ಎರಡು ಸ್ಟಾರ್‌ ಸಿನಿಮಾ ಸ್ಕ್ರಿಪ್ಟ್ ರೆಡಿ: ನಿರ್ದೇಶಕ ಕೃಷ್ಣ

By Kannadaprabha News  |  First Published Sep 25, 2020, 11:33 AM IST

ಪೈಲ್ವಾನ್‌ ಕೃಷ್ಣ ಹಾಗೂ ಸ್ವಪ್ನಾ ಕೃಷ್ಣ ದಂಪತಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎರಡು ಚಿತ್ರಗಳಿಗೆ ಚಾಲನೆ ಕೊಟ್ಟಿದ್ದಾರೆ. ಮೊದಲ ಹಂತವಾಗಿ ಎರಡು ಚಿತ್ರಗಳಿಗೆ ಸ್ಕಿ್ರಪ್ಟ್‌ ಪೂಜೆ ಮಾಡಿದ್ದು, ಸದ್ಯದಲ್ಲೇ ತಮ್ಮ ಚಿತ್ರಗಳಲ್ಲಿ ನಟಿಸಿರುವ ಸ್ಟಾರ್‌ ನಟರು ಯಾರೆಂದು ಹೇಳಲಿದ್ದಾರೆ. 


 ಈ ಬಾರಿ ಕೃಷ್ಣ ಅವರು ಕೈಗೆತ್ತಿಕೊಂಡಿರುವ ಎರಡು ಚಿತ್ರಗಳ ಪೈಕಿ ಒಂದು ಚಿತ್ರಕ್ಕೆ ಹೊಸಬರು ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಮತ್ತೊಂದು ಚಿತ್ರದ ನಿರ್ದೇಶನದ ಸಾರಥಿಯಾಗಿ ಕೃಷ್ಣ ಅವರೇ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ಈ ಎರಡೂ ಚಿತ್ರಗಳನ್ನು ತಾವೇ ನಿರ್ಮಿಸುತ್ತಿದ್ದಾರೆ.

‘ಪೈಲ್ವಾನ್’ ಪೈರಸಿ ಆರೋಪಿ ರಾಕೇಶ್ ಬಂಧನ 

Latest Videos

undefined

‘ಎರಡು ಚಿತ್ರಗಳಿಗೆ ಸ್ಕಿ್ರಪ್ಟ್‌ ಪೂಜೆ ಮಾಡಿದ್ದೇನೆ. ಸಾಮಾನ್ಯವಾಗಿ ನನ್ನ ನಿರ್ದೇಶನದ ಪ್ರತಿ ಚಿತ್ರದ ಮುಹೂರ್ತ ಚಾಮುಂಡಿ ಬೆಟ್ಟದಲ್ಲೇ ನಡೆಯುತ್ತದೆ. ಈ ಬಾರಿ ಕೋವಿಡ್‌ ಕಾರಣಕ್ಕೆ ಸರಳವಾಗಿ ಪೂಜೆ ಮಾಡಿಕೊಂಡಿದ್ದೇವೆ. ಎರಡೂ ಚಿತ್ರಗಳಲ್ಲಿ ಸ್ಟಾರ್‌ ಹೀರೋಗಳೇ ನಟಿಸುತ್ತಿದ್ದಾರೆ. ಕತೆ ಓಕೆ ಆಗಿದೆ. ಈ ಬಗ್ಗೆ ಮಾತುಕತೆ ಆಗಿದ್ದು, ಸದ್ಯದಲ್ಲೇ ಅವರ ಹೆಸರುಗಳನ್ನು ಘೋಷಣೆ ಮಾಡಲಿದ್ದೇನೆ. ಎಂದಿನಂತೆ ದೊಡ್ಡ ಕಮರ್ಷಿಯಲ್‌ ಸಿನಿಮಾಗಳನ್ನೇ ಕೈಗೆತ್ತಿಕೊಂಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಕೃಷ್ಣ.

 

ಧನ್ಯವಾದಗಳು ಮೇಡಂ 🙏ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನಮ್ಮೊಂದಿಗೆ ಇರಲಿ https://t.co/FswQXgcSSt

— ಕೃಷ್ಣ / Krishna (@krisshdop)

ಕೃಷ್ಣ ಅವರು ನಿಖಿಲ್‌ ಕುಮಾರ್‌ ಜತೆ ಸಿನಿಮಾ ಮಾಡುವ ಸುದ್ದಿ ಇತ್ತು. ಸದ್ಯಕ್ಕೆ ಆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಮುಂದೆ ಮಾಡಲಿದ್ದೇವೆ ಎಂಬುದು ಕೃಷ್ಣ ಅವರ ಮಾತು.

ಹೊಸಬರಿಗೆ ಅವಕಾಶ

ಈ ಎರಡು ಚಿತ್ರಗಳ ಜತೆಗೆ ಮತ್ತಿಬ್ಬರು ಹೊಸಬರ ಕತೆಗಳನ್ನು ಸಿನಿಮಾ ಮಾಡುತ್ತಿದ್ದಾರೆ ಕೃಷ್ಣ. ಈ ಎರಡೂ ಚಿತ್ರಗಳೂ ಪ್ರಯೋಗಾತ್ಮಕತೆಯಿಂದ ಕೂಡಿದ್ದು, ಸ್ಕಿ್ರಪ್ಟ್‌ ಕರೆಕ್ಷನ್‌ ನಡೆಯುತ್ತಿದೆ. ಇತ್ತೀಚೆಗೆ ಕೃಷ್ಣ, ಭಿನ್ನ ರೀತಿಯ ಸಿನಿಮಾ ಮಾಡುವ ಉದ್ದೇಶದೊಂದಿಗೆ ಕತೆ, ರೈಟರ್ಸ್‌ಗೆ ಆಹ್ವಾನ ನೀಡಿದ್ದರು. ಇವರಲ್ಲಿ ಆಯ್ಕೆ ಆದ ಎರಡು ಕತೆಗಳನ್ನೇ ಮುಂದೆ ತಮ್ಮ ಸಂಸ್ಥೆಯಲ್ಲಿ ಸಿನಿಮಾ ಮಾಡಲಿದ್ದಾರೆ ಕೃಷ್ಣ.

click me!