ನಿರ್ಮಾಪಕರು ವಿಲನ್‌, ಅವರ ಮಗ ಹೀರೋ; ಸ್ಮಶಾನದಲ್ಲಿ' ನನಗೂ ಲವ್ವಾಗಿದೆ' ಮುಹೂರ್ತ!

Kannadaprabha News   | Asianet News
Published : Aug 27, 2021, 09:32 AM ISTUpdated : Aug 27, 2021, 09:55 AM IST
ನಿರ್ಮಾಪಕರು ವಿಲನ್‌, ಅವರ ಮಗ ಹೀರೋ; ಸ್ಮಶಾನದಲ್ಲಿ' ನನಗೂ ಲವ್ವಾಗಿದೆ' ಮುಹೂರ್ತ!

ಸಾರಾಂಶ

ಸ್ಮಶಾನದಲ್ಲಿ ಮುಹೂರ್ತ ಮಾಡಿಕೊಂಡ ಚಿತ್ರ 'ನನಗೂ ಲವ್ವಾಗಿದೆ' ಸಿನಿ ಪ್ರೇಮಿಗಳ ಗಮನ ಸೆಳೆದಿದೆ. ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ನಿರ್ಮಾಪಕರೇ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 

ವರಮಹಾಲಕ್ಷ್ಮೀ ಹಬ್ಬದ ದಿನ ಹೊಸಬರ ಚಿತ್ರ ಸೆಟ್ಟೇರಿತು. ಚಿತ್ರದ ಹೆಸರು ‘ನನಗೂ ಲವ್ವಾಗಿದೆ’ ಎಂಬುದು. ವಿಜಯ್‌ ರಾಜಶೇಖರ್‌ ಇದರ ನಿರ್ದೇಶಕರು. ಸೋಮ ವಿಜಯ್‌ ಹಾಗೂ ರೋಶಿನಿ ಚಿತ್ರದ ನಾಯಕ, ನಾಯಕಿ. ಕೆ ನೀಲಕಂಠನ್‌ ಈ ಚಿತ್ರದ ನಿರ್ಮಾಪಕರು.

ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳಬೇಕು ಎಂಬುದು ನಿರ್ಮಾಪಕರ ಆಸೆ ಆಗಿತ್ತಂತೆ. ಆದರೆ, ಅವರಿಗೆ ಅಂಥ ಅವಕಾಶ ಸಿಗದ ಕಾರಣ ಈಗ ತಮ್ಮ ಪುತ್ರನನ್ನು ನಾಯಕನನ್ನಾಗಿಸಿ, ತಾವು ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಅನುಭವ ಇರುವ, ಸಾಕಷ್ಟುಚಿತ್ರಗಳಿಗೆ ಕೆಲಸ ಮಾಡಿರುವ ವಿಜಯ್‌ ರಾಜಶೇಖರ್‌ ತುಂಬಾ ವರ್ಷಗಳ ಗ್ಯಾಪ್‌ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.

ಚಿತ್ರೋತ್ಸವಗಳಲ್ಲಿ ಅವಲಕ್ಕಿ ಪವಲಕ್ಕಿ ಮಿರಮಿರ!

ಬೆಳಗಾವಿ ಹಾಗೂ ಬೆಂಗಳೂರು ಹುಡುಗಿಯ ಪ್ರೇಮ ಕತೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಹಬ್ಬದ ದಿನ ಬೆಂಗಳೂರಿನ ಶಾಂತಿನಗರದಲ್ಲಿರುವ ಹಿಂದೂ ರುದ್ರಭೂಮಿಯ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಿತು. ನಾಯಕ ನಾಯಕಿಗೆ ತಾಳಿ ಕಟ್ಟುವ ದೃಶ್ಯವನ್ನು ಚಿತ್ರೀಕರಣ ಮಾಡಿಕೊಳ್ಳುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು. ‘ಇದು ನನಗೆ ಐದನೇ ಸಿನಿಮಾ. ಇದೊಂದು ಯಂಗ್‌ ಜನರೇಷನ್‌ ಕತೆಯ ಚಿತ್ರ’ ಎಂಬುದು ನಿರ್ದೇಶಕರು ಕೊಟ್ಟವಿವರಣೆ.

‘ಸಿನಿಮಾಗಳಲ್ಲಿ ನಾನು ಹೀರೋ ಆಗಬೇಕು ಎಂಬುದು ನನ್ನ ಚಿಕ್ಕಂದಿನ ಕನಸಾಗಿತ್ತು. ಅದು ನನ್ನಿಂದ ಸಾಧ್ಯವಾಗಲಿಲ್ಲ. ಈಗ ನನಗೆ ವಯಸ್ಸಾಯಿತು. ಆದರೆ, ನನ್ನ ಆ ದಿನಗಳ ಸಿನಿಮಾ ಕನಸು ನನ್ನ ಮಗನ ಮೂಲಕ ಈಡೇರುತ್ತಿದೆ ಎನ್ನುವ ಖುಷಿ ಇದೆ’ ಎನ್ನುತ್ತಾರೆ ನೀಲಕಂಠನ್‌. ಬಿ.ಆರ್‌. ಹೇಮಂತ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಾಗೇಶ್‌ ಶೆಟ್ಟಿಕ್ಯಾಮೆರಾ ಹಿಡಿಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್