ಸೌಂದರ್ಯಾ ಬಯೋಪಿಕ್‌ನಲ್ಲಿ ನಟಿಸುವಾಸೆ: ರಶ್ಮಿಕಾ ಮಂದಣ್ಣ

Published : Sep 18, 2021, 12:43 PM ISTUpdated : Sep 18, 2021, 12:46 PM IST
ಸೌಂದರ್ಯಾ ಬಯೋಪಿಕ್‌ನಲ್ಲಿ ನಟಿಸುವಾಸೆ: ರಶ್ಮಿಕಾ ಮಂದಣ್ಣ

ಸಾರಾಂಶ

ದಿವಂಗತ ನಟಿ ಸೌಂದರ್ಯಾ ಬಯೋಪಿಕ್‌ನಲ್ಲಿ ನಟಿಸುವ ಆಸೆ ವ್ಯಕ್ತ ಪಡಿಸಿದ ನ್ಯಾಷನಲ್ ಕ್ರಶ್. ಸೌಂದರ್ಯರಂಥ ಪ್ರತಿಭಾನ್ವಿತ ನಟಿ ಪಾತ್ರಕ್ಕೆ ಜೀವ ತುಂಬೋ ಶಕ್ತಿ ರಶ್ಮಿಕಾಗಿದ್ಯಾ, ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು.   

ಸ್ಯಾಂಡಲ್‌ವುಡ್‌ ಸಾನ್ವಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು 90ರ ದಶಕದ ಖ್ಯಾತ ನಟಿ ಸೌಂದರ್ಯಾ ಬಯೋಪಿಕ್‌ನಲ್ಲಿ ನಟಿಸಬೇಕು ಎನ್ನುವ ಆಶಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಖ್ಯಾತ ಅಭಿನೇತ್ರಿ ಸೌಂದರ್ಯಾ ಕನ್ನಡದ ಅದ್ಭುತ ನಟಿಯಾಗಿದ್ದು, ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸಿದ್ದರು. ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ವಿಮಾನ ದುರಂತದಲ್ಲಿ ಕೊನೆಯುಸಿರೆಳೆದಿದ್ದು ಮಾತ್ರ ದುರಂತ. 

‘ನೀನು ನಟಿ ಸೌಂದರ್ಯಾ ರೀತಿಯೇ ಇದ್ದೀಯಾ ಎಂದು ಅಪ್ಪ ಯಾವಾಗಲೂ ಹೇಳ್ತಿದ್ರು. ನನ್ನ ಹಾಗೂ ಸೌಂದರ್ಯಾ ನಡುವೆ ಬಹಳ ಹೋಲಿಕೆ ಇದೆ ಅಂತ ಬೇರೆಯವರೂ ಹೇಳಿದ್ದಾರೆ. ಸೌಂದರ್ಯಾ ಅವರು ಮಾಡಿರುವ ಸಿನಿಮಾಗಳು ನನಗಿಷ್ಟ. ಒಂದೊಳ್ಳೆ ಸ್ಕ್ರಿಪ್ಟ್ ಮಾಡ್ಕೊಂಡು ಆಕೆಯ ಬಯೋಪಿಕ್‌ ಮಾಡೋದಾದರೆ ಅದರಲ್ಲಿ ಅಭಿನಯಿಸಲು ನಾನು ರೆಡಿ,’ ಎಂದು ಅವರು ಹೇಳಿದ್ದಾರೆ.

ಕನ್ನಡ ಸೇರಿ ಮಲಯಾಳಂ, ತಮಿಳು, ತೆಲಗೂ ಚಿತ್ರಗಳಲ್ಲಿಯೂ ನಟಿಸಿದ್ದ ಸೌಂದರ್ಯ ಅವರ ಅಭಿನಯ ನೋಡಲು ದ್ವೀಪ ಹಾಗೂ ಆಪ್ತಮಿತ್ರ ಚಿತ್ರಗಳನ್ನು ನೋಡಬೇಕು. ಸೌಂದರ್ಯಾಕ್ಕೆ ತಕ್ಕಂತೆ ಅವರಲ್ಲಿನ ಕಲಾವಂತಿಕೆಯೂ ಸಿನಿ ಪ್ರೇಮಿಗಳು ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ದಶಕಗಳು ಕಳೆದರೂ ಕನ್ನಡಿಗರ ಮನದಲ್ಲಿ ಸೌಂದರ್ಯಾಗೆ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. 

ರಶ್ಮಿಕಾ ಹಿಂದಿಕ್ಕಿದ ಪೂಜಾ ಹೆಗ್ಡೆ... ಕಿರಿಕ್ ಬೆಡಗಿಗೆ ಬೇಡಿಕೆ ಕಡಿಮೆ ಆಯ್ತಾ?

ಕೆಲವು ದಿನಗಳ ಹಿಂದೆ ನಟಿ ಸಾಯಿ ಪಲ್ಲವಿ ಸೌಂದರ್ಯಾ ಬಯೋಪಿಕ್‌ಮಲ್ಲಿ ನಟಿಸುತ್ತಾರೆಂಬ ಸುದ್ದಿ ಹರಡಿತ್ತು. ಇಬ್ಬರೂ ಸ್ಟಾರ್ ನಟಿಯರೇ ಆದರೆ ಕಥೆ ಮಾಡಲು ಯಾವ ಡೈರೆಕ್ಟರ್ ಮುಂದು ಬರುತ್ತಾರೆ ಎಂದು ನೋಡಬೇಕಿದೆ. 

ಬಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದು, ಯಾವ ಕನ್ನಡ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ