ಹೊಡೆದಾಡುವ ಮಟ್ಟಕ್ಕೆ ಕಾಟ ಕೊಟ್ಟಿದ್ದರು; ತುಕಾಲಿ ಸಂತು ಅಸಲಿ ಮುಖ ಬಿಚ್ಚಿಟ್ಟ ಯತಿರಾಜ್

By Vaishnavi Chandrashekar  |  First Published Oct 17, 2023, 5:11 PM IST

ಸಿನಿಮಾ ಚಿತ್ರೀಕರಣದ ವೇಳೆ ತುಕಾಲಿ ಸಂತು ಕೊಟ್ಟ ಕಾಟವನ್ನು ಮರೆಯಲಾಗದು ಎಂದು ನಿರ್ದೇಶಕ ಯತಿರಾಜ್ ಮಾತನಾಡಿದ್ದಾರೆ.


ಕನ್ನಡ ಚಿತ್ರರಂಗದ ಅದ್ಭುತ ನಟ ಹಾಗೂ ನಿರ್ದೇಶಕ ಯತಿರಾಜ್ ತಮ್ಮ ಸಿನಿಮಾ ಪ್ರಚಾರದ ವೇಳೆ ಹಾಸ್ಯ ನಟ ತುಕಾಲಿ ಸಂತೋಷ್ ನೀಡಿದ ತೊಂದರೆಗಳ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ಸೀಸನ್‌ 10ರಲ್ಲಿ ಸ್ಪರ್ಧಿಸುತ್ತಿರುವ ಸಂತು ಅಸಲಿ ಮುಖ ಬಿಚ್ಚಿಟ್ಟಿದ್ದಾರೆ.

'ತುಕಾಲಿ ಸಂತು ಬಗ್ಗೆ ಹೇಳ್ಬಾರದು ಅಂದುಕೊಂಡಿದ್ದೆ ಆದರೂ....ಮೊನ್ನೆ ಬಿಗ್ ಬಾಸ್ ನೋಡುತ್ತಿದ್ದೆ ಅವರು ಬಾಗಲು ಓಪನ್ ಮಾಡಲ್ಲ ಇಲ್ಲವಾದರೆ ಅವರು ಓಡಿ ಬರುತ್ತಿದ್ದರು. ನಮ್ಮ ಸಿನಿಮಾ ವಿಚಾರದಲ್ಲಿ ಸಾಕಷ್ಟು ಕೈ ಕೊಟ್ಟಿದ್ದರು. ಮೊನ್ನೆ ಸುದೀಪ್ ಅವರು ಟಾಸ್ಕ್ ಕೊಡುತ್ತಾರೆ ಜೀವನದಲ್ಲಿ ತಪ್ಪು ಮಾಡಿದ್ದರೆ ಸುಳ್ಳಿ ಹೇಳಿದೆ 1ರಿಂದ 10 ವರೆಗೂ ನಂಬರ್ ಕಟ್ಟಿಕೊಳ್ಳಿ ಎಂದು ಆಗ ತುಕಾಲಿ ಅವರು 2 ನಂಬರ್ ಅವರೇ ಹೇಳುತ್ತಾರೆ. ಒಬ್ಬರನ್ನು ನಗಿಸಲು ನಾನು ಸುಳ್ಳಿ ಹೇಳಿದ್ದೀನಿ ಅಂದ್ರು ಆದರೆ ನಮಗೆ ಅವರ ಸುಳ್ಳುಗಳು ಕೋಪ ತಂದಿದೆ. ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಹೋಗಿದ್ವಿ. ಹೇಳಬಾರದು ಅಂದುಕೊಂಡೆ ಆದರೆ ಆ ಮನುಷ್ಯನೆ ಒಪ್ಪಿಕೊಂಡರು' ಎಂದು ಮಾಧ್ಯಮಗಳಲ್ಲಿ ಯತಿರಾಜ್‌ ಮಾತನಾಡಿದ್ದಾರೆ. 

Tap to resize

Latest Videos

ಅಸಹ್ಯ ಥೂ ನೀನು ಗಂಡ್ಸಾ?; ತುಕಾಲಿ ಸಂತೋಷ್ ವಿರುದ್ಧ ಗರಂ ಆದ ಇಶಾನಿ

'ಅಷ್ಟೇ ಅಲ್ಲ ಹೀರೋ, ವಿಲನ್ ಮತ್ತು ಕಾಲಿ ಡಬ್ಬ ಎಂದು ಇನ್ನಿತ್ತರ ಸದಸ್ಯರು ಬ್ಯಾಡ್ಜ್‌ ಕೊಡಬೇಕು ಆಗ ಅನೇಕರು ಕಾಲಿ ಡಬ್ಬ ಮತ್ತು ವಿಲನ್ ಕೊಟ್ಟರು. ನಾವು ಒಂದು ಚಿಕ್ಕ ಸ್ಕೆಡ್ಯೂಲ್‌ನಲ್ಲಿ ಸಿನಿಮಾ ಮಾಡುತ್ತಿರುತ್ತೀವಿ ನಿರ್ಮಾಪಕರು ಒಂದು ಗೆರೆ ಎಳೆದಿರುತ್ತಾರೆ ಹೀಗಾಗಿ ಇತಿಮಿತಿಯಲ್ಲಿ ಸಿನಿಮಾ ಮಾಡುತ್ತೀವಿ. 25 ವರ್ಷಗಳಿಂದ ನಾನು ಮಾಧ್ಯಮದಲ್ಲಿದ್ದುಕೊಂಡು ಇಷ್ಟು ದೊಡ್ಡ ಕಲಾವಿದರನ್ನು ಸೇರಿಸಿಕೊಂಡು ಸಿನಿಮಾ ಮಾಡುತ್ತಿರುವಾಗ ಅವರೆಲ್ಲಾ ಪ್ರೋಫೆಷನಲ್ ಆಗಿ ಬದುಕುತ್ತಿರುತ್ತಾರೆ  ಈ ನಡುವೆ ತುಕಾಲಿ ಬಂದು ಬಹಳ ತೊಂದರೆ ಕೊಟ್ಟರು. ಅರ್ಧ ಸಿನಿಮಾದಿಂದ ಹೊರ ತೆಗೆದಿರುವೆ ಹಾಡಿನಲ್ಲಿ ಇರಬೇಕಿತ್ತು ಆದರೆ ಇಲ್ಲ ಕೆಲವೊಂದು ಸೀನ್‌ಗಳಿಂದ ಡಿಲೀಟ್ ಮಾಡಿದ್ದೀವಿ..ತುಕಾಲಿನೇ ಹೇಳುತ್ತಾರೆ ನಮ್ಮನ್ನು avoid ಮಾಡಿಬಿಡಿ ಎಂದು. ಕಥೆ ಬರೆಯುವಾಗ ಇದೆಲ್ಲಾ ಲೆಕ್ಕ ಮಾಡಿರುತ್ತೀವಾ? ಬಗಳ ನೋವಾಗುತ್ತದೆ ಹೇಳಿಕೊಳ್ಳಲು' ಎಂದು ಯತಿರಾಜ್ ಹೇಳಿದ್ದಾರೆ. 

click me!