
ಒಂದು ಸಿನಿಮಾದ ಇನ್ವಿಟೇಷನ್ ಅಂದ್ರೆ ಅದು ಹಾಡುಗಳು. ಹಾಡುಗಳು ಜನರನ್ನು ಸಿನಿಮಾ ಥಿಯೇಟರ್ ಗೆ ಕರೆದುಕೊಂಡು ಬರುವ ಶಕ್ತಿ ಇರುತ್ತದೆ. ಈಗ ಅಂತಹದ್ದೇ ಒಂದು ನಿರೀಕ್ಷೆ ಹುಟ್ಟಿಸಿರುವ ಗಾನಲಹರಿ ವೆಡ್ಡಿಂಗ್ ಗಿಫ್ಟ್ ಸಿನಿಮಾದಿಂದ ಹೊರಬಂದಿದೆ.
ವೆಡ್ಡಿಂಗ್ ಗಿಫ್ಟ್ ಡ್ಯುಯೆಟ್ ಹಾಡು ಕೇಳಿದ್ರಾ?
ಸಿನಿಶುಕ್ರವಾರ ವೆಡ್ಡಿಂಗ್ ಗಿಫ್ಟ್ ಸಿನಿಮಾ ಟೀಂ ಸಂಗೀತ ಪ್ರಿಯರ ಮನ ತಣಿಸಿ ಕುಣಿಸುವ ಚೆಂದದ ಡ್ಯುಯೇಟ್ ಹಾಡೊಂದನ್ನು ಬಿಡುಗಡೆ ಮಾಡಿದೆ. ಪ್ರೀತಿಯಲ್ಲಿ ಬೀಳುವ ಪ್ರೇಮಿಗಳ ನಡುವಿನ ಸುಮಧುರ ಬಾಂಧವ್ಯವನ್ನು ವರ್ಣಿಸುವ ಹಾಡಿಗೆ ಅಷ್ಟೇ ಮಾಧುರ್ಯಭರಿತ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ ನೀಡಿದ್ದು, ಬಾಲಚಂದ್ರ ಪ್ರಭು ಮ್ಯೂಸಿಕ್ ಹಾಗೂ ಕಂಠಸಿರಿ ಹಾಡಿನ ಘಮಲನ್ನು ಮತ್ತಷ್ಟು ಹೆಚ್ಚಿಸಿದೆ.
‘ವೆಡ್ಡಿಂಗ್ ಗಿಫ್ಟ್’ ನಿಂದ ಮತ್ತೊಂದು ‘ರೋಮಾಂಚಕ’ ಸಾಂಗ್ ರಿಲೀಸ್!
ಈ ಮೊದಲು ರಿಲೀಸ್ ಅಗಿದ್ದ 'ಮೊದಲ ಪ್ರೀತಿಯ ಪಯಣದ' ಹಾಡು ಕೇಳುಗರನ್ನು ಮೋಡಿ ಮಾಡಿತ್ತು. ಈಗ ಬಿಡುಗಡೆಯಾಗಿರುವ ರೋಮಾಂಚಕ, ಡ್ಯುಯೆಟ್ ಸಾಂಗ್ ಸಿಂಗಿಂಗು ಕೇಳುಗರನ್ನು ಮಂತ್ರಮುಗ್ದರನ್ನಾಗಿ ಮಾಡುತ್ತಿದೆ. ನಾಯಕಿ ಸೋನು ಗೌಡ ಹಾಗೂ ನಾಯಕ ನಿಶಾನ್ ಅಭಿನಯ ಹಾಡಿನ ತೂಕವನ್ನು ಹೆಚ್ಚಿಸಿದೆ. ಥ್ರಿಲ್ಲರ್ ಜಾನರ್ ಸಿನಿಮಾವಾಗಿರುವ ವೆಡ್ಡಿಂಗ್ ಗಿಫ್ಟ್ ಸಿನಿಮಾದಲ್ಲಿ ಈಗಿನ ಕಾಲದ ಕೆಲ ಹೆಣ್ಣುಮಕ್ಕಳು ಕಾನೂನುಗಳನ್ನು
ದುರುಪಯೋಗಪಡಿಸಿಕೊಂಡು ಗಂಡು ಮಕ್ಕಳಿಗೆ ಹೇಗೆಲ್ಲಾ ಕಷ್ಟದ ಕೂಪಕ್ಕೆ ತಳ್ಳುತ್ತಾರೆ ಅನ್ನೋದನ್ನು ಸಿನಿಮಾದ ಕಥಾವಸ್ತುವನ್ನಾಗಿರಿಸಿಕೊಂಡು ವಿಕ್ರಮ್ ಪ್ರಭು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ತಾವೇ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.
ವೆಡ್ಡಿಂಗ್ ಗಿಫ್ಟ್ ಸಿನಿಮಾ ಮೂಲಕ ಪ್ರೇಮ ಮತ್ತೆ ಬಣ್ಣ ಹಚ್ಚಿದ್ದು, ಲಾಯರ್ ಪಾತ್ರ ಪೋಷಣೆ ಮಾಡಿದ್ದಾರೆ. ಉಳಿದಂತೆ ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್ ಸೇರಿದಂತೆ ಹಲವು ಅನುಭವಿ ತಾರಾಬಳಗ ಸಿನಿಮಾದಲ್ಲಿದೆ. ಉದಯ್ ಲೀಲಾ ಛಾಯಾಗ್ರಹಣ, ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ರಿಲೀಸ್ ಗೆ ಚಿತ್ರತಂಡ ಎದುರು ನೋಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.