ಇದೇನಪ್ಪಾ ದಿಗಂತ್ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎಂತಿದ್ದಾರೆ?

By Suvarna News  |  First Published Oct 27, 2020, 2:26 PM IST

ವಿಜಯದಶಮಿ ಹಬ್ಬದ ಪ್ರಯುಕ್ತ ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ದಿಗಂತ್. ತಮ್ಮ ಹುಟ್ಟೂರಿನ ಕಥೆ ಹೇಳೋಕೆ ಬರ್ತಿದ್ದಾರೆ...


ಸ್ಯಾಂಡಲ್‌ವುಡ್‌ ದೂದ್ ಪೇಡಾ ದಿಗಂತ್ ಒಂದು ಕಡೆ ಚಿತ್ರ ಮುಹೂರ್ತ ಮಾಡುತ್ತಿದ್ದರೆ, ಮತ್ತೊಂಡು ಕಡೆ ತಮ್ಮ ಮುಂದಿನ ಚಿತ್ರದ ಬಗ್ಗೆ ಅಪ್ಡೇಡ್ ನೀಡುತ್ತಿದ್ದಾರೆ. ಅದುವೇ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎಂದು.

ತುಸು ಸಿಲ್ಲಿ ಕೆಲಸ ಮಾಡೋಣ..ಐಂದ್ರಿತಾ ಬಹಿರಂಗ ಆಹ್ವಾನ! 

Tap to resize

Latest Videos

ನಮ್ಮೂರು ಕಥೆ:
ಬಜಾಜ್ ಚೇತಕ್‌ ಮೇಲೆ ಕುಳಿತು ಎರಡು ಮೂಟೆ ಹಿಂದಿಟ್ಟಿಕೊಂಡು ಪೋಸ್ ಕೊಟ್ಟಿರುವ ಪೋಟೋ ಶೇರ್ ಮಾಡಿದ್ದಾರೆ ದಿಗಂತೆ. 'ಇದು ನನ್ನ ಮುಂದಿನ ಚಲನಚಿತ್ರದ ಪೋಸ್ಟರ್ ಬಿಡುಗಡೆ. ಈ ಚಿಲನಚಿತ್ರ ಸಾಗರದ (ನಮ್ಮೂರು) ಸಣ್ಣ ಹಳ್ಳಿಯ ಕಥೆಯಾಗಲಿದೆ,' ಎಂದು ಬರೆದಿದ್ದಾರೆ.

 

ಕೆಲವು ಮೂಲಗಳ ಪ್ರಕಾರ ದಿಗಂತ್ ಅಡಕೆ ಬೆಳೆಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಗರದಲ್ಲಿರುವ ಹಳ್ಳಿಯ ಕಥೆ ಆಗಿರುವ ಕಾರಣ ಅಲ್ಲಿಯೇ ಚಿತ್ರೀಕರಣ ಮಾಡಲಾಗುತ್ತದೆ. ಈ ಚಿತ್ರದಲ್ಲಿ ದಿಗಂತ್‌ಗೆ ಇಬ್ಬರು ನಾಯಕಿಯರು ಸಾಥ್‌ ನೀಡಲಿದ್ದಾರೆ. ಮೊದಲ ನಾಯಕಿಯಾಗಿ ಪತ್ನಿ ಐಂದ್ರಿತಾ ರೇ ಹಾಗೂ ಎರಡನೇ ನಾಯಕಿಯಾಗಿ ಕಿರುತೆರೆ 'ಕನ್ನಡತಿ' ಧಾರಾವಾಹಿಯ ರಂಜನಿ ರಾಘವನ್ ನಟಿಸಲಿದ್ದಾರೆ. 

ಹರಿಪ್ರಿಯಾ-ದಿಗಂತ್  ಜೋಡಿ.. ಪ್ರೇಮ ಕತೆಯೋ.. ಥ್ರಿಲ್ಲರ್ ಮೋಡಿಯೋ?

ಒಂದು ರೀತಿಯ ಡಿಫರೆಂಟ್ ಟೈಟಲ್ ಆಗಿರುವ ಈ ಚಿತ್ರಕ್ಕೆ ವಿನಾಯಕ ಕೋಡ್ಸರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಟ ರಕ್ಷಿತ್ ಶೆಟ್ಟಿ 'ಅದ್ಭುತವಾಗಿ ಕಾಣಿಸುತ್ತಿದೆ ದಿಗ್ಗಿ' ಎಂದು ಕಾಮೆಂಟ್ ಮಾಡಿದರೆ, ನಿರ್ದೇಶಕ ಸಿಂಪಲ್ ಸುನಿ ಹಾಗೂ ನಟ ಭುವನ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

click me!