Ashwini Puneeth Rajkumar: ಅಪ್ಪು ಸಿನಿಮಾ ಸಲುವಾಗಿ ಪಡೆದ ಮುಂಗಡ ಹಣವನ್ನು ಹಿಂತಿರುಗಿಸಿದ ಪತ್ನಿ!

Suvarna News   | Asianet News
Published : Dec 25, 2021, 04:10 PM ISTUpdated : Dec 25, 2021, 04:28 PM IST
Ashwini Puneeth Rajkumar: ಅಪ್ಪು ಸಿನಿಮಾ ಸಲುವಾಗಿ ಪಡೆದ ಮುಂಗಡ ಹಣವನ್ನು ಹಿಂತಿರುಗಿಸಿದ ಪತ್ನಿ!

ಸಾರಾಂಶ

ಸಿನಿಮಾಗಳ ಸಲುವಾಗಿ ಪುನೀತ್ ಪಡೆದ ಮುಂಗಡ ಹಣವನ್ನು ಹಿಂತಿರುಗಿಸಿದ ಪತ್ನಿ ಅಶ್ವಿನಿ ಪುನೀತ್. ದೊಡ್ಮನೆ ಗುಣಕ್ಕೆ ಸಲಾಂ ಎಂದ ಅಭಿಮಾನಿಗಳು.

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ (Puneeth Rajkumar) ಜೊತೆ ಸಿನಿಮಾ ಮಾಡ್ಬೇಕು ಅಂದ್ರೆ ನಿರ್ದೇಶಕರು ಮತ್ತು ನಿರ್ಮಾಪಕರು ವಿಭಿನ್ನ ಕತೆಗಳ ಜೊತೆ ರೆಡಿಯಾಗಿರುತ್ತಾರೆ. ಜೇಮ್ಸ್ (James) ಸಿನಿಮಾ ನಂತರ ಪುನೀತ್‌ ಒಂದೆರೆಡು ತಂಡಗಳ ಜೊತೆ ಕೈ ಜೋಡಿಸಿದ್ದರು. ಅಡ್ವಾನ್ಸ್‌ ಕೂಡ ಪಡೆದುಕೊಂಡಿದ್ದರು. ಶ್ರೀಘ್ರವೇ ಸಿನಿಮಾ ಅನೌನ್ಸ್ ಮಾಡುವುದಾಗಿಯೂ ಹೇಳಿದ್ದರು ಆದರೆ ಅಷ್ಟರಲ್ಲಿ ನಡೆದ ಘಟನೆ ನಿಮಗೆ ಗೊತ್ತಿದೆ. 

ಅಕ್ಟೋಬರ್ 29ರಂದು ಹೃದಯಾಘಾತದಿಂದ (Heart attack) ಪುನೀತ್ ರಾಜ್‌ಕುಮಾರ್ ಅಗಲಿದ್ದಾರೆ. ಕನ್ನಡ ಚಿತ್ರರಂಗ ಅದ್ಭುತ ಕಲಾವಿದ, ನಿರ್ಮಾಪಕ ಮತ್ತು ಸಮಾಜ ಸೇವಕನನ್ನು ಕಳೆದುಕೊಂಡಿದೆ.  ಅಪ್ಪು ಜೊತೆ ಕೆಲಸ ಮಾಡಬೇಕು ಎಂದು ಕನಸು ಕಂಡ ನಿರ್ದೇಶಕರು (Director), ನಿರ್ಮಾಪಕರು (Producer) ಮತ್ತು ಕಲಾವಿದರ (Artist) ಕನಸು,ಕನಸಾಗಿಯೇ ಉಳಿಯಿತು.  ಆದರೆ ಇದರಿಂದ ಯಾರಿಗೂ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಪತ್ನಿ ಅಶ್ವಿನಿ (Ashwini Puneeth Rajkumar) ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. 

ಹೌದು! ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathi Srinivas) ಜೊತೆ ಸಿನಿಮಾ ಮಾಡುವುದಾಗಿ ಪುನೀತ್ ಮಾತುಕತೆ ಮಾಡಿಕೊಂಡಿದ್ದರು. ಸಿನಿಮಾ ಪ್ಲ್ಯಾನಿಂಗ್ ಕೂಡ ಶುರುವಾಗಿದ್ದು ಸಿನಿಮಾ ಸಲುವಾಗಿ ಮುಂಗಡ ಹಣವನ್ನು ಪಡೆದುಕೊಂಡಿದ್ದರು. ಆದರೆ ಸಿನಿಮಾ ಸೆಟ್ಟೇರುವ ಮುನ್ನವೇ ಅಪ್ಪು ನಮ್ಮನ್ನು ಅಗಲಿರುವ ಕಾರಣ ಯಾರಿಗೂ ಅಪ್ಪು ನಿಧನದಿಂದ ತೊಂದರೆ ಆಗಬಾರದು ಎಂದು ಅಶ್ವಿನಿ ಆ ಹಣವನ್ನು ವಾಪಸ್ ನೀಡಿದ್ದಾರೆ.

ಇಂದು ಉಮಾಪತಿ ಅವರಿಗೆ ಮುಂಗಡ ಹಣವನ್ನು (Advance Amount) ಹಿಂತಿರುಗಿಸಿದ್ದಾರೆ ಅಶ್ವಿನಿ. ಈ ಸಿನಿಮಾವನ್ನು ತರುಣ್ ಸುಧೀರ್ (Tarun Sudhir) ನಿರ್ದೇಶನ ಮಾಡಬೇಕಿದ್ದು, ಎಲ್ಲವೂ ಸರಿಯಾಗಿದ್ದರೆ ಮುಂದಿನ ವರ್ಷ ಜೂನ್ ಅಥವಾ ಜುಲೈನಲ್ಲಿ ಚಿತ್ರೀಕರಣ ಆರಂಭವಾಗಬೇಕಿತ್ತು.

ಇದರ ಜೊತೆ ಪುನೀತ್ ಅವರು 'ದ್ವಿತ್ವ' (Dvitva) ಸಿನಿಮಾ ಕೂಡ ಅನೌನ್ಸ್ ಮಾಡಿದ್ದರು. ಪವನ್ ಕುಮಾರ್ (Pavan Kumar) ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಪುನೀತ್ ಫಸ್ಟ್‌ ಲುಕ್ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದರು. ಜೇಮ್ಸ್ ಸಿನಿಮಾ ಚಿತ್ರೀಕರಣ ಮುಕ್ತಾಯವಾಗುತ್ತಿದ್ದಂತೆ 'ದ್ವಿತ್ವ' ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿಯೂ ಹೇಳಿಕೊಂಡಿದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ 

ಸಂತೋಷ್ ಆನಂದ್ ರಾಮ್‌ (Santhosh Anandram) ಮತ್ತು ಪುನೀತ್ ಕಾಂಬಿನೇಷನ್ ಸೂಪರ್ ಹಿಟ್ ಎಂದು ಎಲ್ಲರಿಗೂ ಗೊತ್ತಿದೆ.  ರಾಜಕುಮಾರ (Raja Kumara), ಯುವರತ್ನ (Yuvarathna) ನಂತರ ಇಬ್ಬರೂ ಮತ್ತೊಂದು ಸಿನಿಮಾಗೆ ಮಾತುಕತೆ ನಡೆಸಿದ್ದರು. ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿರಲಿಲ್ಲ ಆದರೆ ಸಿನಿಮಾ ಮಾಡುತ್ತಾರೆ ಎನ್ನುವ ಸೌಂಡ್ ಜೋರಾಗಿತ್ತು. ಆದರೆ ಅಪ್ಪು ಅಗಲಿದ ನಂತರ ಆ ಸಿನಿಮಾ ಕಥೆ ಅಲ್ಲಿಗೆ ಬಿಡುತ್ತಾರಾ, ಬೇರೆ ನಟ ಮಾಡಲಿದ್ದಾರೆ ಎಂದು ಗಾಸಿಪ್ (Gossip) ಹರಿದಾಡಲು ಶುರುವಾಗಿತ್ತು. ಆದರೆ ಅಷ್ಟರಲ್ಲಿ ಪುನೀತ್‌ ಸಿನಿಮಾದಲ್ಲಿ ತಮ್ಮ ನೆಚ್ಚಿನ ಪುತ್ರ ಯುವ ರಾಜ್‌ಕುಮಾರ್ ಮಾಡಲಿದ್ದಾರೆ ಎಂದು ಅನೌನ್ಸ್ ಮಾಡಿದ್ದರು. 

ಆದರೆ, ಈಗ ಪುನೀತ್ ಅವರಿಗಾಗಿಯೇ ಬರೆದಿದ್ದ ಕತೆಗೆ ಜೀವ ಬರುತ್ತಿದೆ. ಹೌದು, ಈ ಕತೆಯನ್ನು ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಅವರ ಪುತ್ರ ಯುವರಾಜ್‌ಕುಮಾರ್ (Yuva Rajkumar) ಅವರಿಗೆ ಈ ಚಿತ್ರ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.‘ಯುವರತ್ನ’ ಚಿತ್ರದ ನಂತರ ಸೆಟ್ಟೇರಬೇಕಿದ್ದ ಈ ಸಿನಿಮಾ ಪುನೀತ್ ಅಗಲಿಕೆಯಿಂದ ಕತೆ ಟೇಕಪ್ ಆಗಲಿಲ್ಲ ಎನ್ನುವುದು ಸದ್ಯಕ್ಕೆ ಕೇಳಿ ಬರುತ್ತಿರುವ ಮಾತು. 

'ಯುವ-01' ಶೀರ್ಷಿಕೆಯ ಸಿನಿಮಾ ಮೂಲಕ ಯುವ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು. ಈ ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿತ್ತು ಆದರೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿರುವ ಕಾರಣ ಸಿನಿಮಾ ಇನ್ನೂ ಶೂಟಿಂಗ್ (Shooting) ಹಂತದಲ್ಲಿದೆ. ಯುವ ದೊಡ್ಡ ಮಟ್ಟದಲ್ಲಿ ಚಿತ್ರರಂಗಕ್ಕೆ ಪರಿಚಯ ಆಗಬೇಕು ಎಂಬುದು ಪುನೀತ್ ಅವರ ಆಸೆಯಾಗಿತ್ತು ಹೀಗಾಗಿ ಮೊದಲ ಸಿನಿಮಾ ಟೈಟಲ್ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಿದ್ದರು. ಆದರೀಗ ಸಂತೋಷ್ ಆನಂದ್ ರಾಮ್‌ ಮುಖಾಂತರ ಅಪ್ಪು ಕನಸು ನನಸಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!