ಜೋಗಿ ಪ್ರೇಮ್ ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ ಅಭಿನಯದ 'ಏಕ್ ಲವ್ ಯಾ' ಚಿತ್ರದ ಟ್ರೇಲರ್ ಇಂದು ಮೈಸೂರಿನಲ್ಲಿ ಬಿಡುಗಡೆಯಾಗಿದೆ. ಲವರ್ ಬಾಯ್ ಆಗಿ ರಾಣಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜೋಗಿ ಪ್ರೇಮ್ (Jogi Prem) ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ (Rakshita) ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ (Raanna) ಅಭಿನಯದ 'ಏಕ್ ಲವ್ ಯಾ' (Ek LOve Ya) ಚಿತ್ರದ ಟ್ರೇಲರ್ (Trailer) ಇಂದು ಮೈಸೂರಿನಲ್ಲಿ ಬಿಡುಗಡೆಯಾಗಿದೆ. ರಾಣಾ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಸಿಕ್ಕಾಪಟ್ಟೆ ಬೋಲ್ಡ್ ಲುಕ್‌ನಲ್ಲಿ ನಟಿಸಿದ್ದಾರೆ. ವಿಶೇಷವಾಗಿ ರಾಣಾ ಹಾಗೂ ರೀಷ್ಮಾ ನಾಣಯ್ಯ (Rishma Nanayya) ಪ್ರೇಮಕಥೆಯ ದೃಶ್ಯ ವೈಭವ ಟ್ರೇಲರ್‌ನಲ್ಲಿ ಭರ್ಜರಿಯಾಗಿ ಮೂಡಿಬಂದಿದೆ. ಮಾತ್ರವಲ್ಲದೇ ರಾಣಾ ತಮ್ಮ ಮೊದಲ ಚಿತ್ರದಲ್ಲೇ ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‌ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರರಂಗಕ್ಕೆ ಹೊಸ ನಾಯಕ ನಟನಾಗುವ ಭರವಸೆಯನ್ನು ಮೂಡಿಸಿದ್ದಾರೆ.
ಮುಖ್ಯವಾಗಿ ಜೋಗಿ ಪ್ರೇಮ್ ಚಿತ್ರದ ಹಾಡುಗಳಿಗೆ (Songs) ಹಾಗೂ ಅದ್ಧೂರಿತನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನಿರ್ದೇಶಕರಲ್ಲೊಬ್ಬರು. ಇದಕ್ಕೆ ಪೂರಕವಾಗಿಯೇ 'ಏಕ್ ಲವ್ ಯಾ' ಟ್ರೇಲರ್ ಮೂಡಿಬಂದಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ (Arjun Janya) ಸಂಗೀತ ಟ್ರೇಲರ್‌ನ ಮತ್ತೊಂದು ಲೆವಲ್‌ಗೆ ಕರೆದೊಯ್ದಿದೆ. 'ಏಕ್ ಲವ್ ಯಾ' ಚಿತ್ರತಂಡ ಚಾಮುಂಡಿ ಬೆಟ್ಟಕ್ಕೆ (Chamundi Hill) ತೆರಳಿ ತಾಯಿ ಚಾಮುಂಡೇಶ್ವರಿ (Chamundeshwari) ದರ್ಶನ ಪಡೆದು ಚಿತ್ರದ ಯಶಸ್ಸಿಗಾಗಿ ತೆಂಗಿನ ಕಾಯಿ ಹೊಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಪ್ರೇಮ್ ಹಾಗೂ ಚಿತ್ರತಂಡವನ್ನು ನೋಡಲು ಅಭಿಮಾನಿಗಳು (Fans) ಮುಗಿಬಿದ್ದಿದ್ದರು.
Ek Love Ya: ಮೀಟ್ ಮಾಡೋಣ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡ ಜೋಗಿ ಪ್ರೇಮ್
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರ ಜನವರಿ 21ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್ (Covid19) ಮೂರನೇ ಅಲೆ ಹಾಗೂ ಚಿತ್ರಮಂದಿರಗಳಲ್ಲಿ ಶೇ 50 ಪ್ರವೇಶಾತಿ ಇದ್ದ ಕಾರಣ ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಮುಂದಕ್ಕೆ ಹಾಕಿತ್ತು. ಅರ್ಜುನ್ ಜನ್ಯಾ ಸಂಗೀತವಿರುವ ಈ ಸಿನಿಮಾದ 'ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ' ಹಾಡು ಸೂಪರ್ ಹಿಟ್ ಆಗಿದ್ದು ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿತ್ತು. ಹಾಗೂ 'ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಭಗವಂತ' ಹಾಡಿಗೆ ಸಿನಿರಸಿಕರಿಂದ ಬೊಂಬಾಟ್ ರೆಸ್ಪಾನ್ಸ್ ಪಡೆದಿತ್ತು.
ತೆಲುಗು ಗಾಯಕಿ ಮಂಗ್ಲಿ (Mangli) ಹಾಗೂ ಕೈಲಾಶ್ ಕೇರ್ (Kailash Kher) ಧ್ವನಿಯಲ್ಲಿ ಮೂಡಿಬಂದಿರುವ 'ಎಣ್ಣೆಗೂ ಹೆಣ್ಣಿಗೂ' ಹಾಡಿಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿತ್ತು. ಮುಖ್ಯವಾಗಿ ಗಂಡು ಮಕ್ಕಳು ಲವ್ ಫೇಲ್ಯೂರ್ ಆದರೆ, ಬಾರ್‌ಗೆ ಹೋಗಿ ಕುಡಿಯುತ್ತಾರೆ ಎಂಬ ಕಾನ್ಸೆಪ್ಟ್‌ನಲ್ಲಿ ಸಾಕಷ್ಟು ಬ್ರೇಕಪ್ ಸಾಂಗ್‌ಗಳು ಬಂದಿವೆ. ಆದರೆ, ಬ್ರೇಕಪ್ ಹೆಣ್ಣುಮಕ್ಕಳಿಗೂ ಆಗುತ್ತದೆ. ಹಾಗಾದರೆ ಅವರಿಗೆ ಯಾಕೆ ಒಂದು ಬ್ರೇಕಪ್ ಸಾಂಗ್ ಇಡಬಾರದು ಎಂದು ಯೋಚಿಸಿದ ಚಿತ್ರತಂಡ ಹೆಣ್ಣು ಮಕ್ಕಳಿಗಾಗಿ ಬ್ರೇಕಪ್ ಸಾಂಗ್‌ವೊಂದನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದ ಈ ಹಾಡು ಈಗ ಹಿಟ್‌ಲಿಸ್ಟ್ ಸೇರಿದೆ.
Makara Sankranti: ಅಮ್ಮನ ತೋಟದಲ್ಲಿ ಸಂಕ್ರಾಂತಿ ಆಚರಿಸಿದ ನಿರ್ದೇಶಕ ಜೋಗಿ ಪ್ರೇಮ್
ಇನ್ನು 'ಏಕ್ ಲವ್ ಯಾ' ಚಿತ್ರದ ಐದು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಆರನೇ ಹಾಡನ್ನು ಫೆ.14ರಂದು ಪ್ರೇಮಿಗಳ ದಿನದ (Valentines Day) ಸಂದರ್ಭದಲ್ಲಿ ದಾವಣಗೆರೆಯ (Davanagere) ಅಶೋಕ ಚಿತ್ರಮಂದಿರದಲ್ಲಿ ಬಿಡುಗಡೆಗೊಳಿಸುವುದಾಗಿ ಜೋಗಿ ಪ್ರೇಮ್ ತಿಳಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಲಿರಿಕಲ್ ವಿಡಿಯೋ, ಹಾಡುಗಳು ಹಾಗೂ ಹೀರೋ, ಹೀರೋಯಿನ್ ಲುಕ್ ರಿವೀಲ್ ಮಾಡಲಾಗಿದ್ದು, ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಸಿಗರೇಟು ಸೇದಿ, ಲಿಪ್ ಲಾಕ್ ಕೂಡ ಮಾಡಿದ್ದಾರೆ. ಫೆಬ್ರವರಿ 24ನೇ ತಾರೀಖಿನಂದು 'ಏಕ್ ಲವ್ ಯಾ' ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.