ರಿಷಬ್ ಶೆಟ್ಟಿ 'ವರ್ಕ್‌ ಫ್ರಂ ಹೋಂ'ನಲ್ಲಿ ಪುತ್ರನ 'oops'!

Suvarna News   | Asianet News
Published : Mar 20, 2020, 12:47 PM IST
ರಿಷಬ್ ಶೆಟ್ಟಿ 'ವರ್ಕ್‌ ಫ್ರಂ ಹೋಂ'ನಲ್ಲಿ ಪುತ್ರನ 'oops'!

ಸಾರಾಂಶ

ಮಾಸ್ಟರ್‌ ಡೈರೆಕ್ಟರ್‌ ರಿಷಬ್‌ ಶೆಟ್ಟಿ ಪುತ್ರ ರಣ್ವೀತ್ ಶೆಟ್ಟಿ ಜೊತೆ ಹುಟ್ಟೂರಿನಲ್ಲಿ 'ವರ್ಕ್‌ ಫ್ರಂ ಹೋಮ್‌' ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.   

'ಲೂಸಿಯಾ'ದಿಂದ ಸಣ್ಣ ನಟನಾಗಿ, 'ರಿಕ್ಕಿ'ಯಿಂದ ನಿರ್ದೇಶಕನಾಗಿ ಹಾಗೂ 'ಸ.ಹಿ.ಪ್ರಾ. ಶಾಲೆ' ಚಿತ್ರದ ಮೂಲಕ ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡುತ್ತಿರುವ ರಿಷಬ್‌ ಶೆಟ್ಟಿ ವರ್ಕ್‌ ಫ್ರಂ ಹೋಂ ಹೇಗಿರುತ್ತೆ ಅಂತಾ ನೋಡಿದ್ದೀರಾ? 

ಹೌದು! ಕೊರೋನಾ ವೈರಸ್‌ ಭೀತಿ ಹೆಚ್ಚಾದ ಕಾರಣ ರಾಜ್ಯದೆಲ್ಲೆಡೆ ಅಘೋಷಿತ ಬಂದ್ ನಡೆಯುತ್ತಿದೆ. ಇದರ ಪರಿಣಾಮ ಚಿತ್ರಮಂದಿರಗಳು ಬಂದ್, ಚಿತ್ರೀಕರಣವೂ ಕ್ಯಾನ್ಸಲ್. ಕಲಾವಿದರಿಗೆ ರಜೆ ಘೋಷಿಸಲಾಗಿದೆ. ಈ ವೇಳೆ ರಿಷಬ್‌ ಶೆಟ್ಟಿ ತಮ್ಮ ಹುಟ್ಟೂರಿನಲ್ಲಿ ಪುತ್ರ ರಣ್ವೀತ್‌ ಜೊತೆ ಸಮಯ ಕಳೆಯುತ್ತಿದ್ದಾರೆ. 

ಸ.ಹಿ.ಪ್ರಾ.ಪಾ.ಶಾಲೆ ನೋಡಿ ರಿಷಬ್‌ಗೆ 200 ರೂ. ಕಳುಹಿಸಿದ ಸಿನಿ ಪ್ರೇಮಿ!

'ಊರು ಊರೇ ಖಾಲಿಯಾಗಿದೆ, ಅಫೀಸ್‌‌ಗೆ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್‌ ಸಿಕ್ಕಿದೆ. ಎಲ್ಲ ಆತಂಕಗಳನ್ನು ಹಿಂದೆ ಬಿಟ್ಟು ಹುಟ್ಟಿದೂರಲ್ಲಿ, ನಾನು ಬೆಳೆದ ಮನೇಲಿ ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ! ಒಟ್ಟಾರೆ ಎಲ್ಲರ ತರ ನಮ್ದೂ 'ವರ್ಕ್‌ ಫ್ರಂ ಹೋಂ' ಜೋರಾಗ್‌ ನಡೀತಿದೆ' ಎಂದು ಬರೆದುಕೊಂಡಿದ್ದಾರೆ.

 

ಈ ಫೋಟೋವನ್ನು ರಿಷಬ್‌ ಆಪ್ತ ಸ್ನೇಹಿತ ರಕ್ಷಿತ್‌ ಶೆಟ್ಟಿ ರೀ ಟ್ಟೀಟ್‌ ಮಾಡಿ 'ನನ್ನ ಮುಗ್ಧತೆಯ ಅರಿವು ನನಗಿಲ್ಲ, ನನ್ನ ಹೆತ್ತವನ್ನೊಮ್ಮೆ ನೋಡು, ಅವನ ಮುಗ್ಧತೆಯಲ್ಲವೆ ನನಗೆಲ್ಲ ' ಎನ್ನುವ ಮೂಲಕ ಸ್ನೇಹಿತ ಖುಷಿಯಲ್ಲಿ ಭಾಗಿಯಾಗಿದ್ದಾರೆ.

ಕೊರೋನಾ ಎಫೆಕ್ಟ್‌‌ನಿಂದ ನಟ-ನಟಿಯರು ಕುಟುಂಬಸ್ಥರ ಜೊತೆ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ