ನಿಶಾಂತ್ ಹಾಗೂ ಸೋನು ಗೌಡ ನಾಯಕ ನಾಯಕಿಯಾಗಿ ನಟಿಸಿರುವ ವಿಕ್ರಂ ಪ್ರಭು ನಿರ್ದೇಶನ, ನಿರ್ಮಾಣದ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ಉಪೇಂದ್ರ ಮತ್ತೆ ಬಾ ಸಿನಿಮಾ ನಂತರ ನಟಿ ಪ್ರೇಮಾ ಲಾಯರ್ ಪಾತ್ರದಲ್ಲಿ ನಾಲ್ಕು ವರ್ಷಗಳ ನಂತರ ಕಾಣಿಸಿಕೊಳ್ಳುತ್ತಿದ್ದಾರೆ.
ಪುಣೆಯ ಫಿಲಂ ಇನ್ಸ್‌ಟಿಟ್ಯೂಟ್ ವಿದ್ಯಾರ್ಥಿ ವಿಕ್ರಂ ಪ್ರಭು (Vikaram Prabhu) ನಿರ್ದೇಶನ, ನಿರ್ಮಾಣದ ಚಿತ್ರ 'ವೆಡ್ಡಿಂಗ್ ಗಿಫ್ಟ್' (Wedding Gift). ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekar) ಆರಂಭ ಫಲಕ ತೋರಿದರು. ನಟಿ ಪ್ರೇಮಾ ಕ್ಯಾಮರಾ ಚಾಲನೆ ಮಾಡಿದರು. ನಿಶಾಂತ್ (Nishant) ಹಾಗೂ ಸೋನು ಗೌಡ (Sonu Gowda) ನಾಯಕ ನಾಯಕಿಯಾಗಿರುವ ಈ ಚಿತ್ರದಲ್ಲಿ 'ಉಪೇಂದ್ರ ಮತ್ತೆ ಬಾ' ಸಿನಿಮಾ ನಂತರ ನಟಿ ಪ್ರೇಮಾ (Prema) ಲಾಯರ್ ಪಾತ್ರದಲ್ಲಿ ನಾಲ್ಕು ವರ್ಷಗಳ ನಂತರ ಕಾಣಿಸಿಕೊಳ್ಳುತ್ತಿದ್ದಾರೆ. ವಿಷಮ ದಾಂಪತ್ಯ, ಸ್ವಾರ್ಥಕ್ಕಾಗಿ ಕಾನೂನಿನ ದುರ್ಬಳಕೆ ಇತ್ಯಾದಿ ಅಂಶಗಳನ್ನು ಈ ಚಿತ್ರ ಒಳಗೊಂಡಿದೆ.
ನಟಿ ಸೋನು ಗೌಡ 'ವೆಡ್ಡಿಂಗ್ ಗಿಫ್ಟ್' ರೆಡಿಯಾಗುತ್ತಿದೆ!
ನಾನು ಕಳೆದ ಕೆಲವು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಕಾರ್ಯ ನಿರ್ವಹಿಸಿದೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ನಾನೇ ಕಥೆ ಬರೆದಿದ್ದು, ನಿರ್ಮಾಣವನ್ನು ಮಾಡುತ್ತಿದ್ದೇನೆ. ನಮ್ಮ ಚಿತ್ರದ ಶೀರ್ಷಿಕೆ ಕೇಳುತ್ತಿದ್ದ ಹಾಗೆ, ಕೌಟುಂಬಿಕ ಚಿತ್ರ ಅನಿಸಬಹುದು. ಆದರೆ, ಡಾರ್ಕ್ ಶೇಡ್ ಕತೆಯುಳ್ಳ ಈ ಸಿನಿಮಾ ಇಂದಿನ ಸಮಾಜದ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಬೆಂಗಳೂರು, ಚಿಕ್ಕಮಗಳೂರು, ಮಂಗಳೂರಿನಲ್ಲಿ ನಲವತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ ಎಂದು ವಿಕ್ರಂ ಪ್ರಭು ತಿಳಿಸಿದ್ದಾರೆ. ಹಾಗೂ ಕಾನ್ಫಿಡಾದಲ್ಲಿ ನಿರ್ದೇಶನ ತರಬೇತಿ ಹಾಗೂ ZIMAದಲ್ಲಿ ಸಂಕಲನ ಕಾರ್ಯದ ಬಗ್ಗೆ ವಿಕ್ರಂ ಪ್ರಭು ತಿಳಿದುಕೊಂಡಿದ್ದಾರೆ.
ನಾನು ಈವರೆಗೂ ಮಾಡಿರದ ಪಾತ್ರ ಸಿಗಬೇಕು ಅಂದುಕೊಳ್ಳುತ್ತಿದೆ. ಈ ಚಿತ್ರದಲ್ಲಿ ಸಿಕ್ಕಿದೆ. ಗಂಡ-ಹೆಂಡತಿಯಲ್ಲಿ ಯಾವತ್ತೂ ನನ್ನದು ಎನ್ನುವುದು ಬರಕೂಡದು. ನಮ್ಮದು ಅಂತ ಇರಬೇಕು. ಯಾವಾಗ ನನ್ನದು ಅಂತ ಬರುತ್ತದೆಯೋ, ಆಗ ಅವರಿಬ್ಬರ ನಡುವೆ ಏನಾಗುತ್ತದೆ. ಎಂಬುದೇ ಕಥಾಹಂದರ. ನನಗೆ ಈ ಪಾತ್ರ ತುಂಬಾ ಇಷ್ಟವಾಯಿತು. ಎಲ್ಲರಿಗೂ ಹಿಡಿಸಲಿದೆ ಎಂಬ ನಂಬಿಕೆಯಿದೆ ಎಂದು ಚಿತ್ರದ ನಾಯಕಿ ಸೋನು ಗೌಡ ಹೇಳಿದರು. ನಾನು ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‌ನಲ್ಲಿ ಅಭಿನಯ ತರಬೇತಿ ಪಡೆದಿದ್ದೇನೆ. ಮಲೆಯಾಳಂ ಸೇರಿದಂತೆ ವಿವಿಧ ಭಾಷೆಗಳ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಮೊದಲ ಚಿತ್ರ. ಕಥೆ ತುಂಬಾ ಇಷ್ಟವಾಯಿತು. ವಿಲಾಸ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಚಿತ್ರದ ನಾಯಕ ನಿಶಾಂತ್ ತಿಳಿಸಿದರು.
ನನ್ನ ಎರಡನೇ ಮದುವೆ ಸುದ್ದಿ ಸುಳ್ಳು: ಪ್ರೇಮಾ ಸ್ಪಷ್ಟನೆ
ನಟಿ ಯಮುನಾ ಶ್ರೀನಿಧಿ ಹೋರಾಟಗಾರ್ತಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನನಗೆ ಒಳ್ಳೆಯ ಪಾತ್ರವಿದೆ. ಆರಂಭದಲ್ಲಿ ನನಗೆ ಬೇರೊಂದು ಪಾತ್ರಕ್ಕೆ ಆಡಿಷನ್ ಮಾಡಿದ್ದರು. ನಂತರ ನನಗೆ ಬೇರೆಯದೇ ಪಾತ್ರ ನೀಡಿದರು. ನಮ್ಮ ಕನ್ನಡ ಚಿತ್ರರಂಗ ನನ್ನನ್ನು ಯಾವುದಕ್ಕೂ ಬ್ರ್ಯಾಂಡ್ ಅಂತ ಮಾಡಿಲ್ಲ. ತುಂಬ ವಿಭಿನ್ನವಾದ ಪಾತ್ರಗಳನ್ನೇ ನನಗೆ ನೀಡಿದ್ದಾರೆ. ಅದಕ್ಕಾಗಿ ನಮ್ಮ ಕನ್ನಡ ಚಿತ್ರರಂಗಕ್ಕೆ ನಾನು ಎಂದೆಂದಿಗೂ ಚಿರಋಣಿ ಆಗಿರುತ್ತೇನೆ ಎಂದು ಹೇಳಿದರು. ಇನ್ನು ಈ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸಂಜಯ್ ಶರ್ಮ, ಅಭಯ್ ದೇವ್ ಪುರಿ, ಅಶೀಶ್ ಪಾವಸ್ಕರ್ ಬರೆದಿದ್ದು, ಸತೀಶ್ ಹೆಚ್ ವಿ ಹಾಗೂ ಆಂಟೋನಿ ಎ ಈ ಚಿತ್ರದ ಸಹ ನಿರ್ದೇಶಕರು. ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ಬಾಲಚಂದ್ರ ಪ್ರಭು ಸಂಗೀತ ಸಂಯೋಜಿಸಲಿದ್ದಾರೆ. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಗೀತರಚನೆ ಹಾಗೂ ಉದಯಲೀಲಾ ಅವರ ಕ್ಯಾಮೆರಾ ಕೈಚಳಕ ಸೇರಿದಂತೆ ವಿಜೇತ್ ಚಂದ್ರ ಸಂಕಲನ 'ವೆಡ್ಡಿಂಗ್ ಗಿಫ್ಟ್' ಚಿತ್ರಕ್ಕಿದೆ.