ಡ್ರೋನ್ ಪ್ರತಾಪ್‌ ಭೇಟಿ ಮಾಡಿದ ಒಳ್ಳೆ ಹುಡುಗ ಪ್ರಥಮ್; pic of the year!

Suvarna News   | Asianet News
Published : Aug 30, 2021, 12:31 PM ISTUpdated : Aug 30, 2021, 12:46 PM IST
ಡ್ರೋನ್ ಪ್ರತಾಪ್‌ ಭೇಟಿ ಮಾಡಿದ ಒಳ್ಳೆ ಹುಡುಗ ಪ್ರಥಮ್; pic of the year!

ಸಾರಾಂಶ

ಶುರುವಾಯ್ತು ಡ್ರೋನ್ ಪ್ರಥಮ್ ಚಿತ್ರ ತಯಾರಿ. ಅಪೂರ್ವಸಂಗಮ ಫೋಟೋ ಹಂಚಿಕೊಂಡು ಶೂಟಿಂಗ್ ಶುರು ಮಾಡಿದ ತಂಡ.

ಕನ್ನಡ ಚಿತ್ರರಂಗದ ಒಳ್ಳೆ ಹುಡುಗ ಪ್ರಥಮ್ ವಿಭಿನ್ನ ಚಿತ್ರಕಥೆಗಳ ಮೂಲಕ ಸಿನಿ ರಸಿಕರನ್ನು ನಾನ್‌ ಸ್ಟಾಪ್ ಮನೋರಂಜಿಸುತ್ತಾರೆ. 'ನಟ ಭಯಂಕರ' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಡ್ರೋನ್ ಪ್ರತಾಪ್ ಸಿನಿಮಾ ತಯಾರಿ ಶುರು ಮಾಡಿದ್ದಾರೆ. 

ಡ್ರೋನ್ ಪ್ರತಾಪ್ ಜೀವನ ಆಧರಿಸಿ ಸಿನಿಮಾ ಮಾಡಲಾಗಿದ್ದು, ಡ್ರೋನ್ ಪ್ರಥಮ್ ಎಂದು ಹೆಸರಿಡಲಾಗಿದೆ.  ಈ ಚಿತ್ರದಲ್ಲಿ ಪ್ರಥಮ್ ನಾಯಕ ಮಾತ್ರವಲ್ಲ ನಿರ್ದೇಶಕರೂ ಹೌದು. ಪ್ರತಾಪ್ ಅವರ ಹಾವ, ಭಾವ ಹಾಗೂ ಜೀವನದ ಬಗ್ಗೆ ತಿಳಿದುಕೊಳ್ಳಲು ಪ್ರಥಮ್ ನಾಲ್ಕು ತಿಂಗಳು ರೀಸರ್ಚ್ ಮಾಡಿದ್ದಾರೆ. 'Pick of the year! ಡ್ರೋನ್ ಪ್ರಥಮ್ ಮೀಟ್ಸ್ ಡ್ರೋನ್ ಪ್ರತಾಪ್. ಇನ್ಮೇಲೆ ಇವ್ನು ನನ್ನ ತಮ್ಮ! ಅಪೂರ್ವ ಸಂಗಮ! ನನ್ನ ತಮ್ಮ ಸಿಕ್ಬಿಟ್ಟ! #Dronepratham, ಮುಂದಿನವಾರದಿಂದ ಚಿತ್ರೀಕರಣ ಶುರು' ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

ಡ್ರೋನ್ ಪ್ರತಾಪ್‌ ಸಿನಿಮಾ ಮಾಡಲು 4 ತಿಂಗಳು ರೀಸರ್ಚ್ ಮಾಡಿದ ಪ್ರಥಮ್!

ಡ್ರೋನ್ ಪ್ರತಾಪ್ ಸಿನಿಮಾ ಮುಹೂರ್ತವನ್ನು ಅದ್ಧೂರಿಯಾಗಿ ಮಾಡುವ ಯೋಚನೆಯಲ್ಲಿರುವ ಪ್ರಥಮ್ ಅವರ ಈ  ಚಿತ್ರಕ್ಕೆ ಪ್ರಖ್ಯಾತ ವ್ಯಕ್ತಿಯನ್ನು ಕರೆಯಿಸಿ ಕ್ಲ್ಯಾಪ್ ಮಾಡಿಸುವ ಯೋಜನೆಯಲ್ಲಿದ್ದಾರೆ.  ಈ ಚಿತ್ರ ನಿರ್ದೇಶನ ಮಾಡಲು ನಟ ಧ್ರುವ ಸರ್ಜಾ ಪ್ರೇರಣೆ, ಎಂದು ಈ ಹಿಂದೆ ಪ್ರಥಮ್ ಹೇಳಿದ್ದರು. 'ಮಾಮೂಲಿ ಮಾಸ್ ಹೀರೋಗಳಿಗಿಂತಲೂ ವಿಭಿನ್ನವಾದ ಸಾಮರ್ಥ್ಯ ನಿನಗಿದೆ, ಗಂಭೀರ ವಿಷಯವನ್ನು ಹಾಸ್ಯಾಸ್ಪದವಾಗಿ ಪ್ರೆಸೆಂಟ್ ಮಾಡುವುದನ್ನು ಮುಂದುವರೆಸು, ಎಂದು ಸಲಹೆ ನೀಡಿದ್ದಾರೆ' ಎಂದು ಹೇಳಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!