
ಬೆಂಗಳೂರು(ಅ. 21) ನಾನು ಮೋದಿ ವಿರುದ್ಧ ಪೈಪೋಟಿಗೆ ಇಳಿಯುವಷ್ಟು ದೊಡ್ಡ ವ್ಯಕ್ತಿ ಅಲ್ಲ. ಇಂತಹ ಪ್ರಧಾನಿಯನ್ನ ನಾಯಕನಾಗಿ ಪಡೆಯೋಕೆ ನಾವು ಪುಣ್ಯ ಮಾಡಿದ್ವಿ ಎಂದು ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.
ಬಾಲಿವುಡ್ ನಟರು ಮೋದಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಚಾರದ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ದರು. ಸಿನಿಮಾ ಅಂದ್ರೆ ಬರೀ ಬಾಲಿವುಡ್ ಅಷ್ಟೇ ಅಲ್ಲ ಅಂತಾ ಚರ್ಚೆ ಶುರುವಾಗಿತ್ತು. ಇದೇ ವಿಚಾರವಾಗಿ ಜಗ್ಗೇಶ್ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ಟ್ರೈಲರ್ ಲಾಂಚ್ ಸಮಾರಂಭದಲ್ಲಿ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ಕಾಳಿದಾಸ ಕನ್ನಡ ಮೇಸ್ಟರು ಟ್ರೇಲರ್ ಹೇಗಿದೆ?
ನಾನು ಟ್ವೀಟ್ ಮಾಡಿದ್ದು ಒಳ್ಳೆಯ ವಿಚಾರಕ್ಕೆ ನಾನು ಮೋದಿ ವಿರುದ್ಧ ತಿರುಗಿ ಬಿದ್ದಿಲ್ಲ ಅವರೊಟ್ಟಿಗೆ ನಾನು ಪೈಪೋಟಿ ಬೀಳುವಷ್ಟು ದೊಡ್ಡವನಲ್ಲ ಇಂತಹ ಪ್ರಧಾನಿಯನ್ನ ನಾಯಕನಾಗಿ ಪಡೆಯೋಕೆ ನಾವು ಪುಣ್ಯ ಮಾಡಿದ್ವಿ ಎಂದು ಹೇಳಿದರು. ಇಂತಹ ಸಮಾರಂಭದಲ್ಲಿ ಇಡೀ ಭಾರತೀಯ ಚಿತ್ರರಂಗವನ್ನು ಜೊತೆಗೂಡಿಸಬೇಕಿತ್ತು ಆದರೆ ಸೌತ್ ಇಂಡಿಯಾ ಸಿನಿಮಾನಾ ಕೈಬಿಟ್ಟಿದಕ್ಕೆ ವಿರೋಧಿಸಿದ್ದೆ ಅಷ್ಟೇ ಎಂದು ಹೇಳಿದರು.
ನವರಸ ನಾಯಕ ಜಗ್ಗೇಶ್ ಉಪಚುನಾವಣೆಯಲ್ಲಿ ಟಿಕೆಟ್ ಬಯಸಿಯೂ ಸುದ್ದಿಮಾಡಿದ್ದರು. ವಿಧಾನಪರಿಷತ್ ಸದಸ್ಯರಾಗಿಯೂ ಜಗ್ಗೇಶ್ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅದಕ್ಕೂ ಮುನ್ನ ವಿಧಾನಸಭೆಯನ್ನು ಪ್ರವೇಶ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕ್ರಿಯಾಶೀಲರಾಗಿರುವ ಜಗ್ಗೇಶ್ ಅನೇಕ ಸಂಗತಿಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.