ವಿಷ್ಣುವರ್ಧನ್ 'ವೀರಪ್ಪ ನಾಯ್ಕ' ಚಿತ್ರದಲ್ಲಿ ನಟ ದರ್ಶನ್ ನಟಿಸಬೇಕಿತ್ತು, ಯಾಕೆ ಆಗ್ಲಿಲ್ಲ ಅಂದ್ರೆ.. !

By Shriram Bhat  |  First Published Aug 26, 2024, 9:05 PM IST

ವೀರಪ್ಪನಾಯ್ಕ ಚಿತ್ರವನ್ನು ನಿರ್ದೇಶಿಸಿರುವವರು ಎಸ್ ನಾರಾಯಣ್. 1999, ಜನವರಿ 01ರಲ್ಲಿ ತೆರೆ ಕಂಡ ಈ ಚಿತ್ರಕ್ಕೆ ಸಂಬಂಧಿಸಿದಂತೆ, ಎಸ್ ನಾರಾಯಣ್ ಅವರು ಸೀಕ್ರೆಟ್ ಒಂದನ್ನು ಬಹಿರಂಗ ಪಡಿಸಿದ್ದಾರೆ. 'ಈ ಚಿತ್ರದಲ್ಲಿ ವೀರಪ್ಪ ನಾಯ್ಕ ಪಾತ್ರಧಾರಿ..


ಕನ್ನಡದ 'ವೀರಪ್ಪನಾಯ್ಕ' ಚಿತ್ರದ ಬಗ್ಗೆ ಗೊತ್ತಿಲ್ಲದವರು ಕಡಿಮೆ ಎಂದೇ ಹೇಳಬೇಕು. ಸಾಹಸಸಿಂಹ ನಟ ವಿಷ್ಣುವರ್ಧನ್ (Vishnuvardhan) ಅಭಿನಯದ 'ವೀರಪ್ಪನಾಯ್ಕ' ಚಿತ್ರವು ಸೂಪರ್ ಹಿಟ್ ದಾಖಲಿಸಿ ಅಪಾರ ಮೆಚ್ಚುಗೆ ಪಡೆದ ಸಿನಿಮಾ. ಈ ಚಿತ್ರದಲ್ಲಿ ನಟಿ ಶ್ರುತಿ ಅವರು ಡಾ ವಿಷ್ಣುವರ್ಧನ್ ಅವರಿಗೆ ಜೋಡಿಯಾದಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ಒಂದು ಆಸಕ್ತಿಕರ ಸಂಗತಿ ಇದೀಗ ಬಯಲಾಗಿದೆ. 

ಹೌದು, ವೀರಪ್ಪನಾಯ್ಕ (Veerappa Naik) ಚಿತ್ರವನ್ನು ನಿರ್ದೇಶಿಸಿರುವವರು ಎಸ್ ನಾರಾಯಣ್. 1999, ಜನವರಿ 01ರಲ್ಲಿ ತೆರೆ ಕಂಡ ಈ ಚಿತ್ರಕ್ಕೆ ಸಂಬಂಧಿಸಿದಂತೆ, ಎಸ್ ನಾರಾಯಣ್ ಅವರು ಸೀಕ್ರೆಟ್ ಒಂದನ್ನು ಬಹಿರಂಗ ಪಡಿಸಿದ್ದಾರೆ. 'ಈ ಚಿತ್ರದಲ್ಲಿ ವೀರಪ್ಪ ನಾಯ್ಕ ಪಾತ್ರಧಾರಿ ನಟ ವಿಷ್ಣುವರ್ಧನ್ ಮಗನಾಗಿ ನಟ ದರ್ಶನ್ ಅವರು ನಟಿಸಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಆ ಪಾತ್ರವನ್ನು ನಟ ಸೌರವ್ ಮಾಡುವಂತಾಯ್ತು' ಎಂದಿದ್ದಾರೆ. 

Tap to resize

Latest Videos

ಗೂನು ಬೆನ್ನಿನ ನಟಿಯೆಂದು ಅಣಕ ಮಾಡಿದ್ದವರ ಎದುರೇ ಸ್ಟಾರ್ ಆಗಿ ಬೆಳೆದಿದ್ದು ಹೇಗೆ ಕಲ್ಪನಾ?

ವೀರಪ್ಪ ನಾಯ್ಕ ಚಿತ್ರದಲ್ಲಿ ನಟ ದರ್ಶನ್ ಅವರನ್ನು ವಿಷ್ಣುವರ್ಧನ್ ಮಗನಾಗಿ ನೋಡಲು ಸ್ವತಃ ಎಸ್ ನಾರಾಯಣ್ ಅವರು ಬಯಸಿದ್ದರಂತೆ. ಕಾರಣ, ಅಂದು ನಟ ದರ್ಶನ್ ಅವರು ಎಸ್ ನಾರಾಯಣ್ ಬ್ಯಾನರ್‌ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಹೀಗಾಗಿ ಅವರನ್ನು ತೀರಾ ಹತ್ತಿರದಿಂದ ಬಲ್ಲ ಎಸ್ ನಾರಾಯಣ್ ಅವರು ನಟ ದರ್ಶನ್ ಅವರೇ ಆ ಪಾತ್ರಕ್ಕೆ ಸೂಕ್ತ ಎಂದು ನಿರ್ಧರಿಸಿದ್ದರಂತೆ. ಆದರೆ, ಅದು ಸಾಧ್ಯವೇ ಆಗದಿದ್ದಾಗ ನಟ ಸೌರವ್ ಅವರನ್ನು ಆ ಜಾಗಕ್ಕೆ ಕರೆತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ಬಂಧನಾ ಚಿತ್ರದಲ್ಲಿ ನಟ ದರ್ಶನ್ ಅವರು ವಿಷ್ಣುವರ್ಧನ್ ಮಗನಾಗಿ ನಟಿಸಿದ್ದಾರೆ. ಆದರೆ, ಒಮ್ಮೆ ವೀರಪ್ಪ ನಾಯ್ಕ ಚಿತ್ರದಲ್ಲೂ ಅವರಬ್ಬರೂ ತಂದೆ-ಮಗನಾಗಿ ನಟಿಸಿದ್ದರೆ ಅವರಿಬ್ಬರ ಅಭಿಮಾನಿಗಳಿಗೂ ಖುಷಿಯಾಗುತ್ತಿತ್ತು. ಆದರೆ, ಅದು ಅನಿವಾರ್ಯ ಕಾರಣದಿಂದ ಅಸಾಧ್ಯವಾಗಿದೆ. ಈಗ ನಟ ವಿಷ್ಣುವರ್ಧನ್ ಅವರು ನಮ್ಮೊಂದಿಗಿಲ್ಲ, ದಿವಂಗತರಾಗಿದ್ದಾರೆ. ಹಾಗೇ, ನಟ ದರ್ಶನ್ ಅವರು ಕೊಲೆ ಆರೋಪದ ಮೇಲೆ ಜೈಲಿನಲ್ಲಿ ಇದ್ದಾರೆ. 

ರಾಕಿಂಗ್ ಸ್ಟಾರ್ ಜತೆಯಾದ ಹಾಲಿವುಡ್ ಹೀರೋ, ಟಾಕ್ಸಿಕ್‌ಗೆ ಬ್ರಿಟಿಷ್ ಸೂಪರ್ ಸ್ಟಾರ್ ಎಂಟ್ರಿ!

ವೀರಪ್ಪ ನಾಯ್ಕ ಚಿತ್ರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ತಯಾರಿಸುವ ಹುಬ್ಬಳ್ಳಿಯ ಗರಗ ಗ್ರಾಮವನ್ನು ತೋರಿಸಲಾಗಿದೆ. ಆ ಗ್ರಾಮಕ್ಕೆ ತೆರಳಿ, ಅಲ್ಲಿನ ಕೆಲಸಕಾರ್ಯಗಳನ್ನೆಲ್ಲಾ ಅಭ್ಯಾಸ ಮಾಡಿ ಕಥೆ ಬರೆದಿದ್ದಾರಂತೆ ಎಸ್ ನಾರಾಯಣ್. ಕಥೆ ಮಾಡುವಾಗಲೇ ವೀರಪ್ಪನಾಯ್ಕನ ಮಗನ ಪಾತ್ರಕ್ಕೆ ನಟ ದರ್ಶನ್ ಅವರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಕಥೆ ಸಿದ್ಧ ಮಾಡಿದ್ದರಂತೆ. ಬಳಿಕ ಅದಕ್ಕೆ ನಟ ವಿಷ್ಣುವರ್ಧನ್ ಹೀರೋ ಆಗಿ, ಸೌರವ್ ಅವರ ಮಗನಾಗಿ ನಟಿಸಿದ್ದಾರೆ. 

click me!