
ತುಂಬಿ ಗರ್ಭಿಣಿ, ದೇಹಕ್ಕೆ ಬಾಂಬು ಸುತ್ತಿಕೊಂಡು, ಕೈಯಲ್ಲಿ ವೈರ್ ಲೆಸ್ ಜತೆಗೆ ಪಿಸ್ತೂಲು ಹಿಡಿದು ಕೂತಿರುವ ಯಜ್ಞಾ ಶೆಟ್ಟಿ ಅವರ ಲುಕ್ಕು ಸಾಕಷ್ಟು ಕುತೂಹಲ ಮೂಡಿಸಿದೆ. ಅಲ್ಲದೆ ಚಿತ್ರಕ್ಕಿಟ್ಟಿರುವ ಹೆಸರು ಕೂಡ ಭಿನ್ನವಾಗಿದೆ.
ಕಿಚ್ಚನ ಹೆಗಲೇರಿದ ದರ್ಶನ್ ಪುತ್ರ; ಫೋಟೋ ವೈರಲ್!
ಇದು ಮಂಸೋರೆ ಅವರ ಮೂರನೇ ಚಿತ್ರವಾಗಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಕಥೆಗೆ ಪೂರಕವಾಗಿ ಆಕ್ಟ್-೧೯೭೮ ಎನ್ನುವ ಹೆಸರು ಇಡಲಾಗಿದೆ.ಯಜ್ಞಾಶೆಟ್ಟಿ ಸೇರಿದಂತೆ ಬಿ.ಸುರೇಶ್ ಪ್ರಮೋದ್ ಶೆಟ್ಟಿ, ಹಿರಿಯ ಕಲಾವಿದೆ ಶ್ರುತಿ, ದತ್ತಣ್ಣ, ಅಚ್ಯುತ ಕುರ್ಮಾ, ಅವಿನಾಶ್, ಶೋಭರಾಜ್, ಸುಧಾ ಬೆಳವಾಡಿ, ಕವಲುದಾರಿ ಖ್ಯಾತಿಯ ಸಂಪತ್
ಮೈತ್ರೇಯ, ಶರಣ್ಯ ಮುಂತಾದವರು ನಟಿಸಿದ್ದಾರೆ.
ದೇವರಾಜ್ ಆರ್. ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕರ ಜತೆಗೆ ದಯಾನಂದ್ ಟಿ ಕೆ, ವೀರು ಮಲ್ಲಣ್ಣ ಅವರು ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ನಾತಿಚರಾಮಿ ಚಿತ್ರದ ನಂತರ ಮಂಸೋರೆ ಈ ಆಕ್ಟ್-1978 ಚಿತ್ರವನ್ನು ನಿರ್ದೇಶಿಸಿದ್ದಾರೆ. ನನ್ನತನವನ್ನು ಉಳಿಸಿಕೊಂಡು ನನಗಿದ್ದ ಇತಿಮಿತಿಗಳನ್ನು ಮೀರಿ ದೊಡ್ಡ ಕ್ಯಾನ್ವಾಸಿನ ಚಿತ್ರವೊಂದನ್ನು ನಿರ್ದೇಶನ ಮಾಡಿದ ಖುಷಿಯ ಜೊತೆಗೆ ಜವಾಬ್ದಾರಿಯೂ ಹೆಚ್ಚಿದೆ. ಆಕ್ಟ್-1978 ಒಂದು ಸೋಷಿಯಲ್ ಥ್ರಿಲ್ಲರ್ ಸಿನೆಮಾ. ಚಿತ್ರೀಕರಣ ಮುಗಿಸಿದ ಬೆನ್ನಲ್ಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಮೋಷನ್‌ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇವೆ... ಇದು ಮಂಸೋರೆ ತಮ್ಮ ಚಿತ್ರದ ಕುರಿತು ಹೇಳುವ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.