
ಗಾಂಧಿನಗರದ ಪ್ರತಿಯೊಬ್ಬ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರೊಂದಿಗೆ ಆಫ್ತ ಸಂಬಂಧ ಹೊಂದಿದ್ದ ಕಪಾಲಿ ಮೋಹನ್ ನೇಣಿಗೆ ಶರಣಾಗಿ, ಬಾರದ ಲೋಕಕ್ಕೆ ತೆರಳಿದ್ದಾರೆ.
ಜಾಲಹಳ್ಳಿ ಸಮೀಪದ ತಮ್ಮ ಸುಪ್ರೀಂ ಸ್ಟಾರ್ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗಂಗಮ್ಮನ ಗುಡಿ ಪೊಲೀಸರು ಭೀಟಿ ನೀಡಿದ್ದಾರೆ. ಸ್ಯಾಂಡಲ್‌ವುಡ್ ಹೆಸರಾಂತ ಕಲಾವಿದರ ಜೊತೆ ಹಣ ಕಾಸಿನ ವ್ಯವಹಾರ ಮಾಡುತ್ತಿದ್ದ ಮೋಹನ್ ಅವರಿಗೆ ಸೇರಿರುವ ಹೊಟೇಲ್‌ವೊಂದರ ಮೇಲೆ ಕಳೆದ ವರ್ಷ ಸಿಸಿಬಿ ದಾಳಿ ನಡೆದಿತ್ತು.
ನಿರ್ಭಯಾ ಹಂತಕರ Hangmanಗೆ 1 ಲಕ್ಷ ರೂ; ನುಡಿದಂತೆ ನಡೆದ ಜಗ್ಗೇಶ್!
ಸಾವಿಗೂ ಮುನ್ನ ಆಡಿಯೋ ಮೂಲಕ ಸುವರ್ಣ ನ್ಯೂಸ್ ಬಳಿ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 7 ವರ್ಷಗಳಿದಂ ಬಸವೇಶ್ವರ ಬಸ್ ಸ್ಟ್ಯಾಂಡ್‌ನಲ್ಲಿ ಹೋಟೆಲ್ ನಡೆಸುತ್ತಿದ್ದರು. ಆದರೆ ಸಾಲ ಹೆಚ್ಚಾದ ಕಾರಣ 8 ತಿಂಗಳಿಂದ ಬಾಡಿಗೆಯನ್ನೂ ಕಟ್ಟಲು ಸಾಧ್ಯವಾಗದೇ ಸಹಾಯ ಮಾಡಲು ಸಿಎಂ ಯಡಿಯೂರಪ್ಪ ಹಾಗೂ ಲಕ್ಷಣ ಸವದಿ ಅವರ ಮೊರೆ ಹೋಗಿದ್ದಾರೆ.
ಆತ್ಮಹತ್ಯೆಗೆ ಇದು ಒಂದು ತಿರುವಾದರೆ, ಕೆಲವು ಆಪ್ತರು ಹೇಳುವ ಪ್ರಕಾರ ಮೋಹನ್ ಮಗಳು ಅಂತರ್ಜಾತಿ ವಿವಾಹವಾದ ಬಳಿಕ ಮನನೊಂದಿದ್ದರು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.