
ಈ ಸಂಬಂಧ ಅಗರ ಕೆರೆ ಸಮಿತಿ ಸದಸ್ಯೆ ಕವಿತಾ ರೆಡ್ಡಿ ಹಾಗೂ ಅನಿಲ್ ರೆಡ್ಡಿ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕ್ರೇಜಿ ಬೈಕ್ ಸಾಹಸ ಮಾಡಿದ ಸಂಯುಕ್ತಾ; ಬೆಚ್ಚಿಬಿದ್ದ ನೆಟ್ಟಿಗರು!
ಶುಕ್ರವಾರ ಸಂಯುಕ್ತ ಹೆಗಡೆ ಅಗರ ಕೆರೆಯ ಪಾರ್ಕ್ನಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಕವಿತಾ ರೆಡ್ಡಿ ತುಂಡು ಬಟ್ಟೆತೊಟ್ಟು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದೀರಾ ಎಂದು ಸಂಯುಕ್ತ ಹೆಗಡೆ ಬಳಿ ಜಗಳ ತೆಗೆದಿದ್ದರು. ಈ ವೇಳೆ ಕೆಲವರು ಸಂಯುಕ್ತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಂಪೂರ್ಣ ಘಟನೆಯನ್ನು ತೊಟ್ಟಬಟ್ಟೆಯಲ್ಲೇ ಸಂಯುಕ್ತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.
"
ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನು ಕಳುಹಿಸಿದ್ದರು. ಇದೀಗ ಸಂಯುಕ್ತ ಹೆಗಡೆ ಪರವಾಗಿ ಟ್ವಿಟರ್ ಹ್ಯಾಷ್ ಟ್ಯಾಗ್ ಟ್ರೇಡಿಂಗ್ ಪ್ರಾರಂಭಗೊಂಡಿದೆ. ಸೆಲೆಬ್ರಿಟಿಗಳು ಸಂಯುಕ್ತ ಹೆಗಡೆ ಪರವಾಗಿ ಪ್ರತಿಕ್ರಿಯಿಸಿ ಟ್ವಿಟ್ ಮಾಡುತ್ತಿದ್ದಾರೆ. ಸುಖ-ಸುಮ್ಮನೆ ಸಂಯುಕ್ತ ವಿರುದ್ಧ ಈ ರೀತಿ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ದೂರು ನೀಡಿದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಸಂಯುಕ್ತ ಹೆಗಡೆ, ನನಗೆ ಆದ ರೀತಿಯಲ್ಲಿ ಯಾರಿಗೂ ಕಿರುಕುಳ ನೀಡಬಾರದು. ಈ ಸಂಬಂಧ ಕವಿತಾ ರೆಡ್ಡಿ ಹಾಗೂ ಅನಿಲ್ ರೆಡ್ಡಿ ಎಂಬುವರ ವಿರುದ್ಧ ದೂರು ದಾಖಲಿಸಿದ್ದೇನೆ. ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. ಎಲ್ಲಾ ವಿಡಿಯೋ ರೆಕಾರ್ಡಿಂಗನ್ನು ಪೊಲೀಸರಿಗೆ ಸಾಕ್ಷ್ಯ ಸಮೇತ ನೀಡಿದ್ದೇನೆ ಎಂದು ತಿಳಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.