ಅಯ್ಯಯ್ಯೋ... ಏನಾಗೋಯ್ತು? ಸಂಯುಕ್ತಾ ಹೊರನಾಡು ಕಣ್ಣೀರಿಟ್ಟಿದ್ಯಾಕೆ?

By Suvarna NewsFirst Published Jan 22, 2020, 4:14 PM IST
Highlights

ಯಾವಾಗಲೂ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟಿ ಸಂಯುಕ್ತಾ ಹೊರನಾಡು ಈ ವಿಚಾರಕ್ಕಾಗಿ ಕಣ್ಣೀರಿಟ್ಟಿದ್ದಾರೆ. ಅರೇ..! ಏನಾಗೋಯ್ತು ಸಂಯುಕ್ತಾಗೆ? ಈ ಸುದ್ದಿ ಓದಿ.. ! 

ನಟಿ ಸಂಯುಕ್ತಾ ಹೊರನಾಡು ಮುಂದೆ ಒಟ್ಟು ಏಳು ಚಿತ್ರಗಳು ಇವೆ. ಈ ಪೈಕಿ ಕನ್ನಡದಲ್ಲಿ ಎರಡು ಚಿತ್ರಗಳು ತೆರೆಗೆ ಸಿದ್ಧವಾಗಿವೆ. ತೆಲುಗು, ತಮಿಳಿನಲ್ಲಿ ಒಂದೊಂದು ಚಿತ್ರಕ್ಕೆ ಚಿತ್ರೀಕರಣ ಮುಗಿಸಿದ್ದಾರೆ. ಈ ವರ್ಷ ಇವರ ನಟನೆಯ ಕನಿಷ್ಠ ಐದು ಚಿತ್ರಗಳಾದರೂ ತೆರೆ ಮೇಲೆ ಮೂಡಲಿವೆ.

ಇದಕ್ಕೆ ಮೊದಲ ಆರಂಭ ಹೇಳುತ್ತಿರುವುದು ‘ನಾನು ಮತ್ತು ಗುಂಡ’. ಶ್ರೀನಿವಾಸ್ ತಮ್ಮಯ್ಯ ನಿರ್ದೇಶಿಸಿ, ಶಿವರಾಜ್ ಕೆ ಆರ್ ಪೇಟೆ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಸಂಯುಕ್ತಾ ನಾಯಕಿ. ಇದೇ ಫೆ. 24 ರಂದು ಸಿನಿಮಾ ತೆರೆಗೆ ಬರುತ್ತಿದೆ.

ಅಭಿನಯ ಚಕ್ರವರ್ತಿಗೆ ಮತ್ತೊಂದು ಗರಿ; ಕಿಚ್ಚ ಅಭಿಮಾನಿಗಳು ಖುಷ್‌ ಹುವಾ..!

ನನ್ನ ನಿಜ ಜೀವನ ನೆನಪಿಸಿದ ಚಿತ್ರ

ಒಂದಿನ ನಿರ್ದೇಶಕ ಶ್ರೀನಿವಾಸ್ ತಮ್ಮಯ್ಯ ಗುಂಡ ಎನ್ನುವ ನಾಯಿ ಬಗ್ಗೆ ಹೇಳಿದ್ರು. ಅವರು ಕತೆ ಹೇಳುತ್ತಿದ್ದಾಗಲೇ ನನಗೆ ಕಣ್ಣಲ್ಲಿ ನೀರು ಬಂತು. ಯಾಕೆಂದರೆ ನಾನು ಪ್ರೀತಿಯಿಂದ ಸಾಕಿದ ನಾಯಿ ಹೆಸರು ಗುಂಡ. ಅದು ತೀರಿಕೊಂಡಿತು. ನನ್ನ ಮನೆಯ ಸದಸ್ಯನ ಕತೆ ನನಗೆ ಯಾಕೆ ಹೇಳುತ್ತಿದ್ದಾರೆ ಎನಿಸಿತು. ನಾಯಿ ಮತ್ತು ಮನುಷ್ಯನ ನಡುವಿನ ಪ್ರೀತಿಯ ಕತೆ ಇದು ಎಂದು ಹೇಳಿದ ಕೂಡಲೇ ನಾನು  ಒಪ್ಪಿಕೊಂಡೆ. ಪ್ರಾಣಿಗಳನ್ನು ಪ್ರೀತಿಸುವ ಕತೆ ಆದರೆ ಏನೂ ಹೇಳದೆ ನಾನು ನಟಿಸುತ್ತೇನೆ.

ಶಿವರಾಜ್ ಮಾಡಿದ ಪಾತ್ರ ಮಾಡಬೇಕಿತ್ತು

ನಿಜ ಜೀವನದಲ್ಲಿ ನಾನು ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತೇನೆ. ೧೫ಕ್ಕೂ ಹೆಚ್ಚು ಪ್ರಾಣಿಗಳನ್ನು ದತ್ತು ಪಡೆದುಕೊಂಡು ಸಾಕುತ್ತಿದ್ದೇನೆ. ಆದರೆ, ‘ನಾನು ಮತ್ತು ಗುಂಡ’ ಚಿತ್ರದಲ್ಲಿ ಅದೇ ಪ್ರಾಣಿಯನ್ನು ದ್ವೇಷಿಸುವ ಪಾತ್ರ ನನ್ನದು. ಕ್ಯಾಮೆರಾ ಹಿಂದೆ ಮುದ್ದು ಮಾಡುವ ಸಿಂಬಾ ಹೆಸರಿನ ನಾಯಿಯನ್ನು, ಕ್ಯಾಮೆರಾ ಮುಂದೆ ದ್ವೇಷಿಸುವ ಪಾತ್ರ ಮಾಡುತ್ತಿದ್ದಾಗ ತುಂಬಾ ಸವಾಲು ಅನಿಸಿತು. ಶಿವರಾಜ್ ಕೆ ಆರ್ ಪೇಟೆ ಅವರದ್ದು ನಾಯಿಯನ್ನು ಪ್ರೀತಿಸುವ ಪಾತ್ರ. ಹೀಗಾಗಿ ಶಿವರಾಜ್ ಮಾಡಿದ ಪಾತ್ರ ನನಗೆ ಸಿಗಬಾರದೇ ಅನ್ನಿಸಿತ್ತು.

ವಿವಿಧ ರೀತಿಯ ಪಾತ್ರಗಳು

ಹೊಂದಿಸಿ ಬರೆಯಿರಿ, ಆಮ್ಲೇಟ್, ಮೈಸೂರು ಮಸಾಲ, ಅರಿಷಡ್ವರ್ಗ, ತೆಲುಗಿನ ಲಾಕ್, ತಮಿಳಿನ ರೆಡ್ ರಾಮ್... ಇವು ನನ್ನ ಮುಂದಿರುವ ಚಿತ್ರಗಳು. ‘ಅರಿಷಡ್ವರ್ಗ’ ಚಿತ್ರಕ್ಕೂ ಶೂಟಿಂಗ್ ಮುಗಿದೆ. ಇದೇ ಫೆಬ್ರವರಿ ಕೊನೆಯ ವಾರದಲ್ಲಿ ತೆರೆಗೆ ಬರಲಿದೆ. ತೆಲುಗಿನಲ್ಲಿ ನಟ ಸತ್ಯ ದೇವ್ ಜತೆಗೆ ‘ಲಾಕ್’ ಹಾಗೂ ತಮಿಳಿನಲ್ಲಿ ಅಶೋಕ್ ಸೆಲ್ವನ್ ಜತೆಗೆ ‘ರೆಡ್ ರಾಮ್’ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ‘ಮೈಸೂರು ಮಸಾಲ’ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡುತ್ತಿದ್ದೇನೆ.

"


 

click me!