ರಾಗಿಣಿ ದ್ವಿವೇದಿ ಹೆಸರು ರಿವೀಲ್ ಮಾಡಿದ ರವಿಶಂಕರ್‌; ಲೋಕೇಷನ್‌ ಟ್ರ್ಯಾಕ್‌ ಮಾಡಿದ ಸಿಸಿಬಿ

By Suvarna News  |  First Published Sep 3, 2020, 9:11 AM IST

ಚಿತ್ರರಂಗದಲ್ಲಿರುವ ನಶೆ  ಘಾಟಿಗೆ ಸಕ್ಕಿತ್ತು ಮತ್ತೊಂದು ಟ್ವಿಸ್ಟ್‌. ತುಪ್ಪದ ಹುಡುಗಿ ರಾಗಿಣಿ ಹೆಸರು ಹೇಳಿಬಿಟ್ಟ ಪೆಡ್ಲರ್‌ ರವಿಶಂಕರ್?
 


ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡ ಚಿತ್ರರಂಗದ ನಟ-ನಟಿಯರು ಡ್ರಗ್ಸ್‌ ನಂಟಿರುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ನಟಿ ರಾಗಿಣಿ ಸ್ನೇಹಿತ ರವಿಶಂಕರ್‌ನನ್ನು ವಶಕ್ಕೆ ಪಡೆದುಕೊಂಡ  ಸಿಸಿಬಿ ತನಿಖೆ ನಡೆಸುತ್ತಿದೆ. ಈ ಸಮಯದಲ್ಲಿ ನಟಿ ರಾಗಿಣಿ ಹೆಸರನ್ನು ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. 

"

Tap to resize

Latest Videos

ತುಪ್ಪದ ಬೆಡಗಿಗೆ‌ ಡ್ರಗ್ಸ್ ಘಾಟು;  ಗೆಳೆಯನ  ವಿಚಾರಣೆ, ರಾಗಿಣಿಗೆ ನೋಟಿಸ್

ಯಲಹಂಕದ ಜ್ಯೂಡಿಷಿಯಲ್  ನಿವಾಸಿಯಾಗಿರುವ ರಾಗಿಣಿ, ರವಿಂಕರ್‌ ಲಾಕ್‌ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ತನ್ನ ಬುಡಕ್ಕೆ ಬರುತ್ತದೆ ಎಂದು ಎಸ್ಕೇಪ್‌ ಆಗಿದ್ದಾರೆ ಎನ್ನಲಾಗಿದೆ. ಆದರೆ ಮೊಬೈಲ್‌ ಲೋಕೇಷನ್‌ ಅಲ್ಲಿಯೇ ತೋರಿಸುತ್ತಿರುವ ಕಾರಣ ಸಿಸಿಬಿ ನಿವಾಸಕ್ಕೆ ತೆರಳಿ ನೋಟಿಸ್‌ ನೀಡಿದ್ದಾರೆ. ಸಿಸಿಬಿ ಅಧಿಕಾರಿಗಳು ತುಂಬಾ ಹೊತ್ತು ಮನೆಯ ಬಳಿ ಕಾದರೂ ಬಾಗಿಲು ತೆರೆಯದ ಕಾರಣ ವಾಟ್ಸಪ್‌ನಲ್ಲಿ ಕಳುಯಹಿಸಲಾಗಿದೆ. ಮೆಸೇಜ್‌ ಮೂಲಕ ಬಂದಿರುವ ನೋಟಿಸ್‌ ನೋಡಿದ್ದಾರೆ, ಬ್ಲೂ  ಟಿಕ್‌ ಬಂದಿದೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಎನ್ನಲಾಗುತ್ತಿದೆ.

ಸಿಸಿಬಿ ನೀಡಿರುವ ನೋಟಿಸ್‌ ಪ್ರಕಾರ ರಾಗಿಣಿ ಇಂದು 10 ಗಂಟೆಗೆ ವಿಚಾರಣೆಗೆ ಹಾಜರಾಗಬೇಕಿದೆ. ಬೆಂಗಳೂರಿನಲ್ಲಿ ರಾಗಿಣಿ ಎರಡು ಮನೆಗಳನ್ನು ಹೊಂದಿದ್ದಾರೆ. ಒಂದು ಯಲಹಂಕದಲ್ಲಿ ಹಾಗೂ ಮತ್ತೊಂದು ಹೆಸ್‌ ಎಸ್‌ ಆರ್‌ ಲೇಟೌನ್‌ನಲ್ಲಿ ಎನ್ನಲಾಗಿದೆ. ಆರ್‌ಟಿಓ ಸಿಬ್ಬಂದಿಯಾಗಿರುವ ರವಿಶಂಕರ್‌ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಮಧ್ಯಾಹ್ನ ವಿಚಾರ ತಿಳಿಯುತ್ತಿದ್ದಂತೆ ರಾಗಿಣಿ ಎಸ್ಕೇಪ್ ಆಗಿದ್ದಾರೆ. 

ಗಾಂಜಾ ಲೀಗಲೈಸ್ ಮಾಡಿ ಎಂದ ಸ್ಯಾಂಡಲ್‌ವುಡ್ ನಟ..!

ಸುವರ್ಣ ನ್ಯೂಸ್‌ಗೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಗಿಣಿ ಅವರ ಹೆಸರನ್ನು ಇಂದ್ರಜಿತ್ ಲಂಕೇಶ್‌ ಹೇಳಿಲ್ಲ. ಆದರೆ ರವಿಶಂಕರ್‌ ರಾಗಿಣಿ ಜೊತೆ ಎರಡು-ಮೂರು ಬಾರಿ ಪಾರ್ಟಿ ಮಾಡಿರುವ ಕಾರಣ ಹೆಸರು ಹೇಳಿದ್ದಾರೆ ಎನ್ನಲಾಗಿದೆ. ವಿಚಾರಣೆಗೆ ರಾಗಿಣಿ ವಕೀಲರ ಸಮೇತ ಹಾಜರಾಗಲಿದ್ದಾರೆ.

click me!