
ಭಾರತೀಯ ಚಿತ್ರರಂಗದಲ್ಲಿ ದೊಡ್ಡ ದಾಖಲೆ ಮಾಡಿದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ (Pushpa). ಟಾಲಿವುಡ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯಾಗಿ ನಟಿಸಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. ದೊಡ್ಡ ದಾಖಲೆ ಮೇಲೆ ದಾಖಲೆ ಮಾಡಿರುವ ಈ ಸಿನಿಮಾ, ಇದೀಗ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗುತ್ತಿದೆ. ಈ ಮೂಲಕ ಸಿನಿ ರಸಿಕರ ಮನಸ್ಸಿಗೆ ಇನ್ನೂ ಹತ್ತಿರವಾಗಲು ಚಿತ್ರತಂಡ ರೆಡಿ ಆಗುತ್ತಿದೆ.
ಹೌದು! ಇದೇ ಜನವರಿ 7ರಂದು ಅಮೇಜಾನ್ ಪ್ರೈಮ್‌ನಲ್ಲಿ (Amazon Prime) ಪುಷ್ಪ ಸಿನಿಮಾ ಬಿಡುಗಡೆ ಆಗುತ್ತಿದೆ. ಸುಕುಮಾರ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಅಮೇಜಾನ್ ಪ್ರೈಮ್ ಸಬ್‌ಸ್ಕ್ರೈಬ್ ಮಾಡಿರುವವರು ನೋಡಬಹುದು. 240 ದೇಶಗಳಲ್ಲಿ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆ ಆಗುತ್ತಿದೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮಿಡಿಯಾ ಸಹ ನಿರ್ಮಾಣದಲ್ಲಿ ರೆಡಿಯಾಗಿರುವ ಈ ಸಿನಿಮಾದಲ್ಲಿ ಕನ್ನಡಿಗರ ಹೆಮ್ಮಯ ನಟ ರಾಕ್ಷಸ ಡಾಲಿ ಧನಂಜಯ್ (Doly Dhananjay) ಸಹ ನಟಿಸಿದ್ದಾರೆ.
ಲಾರಿ ಡ್ರೈವರ್ ಪುಷ್ಪ ರಾಜು (Pushpa Raju) ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಚಂದನದ ಮರಗಳನ್ನು ಕಳ್ಳಸಾಗಾಣಿಯಲ್ಲಿ ರಾಜು ತೊಡಗಿಸಿಕೊಂಡಿದ್ದು, ಈ ಭಾಗದಲ್ಲಿ ಬರೀ ಕಳ್ಳಸಾಗಾಣಿ ಸಾಮ್ರಾಜ್ಯ ಹೇಗಿರುತ್ತದೆ? ಅದಕ್ಕೆ ಪೊಲೀಸರ ಭದ್ರತೆ ಹೇಗಿರಲಿದೆ? ಎಂದು ಚಿತ್ರದಲ್ಲಿ ತೋರಿಸಲಾಗಿದೆ. 'ಆ್ಯಕ್ಷನ್ ತುಂಬಿದ ಮನರಂಜಕ ಪುಷ್ಪಾ: ದಿ ರೈಸ್- ಭಾಗ 1 ಅನ್ನು ಪ್ರೈಮ್ ವಿಡಿಯೋದಲ್ಲಿ ವಿಶ್ವಾದ್ಯಂತ ಸ್ಟ್ರೀಮಿಂಗ್ ಪ್ರೀಮಿಯರ್ ಮಾಡುವ ಮೂಲಕ ನಮ್ಮ ವೀಕ್ಷಕರಿಗೆ ಹೊಸ ವರ್ಷಕ್ಕೆ ರೋಮಾಂಚಕ ಆರಂಭವನ್ನು ನೀಡಲು ನಾವು ಉತ್ಸುಕರಾಗಿದ್ದೇವೆ,' ಎಂದು ಪ್ರೈಮ್ ವಿಡಿಯೋ ಭಾರತದ ಕಂಟೆಂಟ್ ಲೈಸೆನ್ಸಿಂಗ್ ಮುಖ್ಯಸ್ಥ ಮನೀಶ್ ಮೆಂಘಾನಿ ಹೇಳಿದ್ದಾರೆ.
'ಮೊದಲನೆಯದಾಗಿ, ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಅವರ ಪ್ರೀತಿ ಮತ್ತು ಮೆಚ್ಚುಗೆಗಾಗಿ ಮತ್ತು ಈ ಚಿತ್ರವನ್ನು ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಮಾಡಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇದು ಭಾರತದ ಹೃದಯ ಭಾಗದಲ್ಲಿ ನಡೆಯುವ ಕಥೆ. ವೀಕ್ಷಕರನ್ನು ರಕ್ತ ಚಂದನದ ಕಳ್ಳಸಾಗಣೆ, ಕಡಿವಾಣ ಕಾರ್ಯಾಚರಣೆಯ ಲೋಕಕ್ಕೆ ಕೊಂಡೊಯ್ಯುವ ಆಲೋಚನೆ ಕೆಲವು ದಿನಗಳಿಂದ ನನ್ನಲ್ಲಿತ್ತು. ಚಲನಚಿತ್ರವು ಒಳ್ಳೆಯದು ಮತ್ತು ಕೆಟ್ಟದ್ದರಿಂದ ದೂರ ನಿಂತು ರೋಲರ್-ಕೋಸ್ಟರ್ ಆ್ಯಕ್ಷನ್ ಮತ್ತು ಡ್ರಾಮಾ ರೈಡ್ ಅನ್ನು ನೀಡುತ್ತದೆ ಎಂಬ ಅಂಶವನ್ನು ವೀಕ್ಷಕರು ಮೆಚ್ಚುತ್ತಾರೆ, ಎಂದು ನಾನು ನಂಬುತ್ತೇನೆ. ಬಲವಾದ ಕಥೆ ಮತ್ತು ಪ್ರತಿಭಾವಂತ ಪಾತ್ರ ವರ್ಗದ ಅದ್ಭುತ ನಟನೆಯು ಪ್ರಪಂಚದಾದ್ಯಂತದ ವೀಕ್ಷಕರಿಗೆ ಅದ್ಭುತ ಅನುಭವವನ್ನು ನೀಡುತ್ತದೆ,' ಎಂದು ನಿರ್ದೇಶಕ ಸುಕುಮಾರ್ (Sukumar) ಹೇಳಿದ್ದಾರೆ.
ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್' ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹ 300 ಕೋಟಿ ಗಳಿಸಿದ್ದು, ನಂತರ 2021 ರಲ್ಲಿ ಭಾರತದಲ್ಲಿ ಅತ್ಯಧಿಕ ಲಾಭ ಗಳಿಸಿದ ಸಿನಿಮಾ ಆಗಿದೆ. 'ಪುಷ್ಪಾ: ದಿ ರೈಸ್' ಸಿನಿಮಾ ಹಿಂದಿ ಭಾಷೆಯಲ್ಲಿ ₹ 70 ಕೋಟಿಗೂ ಹೆಚ್ಚು ಗಳಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಹಿಂದಿಯಲ್ಲಿ ಯಾವುದೇ ಪ್ರಚಾರವಿಲ್ಲದೆ ಭರ್ಜರಿ ಗಳಿಕೆ ಮಾಡಿದ ಸಿನಿಮಾ ಹೊಸ ನಿರೀಕ್ಷೆ ಹುಟ್ಟುಹಾಕಿದೆ. ಸಿನಿಮಾ ರಿಲೀಸ್ ಆಗಿ ಮೂರನೇ ವಾರಾಂತ್ಯದಲ್ಲಿ 33.75 ಕೋಟಿ ರೂ. ನಂತರ 34.80 ಕೋಟಿ ರೂ ಗಳಿಸಿದೆ. ಅಲ್ಲು ಅರ್ಜುನ್ ಅಭಿನಯದ ಸಿನಿಮಾ ಈಗ ಹದಿನೇಳು ದಿನಗಳ ಬಾಕ್ಸ್ ಆಫೀಸ್ ರನ್‌ನಲ್ಲಿ 270 ಕೋಟಿ ರೂ ಗಳಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.