5 ವರ್ಷಗಳ ಹಿಂದೆ ಅವರು ನಿರ್ಮಿಸಿದ್ದ ಕುರುಕ್ಷೇತ್ರ ಸಿನಿಮಾನೇ ಕಾರಣ. ದರ್ಶನ್ ಜೈಲು ಸೇರೋಕೆ ಕುರುಕ್ಷೇತ್ರದ ಶಾಪ ಕಾರಣ ಅನ್ನಲಾಗ್ತಾ ಇದೆ. 

Latest Videos

ಕೃಷ್ಣ ಜನ್ಮ ಸ್ಥಾನ ಸೇರಿದ ನಟ ದರ್ಶನ್ ಮತ್ತು ನಿರ್ಮಾಪಕ ಮುನಿರತ್ನ; 'ಕುರುಕ್ಷೇತ್ರ'ದಲ್ಲಿ ಆಗಿದ್ದ ಎಡವಟ್ಟು ಏನು?

ಅಂಬರೀಶ್:

ನಿಮಗೆಲ್ಲಾ ಗೊತ್ತಿರೋ ಹಾಗೆ ಕುರುಕ್ಷೇತ್ರ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಭೀಷ್ಮನ ಪಾತ್ರ ಮಾಡಿದ್ರು. ಸಿನಿಮಾದ ಕೊನೆಯಲ್ಲಿ ಬಾಣದ ಹಾಸಿಗೆ ಮೇಲೆ ಸಾಯುವ ದೃಶ್ಯ ಶೂಟ್ ಮಾಡಲಾಗಿತ್ತು. ದುರಂತ ಅಂದ್ರೆ ಈ ಸಿನಿಮಾ ತೆರೆಗೆ ಬರುವ ಮುನ್ನವೇ ಅಂಬಿ ನಮ್ಮನ್ನ ಅಗಲಿದ್ರು.

ನಿಖಿಲ್ ಕುಮಾರಸ್ವಾಮಿ:

ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದು ನಿಖೀಲ್ ಕುಮಾರ್ ಸ್ವಾಮಿ. ಅಭಿಮನ್ಯು  ಚಕ್ರವ್ಯೂಹದಲ್ಲಿ ಸಿಲುಕಿ ಸೋತಂತೆ ನಿಖಿಲ್ ರಾಜಕೀಯ ಚಕ್ರವ್ಯೂಹದಲ್ಲಿ ಸೋತು ಸುಣ್ಣವಾಗಿದ್ದಾರೆ. ಎಂಪಿ, ಮತ್ತು ಎಂ ಎಲ್ ಎ ಚುನಾವಣೆ ಎರಡನ್ನೂ ನಿಖಿಲ್ ಥೇಟ್ ಅಭಿಮನ್ಯುವಿನಂತೆಯೇ ಗೆಲ್ಲಲಾಗಲಿಲ್ಲ. 

ಮೇಘನಾ:

ಇನ್ನೂ ಈ ಸಿನಿಮಾದಲ್ಲಿ ದುರ್ಯೋಧನ ಪತ್ನಿ ಭಾನುಮತಿ ಪಾತ್ರ ಮಾಡಿದ್ದು ನಟಿ ಮೇಘನಾ ರಾಜ್. ಭಾನುಮತಿಯ ಪಾತ್ರ ಮಾಡಿದ್ದೇ ಮಾಡಿದ್ದು, ಮೇಘನಾ ಬದುಕೇ ಅಲ್ಲೋಲ ಕಲ್ಲೋಲ ಆಗೋಯ್ತು. ಪ್ರೀತಿಸಿ ವರಿಸಿದ್ದ ಪತಿ ಚಿರಂಜೀವಿ ಸರ್ಜಾ ಅಕಾಲ ಮರಣಕ್ಕೆ ತುತ್ತಾದ್ದರು. ಸೇಮ್ ಸಿನಿಮಾದಲ್ಲಿ ಪತಿಯನ್ನ ಕಳೆದುಕೊಳ್ಳವಂತೆ ನಿಜ ಬದುಕಲ್ಲೂ ಮೇಘನಾ ಗಂಡ ಚಿರುನ ಕಳೆದುಕೊಂಡರು.

ಇನ್ನೂ ಈ ಸಿನಿಮಾದಲ್ಲಿ  ಕರ್ಣನ ಪಾತ್ರ ಮಾಡಿದ್ದು ಅರ್ಜುನ್ ಸರ್ಜಾ. ಕರ್ಣ ಹೇಳಿ ಕೇಳಿ ಶಾಪಗ್ರಸ್ತ. ದುರಂತ ಅಂದ್ರೆ ಈ ಸಿನಿಮಾದಲ್ಲಿ ನಟಿಸ್ತಾ ಇದ್ದ ವೇಳೆಯೇ ಅರ್ಜುನ್ ಸರ್ಜಾ ಮೇಲೆ ಮೀಟು ಆರೋಪ ಕೇಳಿ ಬಂತು. 4 ದಶಕಗಳ ವೃತ್ತಿಜೀವನದಲ್ಲಿ ಒಂದೇ ಒಂದು ಕಳಂಕವಿಲ್ಲದ ನಟನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಇದು ಜಸ್ಟ್ ಎಕ್ಸಾಂಪಲ್ ಅಷ್ಟೇ ಇದೇ ರೀತಿ ಇನ್ನೂ ಹಲವು ಕಲಾವಿದರಿಗೆ , ತಂತ್ರಜ್ಞರಿಗೆ ಕುರುಕ್ಷೇತ್ರ ಸಿನಿಮಾ ಮಾಡಿದ ಮೇಲೆ ತೊಂದರೆಯಾಗಿದೆಯಂತೆ. 

click me!