ಅಲ್ಲಿ ಮಾರ್ನಿಂಗ್ ನಾಲ್ಕೂವರೆಯಿಂದ ಆರೂವರೆತನಕ ಟ್ರಕ್ಕಿಂಗ್ ಮಾಡಿದ್ವಿ. ಆ ಟೈಗರ್ ಫಾರೆಸ್ಟ್ ಸ್ಪಾಟ್ ನಿಜಕ್ಕೂ ಅತ್ಯದ್ಭುತವಾಗಿತ್ತು' ಎಂದಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್. 'ಗಂಧದ ಗುಡಿ' ಡಾಕ್ಯುಮೆಂಟರಿ..
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಒಂದು ಸೀಕ್ರೆಟ್ ಘಟನೆಯನ್ನು ಹಂಚಿಕೊಂಡಿದ್ದಾರೆ. ಅದೊಂದು ದಿನ ನಟ ಹಾಗೂ ಅಶ್ವಿನಿ ಪತಿ ಪುನೀತ್ ಅವರು ಕಾಲ್ ಮಾಡಿ 'ನಾವು ಕಾಳಿ ರಿವರ್ ಬಳಿ ಶೂಟಿಂಗ್ ಮಾಡ್ತಾ ಇದೀವಿ. ಈ ಫೋನ್ ಕಾಲ್ ಮಾಡೋಕೆ ಬೆಟ್ಟ ಹತ್ತಬೇಕಾಯ್ತು ಅಂತ. ಆವತ್ತು ಇಡೀ ದಿನ ಫೋನ್ ಕಾಲ್ ಮಾಡಿರ್ಲಿಲ್ಲ. ನಾನು ಇಲ್ಲಿ ಬೆಟ್ಟ ಹತ್ತಿ ಕಾಲ್ ಮಾಡ್ತಾ ಇದೀನಿ, ನಾಳೆ ಬೆಳಿಗ್ಗೆ ನೀನು ಇಲ್ಲಿ ಇರ್ಲೇಬೇಕು ಅಂತ.
ನಾನು ಅಂದೆ, ಸಡನ್ನಾಗಿ ಹಾಗೆ ಬರೋದಕ್ಕಾಗಲ್ಲ ಅಂತ. ನಾನು ಅಲ್ಲಿ ಬಂದು ಏನ್ ಮಾಡೋದು ಅಂದೆ ನಾನು. ಇಲ್ಲ, ನೀನು ನಂಜೊತೆ ಟ್ರಕ್ಕಿಂಗ್ ಮಾಡ್ಬೇಕು. ಇಲ್ಲಿ ಒಂದು ಟೈಗರ್ ಟೂರಿಸಂಮ ಸ್ಪಾಟ್‌ನಲ್ಲಿ ಹೋಗೋದಕ್ಕೆ ಪರ್ಮಿಷನ್ ಸಿಕ್ಕಿದೆ, ನೀನು ನಂಜೊತೆ ಬರ್ಲೇ ಬೇಕು ಅಂತ ಅಂದ್ರು. ಆಮೇಲೆ ಎರಡು ದಿನ ಬಿಟ್ಕೊಂಡು ನಾನು ಅಲ್ಲಿ ಕಾಳಿ ನದಿ ತೀರಕ್ಕೆ ಹೋದೆ. ಇನ್ನೂ ಅಲ್ಲೇ ಶೂಟಿಂಗ್ ಮಾಡ್ತಾ ಇದ್ರು. ನಾನು ಅಲ್ಲಿ ಹೋದ್ಮೇಲೆ, ಅಲ್ಲಿ ಪುನೀತ್, ಅಮೋಘ್ ಹಾಗೂ ಅವ್ರ ಇಡೀ ತಂಡದ ಜೊತೆ ಟ್ರಕ್ಕಿಂಗ್ ಹೋದೆ.
undefined
ಅದೇ ಫೇಕ್ ಐಡಿಯಿಂದ ನನಗೂ ಅಶ್ಲೀಲ ಮೆಸೇಜ್ ಬಂದಿತ್ತು; ಕಿರುತೆರೆ ನಟಿಯೊಬ್ಬರ ಆರೋಪ!
ಅಲ್ಲಿ ಮಾರ್ನಿಂಗ್ ನಾಲ್ಕೂವರೆಯಿಂದ ಆರೂವರೆತನಕ ಟ್ರಕ್ಕಿಂಗ್ ಮಾಡಿದ್ವಿ. ಆ ಟೈಗರ್ ಫಾರೆಸ್ಟ್ ಸ್ಪಾಟ್ ನಿಜಕ್ಕೂ ಅತ್ಯದ್ಭುತವಾಗಿತ್ತು' ಎಂದಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್. 'ಗಂಧದ ಗುಡಿ' ಡಾಕ್ಯುಮೆಂಟರಿ ಕಿರುಚಿತ್ರದ ಶೂಟಿಂಗ್ ವೇಳೆ ನಡೆದ ಈ ಘಟನೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಯೂಟ್ಯೂಬ್ ಸಂದರ್ಶನದಲ್ಲಿ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಅಪ್ಪು ಸಾವಿನ ಹಿಂದಿನ ರಾತ್ರಿ, ರಮೇಶ್ ಅರವಿಂದ್ ಜೊತೆಗಿನ ಚರ್ಚೆಯಲ್ಲಿ ಬುದ್ಧ ಬಂದಿದ್ದು ಯಾಕೆ?
ಹೌದು, ಅಪ್ಪು ಇಂದು ನಮ್ಮೊಂದಿಗಿಲ್ಲ. ಅವರ ಕನಸಿನ ಕೂಸಾದ ಗಂಧದ ಗುಡಿ ಡಾಂಕ್ಯಮೆಂಟರಿ ಚಿತ್ರವು ನಮ್ಮೆಲ್ಲರಿಗೂ ನೋಡಲು ಇಂದು ಲಭ್ಯವಿದೆ. ಕರ್ನಾಟಕವನ್ನು ಶ್ರೀಗಂಧದ ನಾಡು ಎಂದು ಕರೆಯವುದು ಗೊತ್ತೇ ಇದೆ. ಅದೇ ಕಾರಣಕ್ಕೆ ಕನ್ನಡ ಚಿತ್ರರಂಗವನ್ನು ಕೂಡ ಸ್ಯಾಂಡಲ್‌ವುಡ್ ಎಂದು ಸಂಭೋಧಿಸುತ್ತಾರೆ. ಕನ್ನಡಡ ಮೇರು ನಟರಾದ ಡಾ ರಾಜ್‌ಕುಮಾರ್ ಹಾಗು ವಿಷ್ಣುವರ್ಧನ್ ಅವರು ನಟಿಸಿದ್ದ ಹಳೆಯ ಸಿನಿಮಾವೊಂದರ ಹೆಸರು ಕೂಡ 'ಗಂಧದ ಗುಡಿ' ಎಂದಾಗಿತ್ತು.
ನಂಗೆ 86 ವರ್ಷಕ್ಕೆ ಕಂಟಕವಿದೆ, ಒಮ್ಮೆ ಹೋದರೆ ದುಃಖಿಸಬೇಡ, ಮತ್ತೆ ಬರುವೆ ಅಂದಿದ್ರು; ನಟ ಜಗ್ಗೇಶ್