ಮರಳಿ ಬಂದ ಅರ್ಜುನ್‌ ಜನ್ಯಾ, ಇದು 'ಏಕ್‌ ಲವ್‌ ಯಾ' ಮಾಯೇ!

Suvarna News   | Asianet News
Published : Mar 23, 2020, 08:32 AM ISTUpdated : Mar 23, 2020, 08:34 AM IST
ಮರಳಿ ಬಂದ ಅರ್ಜುನ್‌ ಜನ್ಯಾ, ಇದು 'ಏಕ್‌ ಲವ್‌ ಯಾ' ಮಾಯೇ!

ಸಾರಾಂಶ

ಹೆಚ್ಚು ಕಮ್ಮಿ ಒಂದು ತಿಂಗಳ ನಂತರ ಸಂಗೀತ ನಿರ್ದೇ​ಶಕ ಅರ್ಜುನ್‌ ಜನ್ಯಾ ಮತ್ತೆ ಮರ​ಳಿ​ದ್ದಾರೆ. ಎಂದಿ​ನಂತೆ ಮ್ಯೂಸಿಕ್‌ ಕೀ ಬೋರ್ಡ್‌ ಹಿಡಿದು ಕೂತಿ​ದ್ದಾರೆ.

ಇದ್ದ​ಕ್ಕಿ​ದ್ದಂತೆ ಕಾಣಿ​ಸಿ​ಕೊಂಡ ಹೃದಯಾಘಾತಕ್ಕೆ ಒಳಗಾಗಿದ್ದ ಅರ್ಜುನ್‌ ಜನ್ಯಾ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಸಲೆ ಮೇರೆಗೆ ಒಂದು ತಿಂಗಳು ವಿಶ್ರಾಂತಿ​ಯ​ಲ್ಲಿ​ದ್ದರು. ಹೀಗಾಗಿ ಅವರು ಒಪ್ಪಿ​ಕೊಂಡಿದ್ದ ಬಹು​ತೇಕ ಸಿನಿ​ಮಾ​ಗಳು ಪೋಸ್ಟ್‌ ಪ್ರೊಡ​ಕ್ಷನ್‌ ಕೆಲ​ಸ​ಗಳು ನಿಂತೇ ಹೋಗಿ​ದ್ದ​ವು.

ಈಗ ಪುನಃ ಮ್ಯೂಸಿಕ್‌ ರೂಮ್‌​ಗೆ ವಾಪಸ್ಸು ಆಗಿದ್ದು, ಸರ​ದಿ​ಯಲ್ಲಿ ಕಾಯು​ತ್ತಿ​ರುವ ಚಿತ್ರ​ಗ​ಳಿಗೆ ರಾಗ ಸಂಯೋ​ಜನೆ, ಹಿನ್ನೆಲೆ ಸಂಗೀತ ಕೂರಿ​ಸುವ ಕೆಲ​ಸ​ದಲ್ಲಿ ಬ್ಯುಸಿ ಆಗಿ​ದ್ದಾರೆ. ಆರೋ​ಗ್ಯ​ದಿಂದ ಚೇತ​ರಿ​ಸಿ​ಕೊಂಡ ಬಂದು ಪ್ರೇಮ್‌ ನಿರ್ದೇ​ಶ​ನದ ‘ಏಕ್‌ ಲವ್‌ ಯಾ’ ಚಿತ್ರಕ್ಕೆ ಸಂಗೀತ ನೀಡು​ತ್ತಿ​ದ್ದಾರೆ.

ಸಂಗೀತ ಲೋಕಕ್ಕೆ ಮರಳಿದ ಅರ್ಜುನ, ಮತ್ತೆ ಸಿಗಲಿದೆ ರಸದೌತಣ

ಅದೇ ಉತ್ಸಾ​ಹ​ದಲ್ಲಿ ಮರ​ಳಿ​ರುವ ಅರ್ಜುನ್‌ ಜನ್ಯಾ ಅವ​ರನ್ನು ಕಂಡು ಜೋಗಿ ಪ್ರೇಮ್‌ ಅವರು ‘ಮ್ಯೂಸಿಕ್‌ ಬೀಟ್ಸ್‌ ಇರೋವರೆರ್ಗೂ ನಮ… ಹಾರ್ಟ… ಬೀಟ್‌ ಯಾವತ್ತೂ ನಿಲ್ಲಲ್ಲ’ ಎಂದು ಅರ್ಜುನ್‌ ಜನ್ಯಾ ಅವ​ರಿಗೆ ಶುಭ ಕೋರಿ​ದ್ದಾರೆ. ‘ಕೋಟಿ​ಗೊಬ್ಬ 3’ ಸೇರಿ​ದಂತೆ ಅರ್ಜುನ್‌ ಜನ್ಯ ಕೈಯಲ್ಲಿ ಸಾಕಷ್ಟುಚಿತ್ರಗಳಿವೆ. ಅವರ ಸಂಗೀತ ನಿರ್ದೇಶನದ ಹಲವು ಚಿತ್ರಗಳು ಇದೀಗ ಬಿಡುಗಡೆಗೂ ರೆಡಿಯಾಗಿವೆ. ಈ ಪೈಕಿ ‘ರಾಬ​ರ್ಟ್‌’ ಚಿತ್ರವೂ ಒಂದು. ಇನ್ನೂ ಅರ್ಧಕ್ಕೆ ನಿಂತಿದ್ದ ಸಣ್ಣಪುಟ್ಟಕೆಲಸಗಳನ್ನು ಈಗ ಪೂರ್ಣಗೊಳಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ-ರಕ್ಷಿತ್ ಶೆಟ್ಟಿ ಬ್ರೇಕಪ್ ಆಗಿದ್ಯಾಕೆ? ಆಮೇಲೆ ಆಗಿದ್ದೇನು? ಘಟನೆಯ ಅಸಲಿ ಸತ್ಯ ತೆರೆದಿಟ್ಟ ಪ್ರಮೋದ್​ ಶೆಟ್ಟಿ
Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?