
ಧ್ರುವ ಸರ್ಜಾ ಮತ್ತೊಂದು ಲೆವೆಲ್‌ಗೆ
ಈ ಹಿಂದೆ ರನ್ನ ಸಿನಿಮಾ ಮಾಡಿದ್ದೆ. ಆ ಮಾದರಿಯಲ್ಲೇ ಈ ಚಿತ್ರ ಇರುತ್ತೆ. ಇಲ್ಲಿ ಕುಟುಂಬವೇ ಪ್ರಧಾನ. ಮನರಂಜನೆಗೆ ಹೆಚ್ಚು ಒತ್ತು ಕೊಡುತ್ತೇವೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಹಿಂದೆಂದಿಗಿಂತಲೂ ಹೆಚ್ಚು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿನ ಚಿತ್ರಗಳಲ್ಲಿ ಸಖತ್ ರಗಡ್ ಆಗಿದ್ರೆ, ಇಲ್ಲಿ ಅಲ್ಟಾ್ರ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಪ್ರೀತಿ, ಸಂಬಂಧಗಳ ಕತೆ
ಹೊಸ ಸಿನಿಮಾದ ಕತೆ ಫ್ಯಾಮಿಲಿಗೆ ಸಂಬಂಧಿಸಿದ್ದು. ಪ್ರೀತಿ, ಸಂಬಂಧಗಳ ಸುತ್ತ ಸುತ್ತುವ ಕಥೆ. ಇವತ್ತು ಹಳ್ಳಿಯೊಳಗೆ ಸಂಬಂಧಗಳು ಹೇಗಿವೆ, ಮನುಷ್ಯನಿಗೂ ಜಮೀನಿಗೂ ಸಂಬಂಧ ಹೇಗಿದೆ, ಮನುಷ್ಯನಿಗೂ ಮನುಷ್ಯನಿಗೂ ಸಂಬಂಧ ಹೇಗಿದೆ ಇದನ್ನೆಲ್ಲ ರಿವೀಲ್ ಮಾಡುತ್ತಾ ಭರಪೂರ ಮನರಂಜನೆಯನ್ನೂ ನೀಡುತ್ತದೆ. ಅಧ್ಯಕ್ಷ, ರನ್ನ ಮಾದರಿಯ ಸಿನಿಮಾ.
ಧ್ರುವ ಸರ್ಜಾ ಮನೆ ವಿಳಾಸ ಹುಡುಕುತ್ತಿರುವ ನಿರ್ಮಾಪಕರು! ...
ಕ್ಷಣ ಕ್ಷಣಕ್ಕೂ ಅಚ್ಚರಿ
ಪೊಗರು ಸಿನಿಮಾದಲ್ಲಿ ಪ್ರತೀ ಹದಿನೈದು ನಿಮಿಷಕ್ಕೊಂದು ಅಚ್ಚರಿ ಇದೆ. ಅದು ಅಲ್ಲಿಗೇ ನಿಲ್ಲಲ್ಲ. ಥಿಯೇಟರ್‌ನಿಂದ ಹೊರ ಬಂದ ಮೇಲೆಯೂ ಮೈ ನವಿರೇಳಿಸುವ ಅನುಭವ ನೀಡುವ ಸರ್ಪೈಸ್ ಅದು. ಈ ಹೊಸ ಸಿನಿಮಾದ ಕತೆ ಚಿತ್ರಕಥೆಗಳ ಕೆಲಸ ಆಗ್ತಿದೆ. ಈ ಸರ್ಪೈಸಿಂಗ್ ಎಲಿಮೆಂಟ್ ಮೇಲೆ ಹೆಚ್ಚಿನ ಫೋಕಸ್ ಇದ್ದೇ ಇರುತ್ತೆ. ಹೊಸದಾಗಿ ಏನು ತೋರಿಸಬಹುದು ಅನ್ನುವ ಬಗ್ಗೆ ಚಿಂತನೆ ನಡೆಯುತ್ತಿದೆ.
ದುಬಾರಿ ಬಹುತಾರಾ ಬಳಗವಿರುವ ಕಮರ್ಷಿಯಲ್ ಚಿತ್ರ. ಧ್ರುವ ಸರ್ಜಾ ಸಿನಿಮಾ ಅಂದರೆ ಮನರಂಜನೆಗೆ ಮೋಸ ಇರಲ್ಲ. ನಮ್ಮ ಸಿನಿಮಾದಲ್ಲೂ ಭರ್ಜರಿ ಮನರಂಜನೆ ಇದೆ. ಬಜೆಟ್, ಶೂಟಿಂಗ್ ಪ್ಲಾನ್‌ಗಳು ಇನ್ನಷ್ಟೇ ನಿರ್ಧಾರ ಆಗಬೇಕಿದೆ. ಇಂದು ಮುಹೂರ್ತ. ತಿಂಗಳ ಕೊನೆಯಲ್ಲಿ ಚಿತ್ರೀಕರಣ ಆರಂಭವಾಗಲಿದೆ.- ಉದಯ್ ಮೆಹ್ತಾ, ನಿರ್ಮಾಪಕ
ವಿದೇಶದಲ್ಲೂ ಶೂಟಿಂಗ್
ಮೂರು ಭಾಗಗಳಲ್ಲಿ ಶೂಟಿಂಗ್ ನಡೆಯುತ್ತೆ. ಆ ಪ್ರಕಾರ ವಿದೇಶದಲ್ಲಿ ಒಂದು ಹಂತದ ಶೂಟಿಂಗ್ ನಡೆದರೆ ಬೆಂಗಳೂರಿನಲ್ಲಿ ಮತ್ತೊಂದು ಭಾಗದ ಶೂಟಿಂಗ್ ನಡೆಯುತ್ತೆ. ಆಮೇಲೆ ಮಂಡ್ಯದ ಸುತ್ತಮುತ್ತ ಚಿತ್ರೀಕರಣಕ್ಕೆ ಚಿಂತನೆ ನಡೆಸಲಾಗಿದೆ.
"
ಕನ್ನಡದ ನಾಯಕಿಗೆ ಆದ್ಯತೆ
ಬಹುದೊಡ್ಡ ತಾರಾಬಳಗ ಇರುವ ಸಿನಿಮಾ. ನಾಯಕಿ ಕನ್ನಡತಿಯೇ ಆಗಿದ್ದರೆ ಚೆನ್ನ ಅಂದುಕೊಂಡಿದ್ದೇವೆ. ಕನ್ನಡದಲ್ಲಿ ಮುಂಚೂಣಿಯಲ್ಲಿರುವ, ಧ್ರುವಗೆ ಕಾಂಬಿನೇಶನ್ ಆಗುವಂಥಾ ನಾಯಕಿಯರನ್ನು ಈಗಾಗಲೇ ಸಂಪರ್ಕಿಸಿದ್ದೇವೆ. ಅಧಿಕೃತ ಆದ ಮೇಲೆ ತಿಳಿಸುತ್ತೇವೆ.
ಅರ್ಜುನ್ ಸರ್ಜಾ 'ಜೈ ಆಂಜನೇಯ' ಚಿತ್ರದಕ್ಕೆ ದಚ್ಚು ಗೆಸ್ಟ್ ರೋಲ್?
ಕುಟುಂಬವನ್ನು ಕರೆತನ್ನಿ
ಧ್ರುವ ಸರ್ಜಾ ಸಿನಿಮಾ ಅಂದರೆ ಹುಡುಗರ ಪಿಕ್ಚರ್, ಹುಡುಗ್ರು ಮಾತ್ರ ಹೋಗ್ಬೇಕು ಅಂತನ್ನದೇ ತಮ್ಮ ಫ್ಯಾಮಿಲಿಯನ್ನೂ ಕರ್ಕೊಂಡು ಬಂದು ನೋಡುವಂಥಾ ಸಿನಿಮಾ ಇದು. ಇಂದು ಪೂಜೆ ಮುಗಿಸಿ ದೇವರ ಶಾಟ್ ತೆಗೆಯುತ್ತೇವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.