
ನಿಮ್ಮ ಹಿನ್ನೆಲೆ ಏನು?
ನಾನು ಹುಬ್ಬಳ್ಳಿ ಹುಡುಗಿ. ಹುಟ್ಟಿ, ಬೆಳೆದಿದ್ದೆಲ್ಲ ಇಲ್ಲಿಯೇ. ಸದ್ಯಕ್ಕೀಗ ಬಿಕಾಂ ಓದುತ್ತಿದ್ದೇನೆ. ಅದರ ಜತೆಗೀಗ ಸಿನಿ ಪಯಣ ಶುರುವಾಗಿದೆ.
ನಿಮ್ಗೆ ನಟಿ ಆಗ್ಬೇಕು ಅಂತ ಅನಿಸಿದ್ದು ಯಾಕೆ?
ಅದಕ್ಕೆ ಪ್ರೇರಣೆ ನನ್ನ ತಾತ. ಸ್ವರ ಸಾಮ್ರಾಟ್ ಅಂತಲೇ ಹೆಸರಾಗಿದ್ದ ಉತ್ತರ ಕರ್ನಾಟಕದ ಹೆಸರಾಂತ ಜಾನಪದ ಕಲಾವಿದ ಸನಾದಿ ಅಪ್ಪಣ್ಣ ನನ್ನ ಮೂತಾತ. ಅಂದ್ರೆ ನನ್ನ ಅಜ್ಜನ ಅಪ್ಪ. ಅವರ ಮೂಲಕವೇ ಕಲೆಯ ಬಗ್ಗೆ ನನಗೂ ಆಸಕ್ತಿ ಮೂಡಿದ್ದು. ಶಾಲಾ ದಿನಗಳಲ್ಲಿ ನಾಟಕ, ಏಕವ್ಯಕ್ತಿ ಪ್ರದರ್ಶನ ಮಾಡುತ್ತಾ ಬಂದಿದ್ದೆ. ಕಾಲೇಜಿಗೆ ಬಂದಾಗ ಮಾಡೆಲಿಂಗ್ ಶುರು ಮಾಡಿದೆ. ಅದರಿಂದಲೇ ನಾನು ಸಿನಿಮಾ ಜಗತ್ತಿಗೂ ಬರುವಂತಾಗಿದ್ದು ಹೌದು.
'ಪ್ರಾರಂಭ'ದಿಂದ ರವಿಚಂದ್ರನ್ ಪುತ್ರನಿಗೆ ಶುರುವಾಯ್ತು ಶುಭಾರಂಭ!
ಪ್ರಾರಂಭ ಚಿತ್ರಕ್ಕೆ ನೀವು ನಾಯಕಿ ಆಗಿದ್ದು ಹೇಗೆ?
ಮಾಡೆಲಿಂಗ್‌ನಲ್ಲಿ ಒಂದಷ್ಟುಅನುಭವ ಇತ್ತು. ಕಾಲೇಜು ಫೆಸ್ಟ್‌ಗಳಲ್ಲಿನ ರಾರಯಂಪ್ ಶೋಗಳಲ್ಲೂ ಭಾಗವಹಿಸಿದ್ದೆ. ಅದೇ ಇದ್ದ ಕಾರಣದಿಂದ ನೀವು ಸಿನಿಮಾ ಅಥವಾ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕರೆ ಯಾಕೆ ಹೋಗಬಾರದು ಅಂತ ಫ್ರೆಂಡ್ಸ್ ಕೂಡ ಸಲಹೆ ಕೊಟ್ಟಿದ್ದರು. ಅದು ಒಂಥರ ಕಾಡುತ್ತಲೇ ಇತ್ತು. ನೋಡೋಣ ಅಂತ ಅವಕಾಶಕ್ಕೆ ಕಾಯುತ್ತಿದ್ದೆ. ಆಗ ನನಗೆ ಸಿಕ್ಕಿದ್ದು ಪ್ರಾರಂಭ ಚಿತ್ರದ ಅವಕಾಶ. ಆಡಿಷನ್‌ಗೆ ಕರೆದಿದ್ದರು. ಹೋಗಿ ಆಡಿಷನ್ ಕೊಟ್ಟು ಬಂದೆ. ಆದಾದ ಒಂದು ವಾರದಲ್ಲಿ ನೀವು ಸೆಲೆಕ್ಟ್ ಆಗಿದ್ದೀರಿ ಅಂತ ನಿರ್ದೇಶಕರು ಕಾಲ್ ಮಾಡಿದ್ರು.
ನಟನೆಯ ಅನುಭವ ಏನು?
ನಟನೆ ಅಂತ ನಾನು ಕಲಿತಿದ್ದೇ ಸಿನಿಮಾಕ್ಕೆ ಆಯ್ಕೆ ಆದ ನಂತರ. ಅಲ್ಲಿ ತನಕ ನನಗೆ ನಟನೆಯ ಯಾವುದೇ ಅನುಭವ ಇರಲಿಲ್ಲ. ಸಿನಿಮಾಕ್ಕೆ ಸೆಲೆಕ್ಟ್ ಆದ ನಂತರದ ಹದಿನೈದು ದಿವಸಗಳಲ್ಲಿ ರಿಹರ್ಸಲ್ ಶುರುವಾಯಿತು. ಒಂದು ತಿಂಗಳು ನಾವು ಪಾತ್ರಕ್ಕೆ ತಕ್ಕಂತೆ ನಟನೆಯ ಅಭ್ಯಾಸ ಶುರು ಮಾಡಿದೆವು. ನಿರ್ದೇಶಕರು ಅದೆಲ್ಲವನ್ನು ಹೇಳಿಕೊಟ್ಟರು. ಆದಾದ ನಂತರವೇ ನಾನು ಮೊದಲು ಕ್ಯಾಮರಾ ಎದುರಿಸಿದ್ದು.
ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ..
ಪಾರ್ಥನಾ ಅಂತ ಪಾತ್ರದ ಹೆಸರು. ಆಕೆ ಕಾಲೇಜ್ ಗೋಯಿಂಗ್ ಹುಡುಗಿ. ತುಂಬಾ ಬಬ್ಲಿ. ಆಕೆಗೂ ಲವ್ ಆಗುತ್ತೆ. ಒಂದು ಹಂತಕ್ಕೆ ಅದು ಬ್ರೇಕಪ್ ಆಗುತ್ತೆ. ಆ ನಂತರ ಆಕೆಯ ಬದುಕಲ್ಲಿ ಏನೆಲ್ಲ ಆಗುತ್ತೆ ಎನ್ನುವುದು ನನ್ನ ಪಾತ್ರ. ಅಷ್ಟಕ್ಕೆ ಜೀವನ ಮುಗಿಯೋದಿಲ್ಲ, ಅದರ ಮುಂದೇನು ದೊಡ್ಡ ಜೀವನ ಇದೆ ಅಂತ ಹೇಳುತ್ತೆ ಆ ಪಾತ್ರ.
ಮನುರಂಜನ್ ಕಾಂಬಿನೇಷನ್‌ನಲ್ಲಿ ಅಭಿನಯಿಸಿದ ಅನುಭವ ಹೇಗಿತ್ತು?
ಒಂದೇ ಮಾತಿನಲ್ಲಿ ಹೇಳೋದಾದ್ರೆ ನಾನು ಲಕ್ಕಿ. ಯಾಕಂದ್ರೆ ಫಸ್ಟ್ ಸಿನಿಮಾದಲ್ಲಿ ಸ್ಟಾರ್ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿದೆ. ಅವರು ಸಾಕಷ್ಟುಮಾರ್ಗದರ್ಶನ, ಸಲಹೆ ಕೊಟ್ಟಿದ್ದಾರೆ. ಒಬ್ಬ ಗುರು ಥರ ಪ್ರತಿಯೊಂದನ್ನು ಹೇಳಿಕೊಟ್ಟರು. ಎಲ್ಲೂ ಭಯ ಎನಿಸಲಿಲ್ಲ.
'ಸಿನಿಮಾ ಡಿಮ್ಯಾಂಡ್ ಮಾಡಿದ್ರೆ ಕಿಸ್ಸೂ ಮಾಡ್ಬೇಕು, ಸಿಗರೇಟೂ ಸೇದ್ಬೇಕು'
ಸಿನಿಮಾದ ಕತೆ ಏನು, ಪ್ರೇಕ್ಷಕರು ಯಾಕೆ ಈ ಸಿನಿಮಾ ನೋಡಬೇಕು?
ಇದೊಂದು ಪಕ್ಕಾ ಲವ್ ಸ್ಟೋರಿ ಸಿನಿಮಾ. ಹಾಗಂತ ಬರೀ ಪ್ರೇಮಿಗಳಿಗೆ, ಯೂತ್‌್ಸಗೆ ಮಾತ್ರ ಸೀಮಿತವಲ್ಲ. ಇಡೀ ಫ್ಯಾಮಿಲಿ ಕುಳಿತು ನೋಡುವ ಸಿನಿಮಾ. ಹೊಸ ತೆರನಾದ ಕತೆ ಇಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.