
ಯಾರು ಈ ಸೈನೈಡ್ ಮೋಹನ?
20 ಮಂದಿ ಯುವತಿಯರನ್ನು ಸೈನೈಡ್ ಕೊಟ್ಟು ಸಾಯಿಸಿದ ಸರಣಿ ಕೊಲೆಗಾರ. ಹೆಣ್ಣು ಮಕ್ಕಳನ್ನು ಪ್ರೀತಿಸುವ ನಾಟಕವಾಡಿ ಅವರಿಗೆ ಗರ್ಭನಿರೋಧಕ ಮಾತ್ರೆಗಳು ಎಂದು ಹೇಳಿ ಸೈನೈಡ್ ತಿನ್ನಿಸಿ ಕೊಲೆ ಮಾಡುತ್ತಿದ್ದ. ಬಂಟ್ವಾಳದ ಮೂಲದ ಈತ 2009ರಲ್ಲಿ ಯುವತಿಯೊಬ್ಬಳ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧಿತನಾಗಿ 2012ರಲ್ಲಿ ಅದರ ವಿಚಾರಣೆ ಆರಂಭಗೊಂಡಿತ್ತು. ಬೆಂಗಳೂರು, ಮೈಸೂರು, ಮಂಗಳೂರು, ಕಾಸರಗೋಡು, ಬಂಟ್ವಾಳ ಹೀಗೆ 20 ಪ್ರಕರಣಗಳು ಈತನ ಮೇಲೆ ದಾಖಲಾಗಿದ್ದು, 6 ಪ್ರಕರಣಗಳಲ್ಲಿ ಮರಣದಂಡನೆ, 10 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿತ್ತು.
ಅಂತರ್‌ಧರ್ಮೀಯ ಮದುವೆ, ಮತಾಂತರದ ಬಗ್ಗೆ ಪ್ರಿಯಾಮಣಿ ಹೇಳಿದ್ದಿಷ್ಟು
ಪ್ರಿಯಾಮಣಿ, ಯಶ್‌ಪಾಲ್ ಶರ್ಮಾ
ಈ ಚಿತ್ರ ಜನವರಿ ತಿಂಗಳಿನಿಂದ ಬೆಂಗಳೂರು ಮಂಗಳೂರು, ಮಡಿಕೇರಿ, ಗೋವಾ, ಹೈದರಾಬಾದ್, ಕಾಸರಗೋಡು ಮುಂತಾದ ಕಡೆ ಚಿತ್ರೀಕರಣ ಆರಂಭಿಸಲಿದ್ದು, ಪೊಲೀಸ್ ಅಧಿಕಾರಿಗಳಾಗಿ ಹಿಂದಿಯಲ್ಲಿ ಯಶ್ ಪಾಲ್ ಶರ್ಮಾ, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಪ್ರಿಯಾಮಣಿ ನಟಿಸಲಿದ್ದಾರೆ. ‘ಉತ್ತಮ್ ವಿಲನ್’ ಹಾಗೂ ‘ವಿಶ್ವರೂಪಂ’ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದ ಸದಾತ್ ಸೈನೂದ್ದಿನ್ ಛಾಯಾಗ್ರಾಹಣ ಮಾಡಲಿದ್ದಾರೆ. ಹಾಲಿವುಡ್‌ನ ಜಾಜ್‌ರ್ ಜೋಸಪ್ ಸಂಗೀತ ನೀಡಲಿದ್ದಾರೆ. ಶಶಿಕುಮಾರ್ ಸಂಕಲನ, ಗೋಕುಲ್ ದಾಸ್ ಕಲಾ ನಿರ್ದೇಶನ ಮಾಡಲಿದ್ದಾರೆ.
ಪ್ರಿಯಾ ಮಣಿ 56ನೇ ಸಿನಿಮಾ ರೆಡಿ: ಟೈಟಲ್‌ನಲ್ಲೇ ಇದೆ ವಿಶೇಷ..!
ದೇಶಾದ್ಯಾಂತ ತೀವ್ರ ಕುತೂಹಲ ಮೂಡಿಸಿದ್ದ ಸೈನೈಡ್ ಮೋಹನನ ಕತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೇ ಮೇಕಿಂಗ್ ಮಾಡುತ್ತಿದ್ದು, ಇಲ್ಲಿ ಸೈನೈಡ್ ಮೋಹನನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆಂಬುದು ಸದ್ಯಕ್ಕೆ ಗುಟ್ಟಾಗಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.