ಟ್ರೋಲಿಗರಿಗೆ ಯೂಟ್ಯೂಬ್‌ ವಿಡಿಯೋ ಮೂಲಕ ಖಡಕ್ ಉತ್ತರ ಕೊಟ್ಟ ಮೇಘನಾ ರಾಜ್

By Vaishnavi Chandrashekar  |  First Published Jan 8, 2023, 5:43 PM IST

 ಅಭಿಮಾನಿಗಳು ಪದೇ ಪದೇ ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟ ಮೇಘನಾ ರಾಜ್. ಯೂಟ್ಯೂಬ್ ವಿಡಿಯೋಗಳು ವೈರಲ್.... 


ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ಕೆಲವು ದಿನಗಳಿಂದ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಈಗಾಗಲೆ ಅಪ್ಲೋಡ್ ಆಗಿರುವ ಎರಡು ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮೇಘನಾಗೆ ಪದೇ ಪದೇ ವಿವಿಧ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಮೂಲಕ ಎಲ್ಲರಿಗೂ ಉತ್ತರ ಕೊಟ್ಟಿದ್ದಾರೆ. 

'ಇನ್‌ಸ್ಟಾಗ್ರಾಂನಲ್ಲಿ ಇಂಟ್ರೆಸ್ಟಿಂಗ್ ಆಗಿರುವ ಪ್ರಶ್ನೆಗಳನ್ನು ಕೇಳಿ ಉತ್ತರ ಕೊಡುವೆ ಎಂದು ಪೋಸ್ಟ್‌ ಮಾಡಿದ್ದೆ. ನನಗೆ ಸಾಕಷ್ಟ ಪ್ರಶ್ನೆಗಳು ಬಂದಿದೆ ಅದರಲ್ಲಿ ಕೆಲವೊಂದಕ್ಕೆ ಉತ್ತರ ಕೊಡುವೆ' ಎಂದು ಹೇಳುವ ಮೂಲಕ ವಿಡಿಯೋ ಆರಂಭಿಸಿದ್ದಾರೆ.

Tap to resize

Latest Videos

ಪ್ರಶ್ನೆ: ಜೀವನದಲ್ಲಿ ಎಲ್ಲಾ ಕೆಟ್ಟದ್ದು ನಡೆಯುತ್ತಿದೆ ಇದರಿಂದ ಹೇಗೆ ಹೀಲ್ ಆಗುವುದು?
ಮೇಘನಾ ಉತ್ತರ: ಸಲಹೆ ಕೊಡುವಂತೆ ವ್ಯಕ್ತಿ ನಾನಲ್ಲ ಆದರೆ ನನ್ನ ಅನುಭವನ್ನು ಹಂಚಿಕೊಳ್ಳುವೆ. ಏನೇ ಮಾಡಿದ್ದರೂ ಕೆಟ್ಟದಾಗುತ್ತಿದೆ ಅಂದ್ರೆ ಜೀವನದಲ್ಲಿ ನಾವು ರಾಕ್ ಬಾಟಮ್‌ನಲ್ಲಿ ಇದ್ದೀವಿ ಅಂತ ಆಗ ಬೇರೆ ದಾರಿ ಇರುವುದಿಲ್ಲ ಬದಲಿಗೆ ಸರಿಯಾದ ರೀತಿಯಲ್ಲಿ ರೈಸಪ್ ಆಗಬೇಕು. ಎಲ್ಲಾ ಏನೋ ಕೆಟ್ಟದಾಗುತ್ತಿದೆ ಏನೋ ಸರಿ ಇಲ್ಲ ಅಂದ್ರೆ ಸರಿಯಾದ ಸಮಯಕ್ಕೆ ಏನೋ ಒಳ್ಳೆಯದು ಆಗುತ್ತದೆ ಎಂದು ಅರ್ಥ. ಇದು ನನ್ನ ಮಂತ್ರ.

ಪ್ರಶ್ನೆ:  ಮೇಡಂ ನೀವು ಎಲ್ಲಿ ಇದ್ದೀರಿ...
ಮೇಘನಾ ರಾಜ್‌: ಇದು ತುಂಬಾ ಸಿಂಪಲ್ ಪ್ರಶ್ನೆ ಆದರೆ ಯಾಕೆ ಉತ್ತರ ಕೊಡಲು ಮುಖ್ಯ ಅನಿಸಿತ್ತು ಅಂದ್ರೆ ಸದ್ಯಕ್ಕೆ ನಾನು ನನ್ನ ಮನೆಯಲ್ಲಿ ಇದ್ದೀನಿ. ನಮ್ಮ ಮನೆಯಲ್ಲಿರುವ ನನ್ನ ನೆಚ್ಚಿನ ಜಾಗ. ಈ ಬಾಲ್ಕನಿಯಲ್ಲಿ ಹೆಚ್ಚಿಗೆ ಸಮಯ ಕಳೆಯುವುದು. ರಾಯನ್ ಕೆಳಗಡೆ ಆಟ ಆಡುವಾಗ ನಾನು ಇಲ್ಲಿಂದ ನಿಂತುಕೊಂಡು ನೋಡುವೆ.

ಪ್ರಶ್ನೆ: ನೆಕ್ಸಟ್‌ ಯಾವ ಸಿನಿಮಾ ಮಾಡುತ್ತಿದ್ದೀರಾ?
ಮೇಘನಾ ಉತ್ತರ: ಪನ್ನಗಾಭರಣ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನಾನು ಅಭಿನಯಿಸುತ್ತಿರುವೆ. ಚಿತ್ರದ ಟೈಟಲ್ ಮಾತುಕತೆ ನಡೆಯುತ್ತಿದೆ ಒಳ್ಳೆ ದಿನ ನೋಡಿ ಹೆಸರು ಅನೌನ್ಸ್‌ ಮಾಡುತ್ತೀವಿ. 

ಪ್ರಶ್ನೆ: oily ಪಿಂಪಲ್ skin ಕೇರ್ ಟಿಪ್ಸ್‌ ಕೊಡಿ
ಮೇಘನಾ ಉತ್ತರ: ಈ ಸಮಸ್ಯೆ ಸರ್ವೇ ಸಾಮಾನ್ಯ ಆಗಿದೆ. ನಾನು ಕೂಡ ಪಿಂಪಲ್‌ಗಳನ್ನು ಎದುರಿಸಿರುವೆ. ನಮ್ಮ ತ್ವಚೆ ಹೇಗಿದೆ ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕು ಆನಂತರ ವೈದ್ಯರ ಸಂಪರ್ಕ ಮಾಡಬೇಕು. ಪಿಂಪಲ್ ಒಣಗಿಸುವುದಕ್ಕೆ ಒಂದು ಸಲ್ಯೂಶನ್ ಸಿಗುತ್ತದೆ ಆನ್‌ಲೈನ್‌ನಲ್ಲಿ ಸಿಗುತ್ತದೆ ಅದರಲ್ಲಿ ಇರುವುದು ನಿಮ್ಮ ಸೂಕ್ತನಾ ಎಂದು ಚೆಕ್ ಮಾಡಿಕೊಂಡು ಖರೀದಿ ಮಾಡಬಹುದು. ಇದೆಲ್ಲಾ ಬೇಡ ಅಂದ್ರೆ ಒಳ್ಳೆ ಡಯಟ್ ಫಾಲೋ ಮಾಡಬೇಕು.

2 ವರ್ಷದ ರಾಯನ್‌ಗೆ ಹೊಸ ಕಾರು ಗಿಫ್ಟ್‌ ಕೊಟ್ಟ ಮೇಘನಾ ರಾಜ್; ಬರ್ತಡೇ ವಿಡಿಯೋ ವೈರಲ್

ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ ನಿಮ್ಮ ಫೇವರೆಟ್‌ ಸಿನಿಮಾ
ಮೇಘನಾ ಉತ್ತರ: ಇತ್ತೀಚಿನ ದಿನಗಳಲ್ಲಿ ಖಂಡಿತಾ ಕಾಂತಾರ ಸಿನಿಮಾ. ಕಾನ್ಸೆಪ್ಟ್‌ ತುಂಬಾ ಸಿಂಪಲ್ ಆಗಿರುವ ಸಿನಿಮಾ ಆದರೆ ಬ್ಯೂಟಿಫುಲ್ ಆಗಿ ಮಾಡಿದ್ದಾರೆ. ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅದ್ಭುತವಾಗಿ ಅಭಿನಯಿಸಿದ್ದಾರೆ. 

ಪ್ರಶ್ನೆ: ಸುಮ್ಮನೆ ವೇಸ್ಟ್‌. ನಾರ್ಮಲ್ ಜನರು ಪ್ರಶ್ನೆ ಕೇಳಿದ್ದರೆ ಯಾವ ಸೆಲೆಬ್ರಿಟಿನೂ ಉತ್ತರ ಕೊಡುವುದಿಲ್ಲ
ಮೇಘನಾ ಉತ್ತರ: ಉತ್ತರ ಕೊಡಲು ಇಷ್ಟವಿಲ್ಲ ಅಂದ್ರೆ ಪ್ರಶ್ನೆ ಕೇಳಿ ಅಂತ ಹಾಕುತ್ತಿರಲಿಲ್ಲ. ಕೆಲವೊಂದು ಸಲ ಸಿಂಪಲ್ ಪ್ರಶ್ನೆಗಳು ಇರುತ್ತದೆ. ಇಂಟ್ರೆಸ್ಟಿಂಗ್ ಪ್ರಶ್ನೆಗಳನ್ನು ಕೇಳಿ ಎಂದು ನಾನು ಮೊದಲೇ ಹೇಳಿದ್ದೆ. ಹಲವಾರು ಒಳ್ಳೆ ಪ್ರಶ್ನೆಗಳಿದ್ದಾಗ ಅದಕ್ಕೆ ಪ್ರಾಮುಖ್ಯತೆ ನೀಡುತ್ತೀವಿ.

ಪ್ರಶ್ನೆ: ನನ್ನ ತಾಯಿ ನಿಮ್ಮ ಉದಾಹರಣೆಯಾಗಿ ಕೊಡುತ್ತಾರೆ. ಸಿಂಗಲ್ ಮಹಿಳೆಯರು ಎಷ್ಟು ಸ್ಟ್ರಾಂಗ್ ಆಗಿರಬಹುದು ಎಂದು. 
ಮೇಘನಾ ಉತ್ತರ: ನಿಮ್ಮ ತಾಯಿ ಅವರು ನನ್ನನ್ನು ಉದಾಹರಣೆಯಾಗಿ ತೋರಿಸುತ್ತಿರುವುದೇ ನನಗೆ ದೊಡ್ಡ ಶಕ್ತಿ. ನನ್ನನ್ನು ನೋಡಿ ಕೆಲವರು ಸ್ಟ್ರಾಂಗ್ ಆದರೆ ನನ್ನ ಪ್ರಕಾರ ಬ್ಯಾಟಲ್ ಗೆದ್ದಿರುವೆ ಎಂದು.  ನೀವು ಮತ್ತು ನಿಮ್ಮ ತಾಯಿ ಅವರಂತೆ ಇರುವ ಜನರು ನಾನು ಸ್ಟ್ರಾಂಗ್ ಆಗಿರಲು ಸಹಾಯ ಮಾಡುತ್ತಾರೆ.

ಅಭಿಮಾನಿಗಳ ಒತ್ತಾಯದ ಮೇಲೆ ಯೂಟ್ಯೂಬ್ ಚಾನೆಲ್ ಆರಂಭಿಸಿದ ಮೇಘನಾ ರಾಜ್‌; ಮೊದಲ ವಿಡಿಯೋವಿದು

ಪ್ರಶ್ನೆ:  ನಿಮ್ಮ ಫೇವರೆಟ್ ಕಲರ್ ಮತ್ತು ಆಹಾರ
ಮೇಘನಾ ಉತ್ತರ: ನನ್ನ ಫೇವರೆಟ್ ಕಲರ್‌ ತುಂಬಾ ಇದೆ ಅದರಲ್ಲಿ ಪರ್ಪಲ್‌ ತುಂಬಾ ಇಷ್ಟ ಆಗುತ್ತದೆ. ಮತ್ತೊಂದು ಹೇಳಬೇಕು ಅಂದ್ರೆ ಬ್ಲ್ಯಾಕ್ ಅಥವಾ ವೈಟ್.  ಆಹಾರದಲ್ಲಿ ಮೊಸರನ ಮತ್ತು ಚಿನಕ್ ಫ್ರೈ ತುಂಬಾ ಇಷ್ಟ ಆಗುತ್ತದೆ. ಬೆಂಡೆಕಾಯಿ ಪಲ್ಯನೂ ತುಂಬಾ ಇಷ್ಟವಾಗುತ್ತದೆ ಈ ಮೂರು ಕೊಟ್ಟ ಯಾವಾಗಲೂ ತಿನ್ನುವೆ.

ಪ್ರಶ್ನೆ: ಟ್ರೋಲ್‌ಗಳನ್ನು ಹೇಗೆ ಹ್ಯಾಂಡಲ್‌ ಮಾಡುತ್ತೀರಾ?
ಮೇಘನಾ ಉತ್ತರ: ಯೂಟ್ಯೂಬ್ ಚಾನೆಲ್ ಆರಂಭಿಸುವ ಮೂಲಕ ಟ್ರೋಲ್‌ ಪೇಜ್‌ಗಳನ್ನು ಹ್ಯಾಂಡಲ್‌ ಮಾಡುತ್ತೀನಿ.  ನನ್ನ ಬಗ್ಗೆ ಯೂಟ್ಯೂಬ್‌ಬಲ್ಲಿ ಸಾವಿರಾರು ವಿಚಾರಗಳು ಹರಿದಾಡುತ್ತಿದೆ. 99% ಸುಳ್ಳು ಸುದ್ದಿ ಇರುತ್ತದೆ ಇವುಗಳನ್ನು ಹೇಗೆ ಮ್ಯಾನೇಜ್ ಮಾಡಬೇಕು ಎಂದು ಯೋಚನೆ ಮಾಡಿದೆ ಅದಿಕ್ಕೆ ಸಿಕ್ಕ ಉತ್ತರ ಏನೆಂದರೆ ಯೂಟ್ಯೂಬ್ ಚಾನೆಲ್ ಆರಂಭಿಸುವುದು' 

 

click me!