
ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಇತ್ತೀಚಿಗೆ ದುಬಾರಿ ಕಾರು ಖರೀದಿಸಿದ್ದಾರೆ. ಇದು ಮೊದಲ ಐಷಾರಾಮಿ ಕಾರು ಆಗಿರುವ ಕಾರಣ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂತಸ ಹಂಚಿ ಕೊಂಡಿದ್ದಾರೆ.
ಬಿಳಿ ಬಣ್ಣದ ಬಿಎಂಡಬ್ಲ್ಯೂ 520ಡಿ ಕಾರು ಖರೀದಿಸಿದ್ದಾರೆ. ಈ ಕಾರಿನ ಆನ್ ರೋಡ್ ಬೆಲೆ ಸುಮಾರು 66 ಲಕ್ಷ ರೂ., ಇದರದ್ದೇ ಸ್ಪೋರ್ಟ್ ಲೈನ್ ಟ್ರಿಮ್ ಕಾರು 88 ಲಕ್ಷ ರೂ. ಈ ಕಾರನ್ನು ಖರೀದಿಸಲು ರಿಜಿಸ್ಟ್ರೇಷನ್‌ಗೇ 11 ಲಕ್ಷ ನೀಡಬೇಕು ಎಂದು ಗೂಗಲ್ ಹೇಳುತ್ತದೆ. ಪತ್ನಿ ಹಾಗೂ ಮುದ್ದಾದ ಮಗುವಿನ ಜೊತೆ ಫೋಟೋ ಹಂಚಿಕೊಂಡ ನಿರ್ದೇಶಕರು, 'ಬಿಎಂಡಬ್ಲ್ಯೂ 520ಡಿ ಮನೆಗೆ ಸ್ವಾಗತ' ಎಂದು ಬರೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ಸೆಲೆಬ್ರಿಟಿಗಳು ಹಾಗೂ ಕಿರುತೆರೆ ಕಲಾವಿದರು ಹೊಸ ಕಾರುಗಳನ್ನು ಖರೀದಿಸುತ್ತಿದ್ದಾರೆ. ಆಡಿ ಕ್ಯೂ 8ಅನ್ನು ರಕ್ಷಿತ್ ಶೆಟ್ಟಿ ಖರೀದಿಸಿದ್ದಾರೆ, ಶೈನ್ ಶೆಟ್ಟಿ ನೀಲಿ ಬಣ್ಣದ ಬಿಎಂಡಬ್ಲ್ಯೂ, ಮೇಘಾ ಶೆಟ್ಟಿ ಕಪ್ಪು ಬಣ್ಣ ಎಂಜಿ ಹೆಕ್ಟರ್ ಹಾಗೂ ಬಿಎಂಬ್ಲ್ಯೂ ಖರೀದಿಸಿದ್ದಾರೆ.
ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ, ರಾಜಕುಮಾರ ಹಾಗೂ ಯುವರತ್ನ ಸಿನಿಮಾ ನಂತರ ಸಂತೋಷ್ ಯಾವ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬುದಿನ್ನೂ ರಿವೀಲ್ ಮಾಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.